ಸುಳ್ಯದ ವಿನಯ್‌ಗೆ ಕೇರಳ ಲಾಟರಿಯಲ್ಲಿ 1 ಕೋಟಿ ಬಂಪರ್ ಬಹುಮಾನ

ಸುಳ್ಯ : ಸುಳ್ಯದ ನಿವಾಸಿಯೊಬ್ಬರಿಗೆ ಕೇರಳ ಕೇರಳ ರಾಜ್ಯ ಲಾಟರಿಯಲ್ಲಿ1 ಕೋಟಿ ರೂಪಾಯಿ ಬಂಪರ್ ಬಹುಮಾನ ಗೆದ್ದಿದ್ದಾರೆ.

ಶನಿವಾರ ನಡೆದ ಡ್ರಾದಲ್ಲಿ, OG 445643 ಸಂಖ್ಯೆಯ ಟಿಕೆಟ್ ಸುಳ್ಯ ತಾಲ್ಲೂಕಿನ ಉಬರಡ್ಕದ ವಿನಯ್ ಕ್ಯಾಟರರ್ಸ್ ಮಾಲೀಕ ವಿನಯ್ ಯಾವಟೆ ಅವರಿಗೆ ಅದೃಷ್ಟ ತಂದುಕೊಟ್ಟಿತು. ಅವರು 1 ಕೋಟಿ ರೂಪಾಯಿ ಬಂಪರ್ ಬಹುಮಾನವನ್ನು ತಮ್ಮದಾಗಿಸಿಕೊಂಡರು. ವಿನಯ್ ಕಾಸರಗೋಡಿನ ಪಂಜಿಕಲ್ಲು ಎಂಬಲ್ಲಿ ವಿಜೇತ ಟಿಕೆಟ್ ಖರೀದಿಸಿದ್ದರು.