ಮಹಾವತಾರ ನರಸಿಂಹ ಚಿತ್ರದಿಂದ ಪಾಕಿಸ್ತಾನದ ದೇವಾಲಯ ರಹಸ್ಯ ಬಯಲು

ಹೊಂಬಾಳೆ ಸಂಸ್ಥೆ ನಿರ್ಮಾಣದ ಮಹಾವತಾರ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಭಕ್ತ ಪ್ರಲ್ಹಾದನ ಭಕ್ತಿ ಸಾರುವ, ವಿಷ್ಣುವಿನ ನರಸಿಂಹ ಅವತಾರವನ್ನು ಪರದೆಯ ಮೇಲೆ ನೋಡಿ ಕಣ್ತುಂಬಿಕೊಳ್ಳುತ್ತಿದಾರೆ. ಅಚ್ಚರಿ ವಿಷಯ ಅಂದ್ರೆ, ಈ ಸಿನಿಮಾ ನಂತರ ಪಾಕಿಸ್ತಾನದಲ್ಲಿರುವ ಹಿಂದೂ ದೇವಾಲಯ ವೈರಲ್ ಆಗುತ್ತಿದೆ..

ಹೌದು.. ಈ ದೇವಾಲಯವು ಪಾಕಿಸ್ತಾನದ ಮುಲ್ತಾನ್ ನಗರದಲ್ಲಿದೆ. ಹೋಳಿಕಾ ದಹನ ಪ್ರಾರಂಭವಾದದ್ದು ಇಲ್ಲಿಂದ. ಹೋಳಿ ಭಾರತದ ಅತಿದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಫಾಲ್ಗುಣ ಮಾಸದಲ್ಲಿ ಆಚರಿಸಲಾಗುವ ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಭಾರತದ ಜೊತೆಗೆ, ಭಾರತೀಯರು ವಾಸಿಸುವ ಇತರ ಕೆಲವು ದೇಶಗಳಲ್ಲಿಯೂ ಈ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಅಂತಹ ಹೋಳಿ ಹಬ್ಬಕ್ಕೂ ಮತ್ತು ಪಾಕಿಸ್ತಾನಕ್ಕೆ ಬಹಳ ದೊಡ್ಡ ಸಂಬಂಧವನ್ನು ಹೊಂದಿದೆ ಅಂ ನಿಮನಗೆ ಗೊತ್ತೆ..?
ಯಸ್.. ಪಾಕಿಸ್ತಾನದಲ್ಲಿರುವ ಈ ಸ್ಥಳದಲ್ಲಿ ಒಮ್ಮೆ ಹೋಳಿಯನ್ನು ಒಂಬತ್ತು ದಿನಗಳ ಕಾಲ ಆಚರಿಸಲಾಗುತ್ತಿತ್ತು. ಈಗ ಈ ಸ್ಥಳವು ಬ್ಲಾಕ್‌ಬಸ್ಟರ್ ಚಿತ್ರ ‘ಮಹಾವತಾರ ನರಸಿಂಹ’ದಿಂದಾಗಿ ಮತ್ತೆ ಬೆಳಕಿಗೆ ಬಂದಿದೆ. ಈ ಚಿತ್ರದ ಕೊನೆಯಲ್ಲಿ, ಪಾಕಿಸ್ತಾನದ ಮುಲ್ತಾನ್‌ನಲ್ಲಿರುವ ಪ್ರಹ್ಲಾದಪುರಿ ದೇವಾಲಯದ ಫೋಟೋವನ್ನು ತೋರಿಸಲಾಗಿದೆ. ಅಂದಿನಿಂದ, ಅನೇಕ ಜನರು ಈ ದೇವಾಲಯದ ಬಗ್ಗೆ ತಿಳಿದುಕೊಳ್ಳಲು ಮುಂದಾಗಿದ್ದಾರೆ.
ಭಕ್ತರಾದ ಪ್ರಹ್ಲಾದ, ಹಿರಣ್ಯಕಶಿಪು ಮತ್ತು ಹೋಳಿಕಾ ನಡುವಿನ ಘಟನೆ ಪಾಕಿಸ್ತಾನದಲ್ಲಿ ನಡೆಯಿತು. ಹೋಳಿಕಾ ದಹನ ನಡೆದ ಸ್ಥಳದಲ್ಲಿಯೇ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಸಾವಿರಾರು ವರ್ಷಗಳ ಹಿಂದೆ ಈ ದೇವಾಲಯವನ್ನು ನಿರ್ಮಿಸಲಾದ ಸ್ಥಳವು ಇಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಲ್ತಾನ್ ನಗರದಲ್ಲಿದೆ. ಈ ದೇವಾಲಯದ ಹೆಸರು ಪ್ರಹ್ಲಾದಪುರಿ ದೇವಾಲಯ. ಭಕ್ತ ಪ್ರಹ್ಲಾದನ ಚಿಕ್ಕಮ್ಮ ಹೋಳಿಕಾಳನ್ನು ಈ ಸ್ಥಳದಲ್ಲಿ ಸುಟ್ಟು ಬೂದಿ ಮಾಡಲಾಯಿತು. ಜಾನಪದದ ಪ್ರಕಾರ, ಇದು ಒಂದೇ ಸ್ಥಳವಾಗಿರುವುದರಿಂದ, ಹೋಳಿಕಾ ದಹನವನ್ನು ಮೊದಲು ಅಲ್ಲಿ ಆಚರಿಸಲಾಯಿತು.
ಸಾವಿರ ವರ್ಷಗಳಷ್ಟು ಹಳೆಯದಾದ ಈ ಪ್ರಹ್ಲಾದಪುರಿ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಜನರು 1861 ರಲ್ಲಿ ದೇಣಿಗೆ ಸಂಗ್ರಹಿಸಿದ್ದರು. ನಂತರ, 1947 ರಲ್ಲಿ, ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಸಮಯದಲ್ಲಿ, ಪ್ರಹ್ಲಾದಪುರಿ ದೇವಾಲಯವು ಪಾಕಿಸ್ತಾನಕ್ಕೆ ಹೋಯಿತು. ಆಗಲೂ, ಹೋಳಿ ಹಬ್ಬದ ದಿನದಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ಸೇರುತ್ತಿದ್ದರು. ಅಲ್ಲಿ ಎರಡು ದಿನಗಳ ಕಾಲ ಹೋಳಿಕಾ ದಹನವನ್ನು ನಡೆಸಲಾಯಿತು. ಅದರ ನಂತರ, ಒಂಬತ್ತು ದಿನಗಳ ಕಾಲ ಹೋಳಿ ಜಾತ್ರೆ ಮತ್ತು ಬಣ್ಣದ ಹಬ್ಬವನ್ನು ಆಚರಿಸಲಾಯಿತು.
1992 ರಲ್ಲಿ, ಅಯೋಧ್ಯೆಯಲ್ಲಿ ಬಾಬರಿ ಮಸೀದಿಯ ಒಂದು ಭಾಗವನ್ನು ಕೆಡವಿದಾಗ, ಮುಲ್ತಾನ್‌ನ ಕೆಲವು ಮುಸ್ಲಿಂ ಮೂಲಭೂತವಾದಿಗಳು ಪ್ರಹ್ಲಾದಪುರಿ ದೇವಾಲಯವನ್ನು ಕೆಡವಿದರು. ಅದರ ನಂತರ, ಪಂಜಾಬ್ ಸರ್ಕಾರ ಅದರ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ಆದರೆ ಕೆಲವು ವರ್ಷಗಳ ಹಿಂದೆ, ಪಾಕಿಸ್ತಾನಿ ನ್ಯಾಯಾಲಯವು ಈ ದೇವಾಲಯವನ್ನು ದುರಸ್ತಿ ಮಾಡಲು ಆದೇಶಿಸಿತು. ಆಗಲೂ ಅದನ್ನು ದುರಸ್ತಿ ಮಾಡಲಾಗಿಲ್ಲ. ಪ್ರಸ್ತುತ, ಈ ದೇವಾಲಯವು ಶಿಥಿಲಾವಸ್ಥೆಯಲ್ಲಿದೆ.