Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗಜೇಂದ್ರಗಡ: ಹೊಸ ಜಾತಿಯ ‘ಟ್ರಾಪ್‌ಡೋರ್‌’ ಜೇಡ ಪತ್ತೆ

Spread the love

ಗಜೇಂದ್ರಗಡ: ತಾಲೂಕಿನ ಶಾಂತಗೇರಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಹೊಸ ಜಾತಿಯ ಟ್ರಾಪ್‌ ಡೋರ್‌ ಜೇಡ ಪತ್ತೆ ಹಚ್ಚಲಾಗಿದೆ.

ಜೀವ ವೈವಿಧ್ಯ ಸಂಶೋಧಕ ಮಂಜುನಾಥ ಎಸ್‌ .ನಾಯಕ, ಅರಣ್ಯ ಇಲಾಖೆ ಸಿಬ್ಬಂದಿ ಪ್ರಕಾಶ ಗಾಣಗೇರ, ಸಂಗಮೇಶ ಕಡಗದ ಶಾಂತಗೇರಿ ಅರಣ್ಯ ಪ್ರದೇಶದಲ್ಲಿ ಬ್ಯಾರಿ ಚೆಲೀಡೆ ಕುಟುಂಬಕ್ಕೆ ಸೇರಿದ ತಿಗಿಡೀಯಾ ಜಿನಸ್‌ನ ಹೊಸ ಜಾತಿಯ ಟ್ರಾಪ್‌ಡೋರ್‌ ಜೇಡ ಪತ್ತೆ ಹಚ್ಚಿದ್ದಾರೆ.

ಇದರ ಗಾತ್ರ 1.5 ಇಂಚಿನಿಂದ ಇಂದ 2 ಇಂಚಿನಷ್ಟು ಇರುತ್ತದೆ. ಇದರ ಪ್ರಭೇದಗಳು ಸಾಮಾನ್ಯವಾಗಿ ಕರಾವಳಿ, ಮಲೆನಾಡು, ಅರೆ ಮಲೆನಾಡು ಭಾಗಗಳಲ್ಲಿ ಕಂಡು ಬರುತ್ತವೆ. ಇವುಗಳ ಆವಾಸಸ್ಥಾನ ರಸ್ತೆ ಬದಿ, ಕಾಡಿನ ಬೆಟ್ಟ-ಗುಡ್ಡಗಳ ಕಡಿದಾದ ಇಳಿಜಾರಿನಲ್ಲಿ ಕಂಡು ಬರುತ್ತದೆ. ಇವು ಕೊಳವೆಯಾಕಾರ ಗೂಡಿನಲ್ಲಿ ವಾಸಿಸುತ್ತವೆ.

ಗೂಡುಗಳು ಸುಂದರವಾದ ವೃತ್ತಾಕಾರದ ಮುಚ್ಚಳಿಕೆ ಹೊಂದಿರುತ್ತವೆ. ಈ ಜೇಡ ನೆಲಕಿರುಬನೆಂದು ಹೆಸರು ಪಡೆದಿದೆ. ಅದರ ಮೈಮೇಲಿರುವ ಕೂದಲು ಮತ್ತು ಬೇಟೆಯಾಡುವ ರೀತಿಗೋ ನೆಲಗುಮ್ಮ ನೆಲಗುಮ್ಮನೆಂಬ ಹೆಸರು ಬಂದಿದೆ. ಇವು ನೆಲದ ಬಿಲದಲ್ಲಿ ಅಡಗಿ ಕುಳಿತುಕೊಳ್ಳುವ ಗುಣ ಲಕ್ಷಣಗ ಹೊಂದಿವೆ. ಇವು ರಾತ್ರಿ ಸಮಯದಲ್ಲಿ ಭೇಟೆಯಾಡುತ್ತವೆ. ಈ ಜೇಡಗಳು ಕಪ್ಪೆ, ಹಲ್ಲಿ, ಇಲಿ, ಸಣ್ಣ ಪಕ್ಷಿಗಳು, ಕೀಟ ಭೇಟೆಯಾಡುತ್ತವೆ.

ಈ ಜೇಡಗಳ ದೇಹ ಇತರೆ ಜೇಡಗಳಿಗಿಂತ ದೊಡ್ಡದಾಗಿರುವ ಕಾರಣ ಅಪಾಯ ಬಂದಾಗ ಗೂಡಿನಲ್ಲಿ ಅಡಗುವುದು, ಪರ್ಯಾಯ ಮಾರ್ಗದಲ್ಲಿ ತಪ್ಪಿಸಿಕೊಳ್ಳುವುದನ್ನು ಬಿಟ್ಟರೆ ದೂರದ ಪ್ರದೇಶಕ್ಕೆ ಪಲಾಯನ ಮಾಡುವುದು ಕಷ್ಟಸಾಧ್ಯ. ಸಣ್ಣ ಪುಟ್ಟ ತೊಂದರೆ ಸಂಭವ ಕಂಡು ಬಂದಾಗ ಮೈಕೂದಲನ್ನು ನೇರ ಮಾಡಿಕೊಂಡು ವಿಶೇಷ ಸದ್ದು ಮಾಡುವ ಮೂಲಕ ರಕ್ಷಿಸಿಕೊಳ್ಳುತ್ತವೆ. ನೆಲಗುಮ್ಮಗಳಿಗಿರುವ ಭೀತಿಗಳು: ಇತ್ತೀಚಿನ ಅರಣ್ಯ ನಾಶದ ಜತೆಯಲ್ಲಿ ಆವಾಸಸ್ಥಾನ ನಾಶ, ದ್ವಿಪಥ, ಚತುಷ್ಪಥಗಳಂತಹ ರಸ್ತೆಗಳ ನಿರ್ಮಾಣದ ಅಭಿವೃದ್ಧಿ ಯೋಜನೆಗಳೇ ಈ ಪ್ರಭೇದ ಜೇಡಗಳ ಸಂತತಿಗೆ ಮಾರಕವಾಗಿವೆ.

ಕೆಲ ರೋಗಗಳನ್ನು ಗುಣಪಡಿಸಲು ಈ ಜೇಡ ಕೊಂದು ಅದರ ಮುಂದೆ ಖಾಯಿಲೆಗೊಳಪಟ್ಟ ವ್ಯಕ್ತಿ ಕೂರಿಸಿ ಪೂಜೆ ಮಾಡಿದರೆ ಖಾಯಿಲೆ ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ. ಕೆಲ ಪ್ರದೇಶಗಳಲ್ಲಿ ಋತು ಮತಿಯಾದ ಹೆಣ್ಣುಮಕ್ಕಳಲ್ಲಿ ಮಾಸಿಕ ತೊಂದರೆ ನಿವಾರಿಸಲು ನೆಲಗುಮ್ಮ/ನೆಲಕಿರುಬನನ್ನು ಜೀವಂತವಾಗಿ ಸೇರೆ ಹಿಡಿದು ತಾಯತದಲ್ಲಿ ಬಂಧಿಸಿ ಹೆಣ್ಣು ಮಕ್ಕಳ ಕೊರಳಿಗೆ ಕಟ್ಟುತ್ತಾರೆ. ಇನ್ನು ಕೆಲವರು ಇದು ವಿಷಕಾರಿ ಎಂದು ತಿಳಿದು ಕಂಡಲ್ಲಿ ಕೊಲ್ಲುತ್ತಾರೆ.

ಟ್ರಾಪ್‌ಡೋರ್‌ ಪ್ರಭೇದದ ಜೇಡಗಳು ಕೊಳವೆಯಾಕಾರದ ಗೂಡು ನಿರ್ಮಿಸುವುದರಿಂದ ಈ ಟ್ರೆಂಚ್‌ಗಳ ಮೂಲಕ ಮಳೆ ನೀರು ನೈಸರ್ಗಿಕವಾಗಿ ಅಂತರ್ಜಲ ಸೇರಲು ಸಹಕಾರಿಯಾಗಿದೆ. ರೈತರಿಗೆ ಮಾರಕ ಮತ್ತು ಅರಣ್ಯದ ಮರಗಳಿಗೆ ಪೀಡಕವಾದ ಕೀಟಗಳನ್ನು ಭಕ್ಷಿಸುವ ಮೂಲಕ ಕೀಟ ನಿಯಂತ್ರಣ ಮಾಡಿ ಪರಿಸರ ಸಮತೋಲನ ಕಾಪಾಡುತ್ತವೆ.

  • ಸಾಮಾನ್ಯವಾಗಿ ಕರಾವಳಿ, ಮಲೆನಾಡು, ಅರೆ ಮಲೆನಾಡು ಭಾಗಗಳಲ್ಲಿ ಕಂಡು ಬರುವ ಪ್ರಭೇದಗಳು
  • ಸುಂದರವಾದ ವೃತ್ತಾಕಾರದ ಮುಚ್ಚಳಿಕೆ ಹೊಂದಿರುವ ಗೂಡುಗಳು

Spread the love
Share:

administrator

Leave a Reply

Your email address will not be published. Required fields are marked *