ಆಪರೇಷನ್ ಸಿಂದೂರ ಹೇಗೆ ನಡೆದಿದೆ? ಐಎಫ್ ನಿಂದ ವಿಡಿಯೋ ರಿಲೀಸ್

ನವದೆಹಲಿ: ಏಪ್ರಿಲ್‌ನಲ್ಲಿ ನಡೆದಿದ್ದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ (Indian Air Force) ಪಾಕಿಸ್ತಾನದ ಮೇಲೆ ʼಆಪರೇಷನ್ ಸಿಂದೂರʼ (Operation Sindoor)ಹೆಸರಲ್ಲಿ ಪ್ರತೀಕಾರವನ್ನ ತೀರಿಸಿಕೊಂಡಿತು. ಆಪರೇಷನ್ ಸಿಂದೂರ್‌ನಿಂದಾಗಿ ಪಾಕಿಸ್ತಾನದಲ್ಲಿ ಅಡಗಿದ್ದ ಹಲವು ಉಗ್ರ ಮೃತಪಟ್ಟಿದ್ದಾರೆ.

ಅಲ್ಲಿನ ವಾಯುನೆಲೆಗಳಿಗೆ ಅಪಾರ ಹಾನಿಯಾಗಿದೆ. ಪಾಕ್‌ನ 5 ಫೈಟರ್ ಜೆಟ್‌ಗಳು ಮತ್ತು ವಾಯುಪಡೆಯ ಒಂದು ದೊಡ್ಡ ವಿಮಾನವನ್ನ ಹೊಡೆದುರುಳಿಸಿದ್ದಾಗಿ ಇತ್ತೀಚೆಗೆ ಭಾರತೀಯ ಸೇನೆ ವಾಯುಪಡೆ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ತಿಳಿಸಿದ್ದರು. ಅದರ ಬೆನ್ನಲ್ಲೇ ಭಾರತೀಯ ವಾಯುಪಡೆಯು ಆಪರೇಷನ್ ಸಿಂದೂರ್ ಸಮಯದಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (POK)ದಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ನಡೆಸಲಾದ ದಾಳಿಯನ್ನ ತೋರಿಸುವ ಒಂದು ಸಣ್ಣ ವಿಡಿಯೊ ತುಣುಕನ್ನ ಬಿಡುಗಡೆ ಮಾಡಿದೆ.
ವಿಡಿಯೊದಲ್ಲಿ ಏನಿದೆ?
ಇಂಡಿಯನ್ ಏರ್‌ಫೋರ್ಸ್‌ನ ಎಕ್ಸ್ ಖಾತೆಯಲ್ಲಿ ವೀಡಿಯೊವೊಂದನ್ನ ಪೋಸ್ಟ್ ಮಾಡಲಾಗಿದೆ. ಅದರಲ್ಲಿ ಮೊದಲು ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ದಾಳಿಯ ಕುರಿತಾದ ತುಣುಕುಗಳನ್ನ ತೋರಿಸಲಾಯಿತು. ಈ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು. ನಂತರ ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ರಕ್ಷಣಾ ಸಿಬ್ಬಂದಿ (CDS) ಜನರಲ್ ಅನಿಲ್ ಚೌಹಾಣ್ ಮತ್ತು ತ್ರಿ-ಸೇನಾ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆ ನಡೆಸುತ್ತಿರುವುದನ್ನು ತೋರಿಸಲಾಯಿತು..
ಅದಾದ ಬಳಿಕ ಆಪರೇಷನ್ ಸಿಂದೂರ್ ಆಕ್ರಮಣದ ದೃಶ್ಯಗಳನ್ನ ತೋರಿಸಲಾಗಿದೆ. ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ತಾಣಗಳ ಮೇಲೆ ಭಾರತೀಯ ಫೈಟರ್ ಜೆಟ್‌ಗಳು ನಡೆಸಿದ ವೈಮಾನಿಕ ದಾಳಿಗಳನ್ನು ಮತ್ತು ಇದರಿಂದ ನಾಶವಾದ ಭಯೋತ್ಪಾದಕ ಶಿಬಿರಗಳನ್ನ ತೋರಿಸುವ ದೃಶ್ಯಗಳನ್ನ ಈ ವಿಡಿಯೊದಲ್ಲಿ ನೋಡಬಹುದು.
ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
1971 ರ ಪಾಕಿಸ್ತಾನದೊಂದಿಗಿನ ಯುದ್ಧದ ಸಮಯದಲ್ಲಿ ಯುದ್ಧ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿರುವುದನ್ನು ಈ ವೀಡಿಯೊ ತೋರಿಸಿದೆ. ಅಷ್ಟೇ ಅಲ್ಲ, ಇದು ಕಾರ್ಗಿಲ್ ಯುದ್ಧ ಮತ್ತು 2019 ರ ಪುಲ್ವಾಮಾ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತೀಯ ಸೇನೆ ನಡೆಸಿದ ದಾಳಿಯ ದೃಶ್ಯಗಳನ್ನೂ ಒಳಗೊಂಡಿದೆ. ʼಆಕಾಶವು ಕತ್ತಲೆಯಾದಾಗ ಮತ್ತು ಭೂಮಿ ಅಥವಾ ಸಮುದ್ರದಾದ್ಯಂತ ಅಪಾಯವು ಆವರಿಸಿದಾಗ, ಒಂದು ಶಕ್ತಿ ಮೇಲೇರುತ್ತದೆ. ಅದು ವಿಶಾಲ, ನಿರ್ಭೀತ ಮತ್ತು ನಿಖರವಾಗಿದೆ..ಅದೇ ಭಾರತೀಯ ವಾಯುಪಡೆʼ ಎಂದು ಹಿನ್ನೆಲೆಯಲ್ಲಿ ಹೇಳೋದನ್ನೂ ಕೇಳಬಹುದು.
ಅಂದಹಾಗೇ, ಆಪರೇಷನ್ ಸಿಂದೂರ ಎನ್ನೋದು ಯುದ್ಧ ಸದೃಶವಾಗಿ ನಡೆದಿತ್ತು. ಈ ದಾಳಿಯಿಂದಾಗಿ ನೂರಾರು ಭಯೋತ್ಪಾದಕರು ಸತ್ತಿದ್ದಾರೆ. ಪಾಕಿಸ್ತಾನದ ಕೆಲವು ವಾಯುನೆಲೆಗಳು ಧ್ವಂಸಗೊಂಡಿವೆ.