ಕೊಲಂಬಿಯಾ: ಅಧ್ಯಕ್ಷೀಯ ಅಭ್ಯರ್ಥಿ ಮಿಗುಯೆಲ್ ಉರಿಬೆ ನಿಧನ

ಬೊಗೋಟಾ: ದುಷ್ಕರ್ಮಿಯ ಗುಂಡೇಟಿನಿಂದಾಗಿ ಹಲವು ವಾರಗಳ ಕಾಲ ಜೀವನ್ಮರಣ ಸ್ಥಿತಿಯಲ್ಲಿದ್ದ ಕೊಲಂಬಿಯಾದ ಅಧ್ಯಕ್ಷೀಯ ಅಭ್ಯರ್ಥಿ ಮಿಗುಯೆಲ್ ಉರಿಬೆ (39) ಸೋಮವಾರ ನಿಧನರಾಗಿದ್ದಾರೆ.

ಜೂ.7ರಂದು ಬೊಗೋಟಾ ನಗರದಲ್ಲಿ ಸಾರ್ವಜನಿಕ ರ್ಯಾಲಿ ನಡೆಸುವ ವೇಳೆ ಉರಿಬೆ ಅವರ ಮೇಲೆ 3 ಸುತ್ತು ಗುಂಡುಗಳನ್ನು ಹಾರಿಸಲಾಗಿತ್ತು.
ಈ ಪೈಕಿ 2 ಗುಂಡುಗಳು ಅವರ ತಲೆಗೆ ಹೊಕ್ಕಿದ್ದವು. ಡೆಮಾಕ್ರಟಿಕ್ ಸೆಂಟರ್ ಪಕ್ಷದ ಸದಸ್ಯರಾದ ಉರಿಬೆ, ಕಳೆದ ಅಕ್ಟೋಬರ್‌ನಲ್ಲಿ 2026 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು.