ವೈಟ್ ಬಣ್ಣದ ಶರ್ಟ್ ಹಾಕಿದ ತಪ್ಪಿಗೆ ನಡೆಯಿತು ಅಮಾಯಕನ ಕೊ*ಲೆ

ಮಂಡ್ಯ:ಕೆಲವೊಂದು ಸಹ ಯಾರೋ ಮಾಡಿದ ತಪ್ಪಿಗೆ ಯಾರೋ ಬಲಿ ಆಗುತ್ತಾರೆ ಎಂಬುದಕ್ಕೆ ಮಂಡ್ಯದಲ್ಲಿ (Mandya) ನಡೆದ ಘಟನೆ ಉತ್ತಮ ಉದಾಹರಣೆಯಾಗಿದೆ. ಕೇವಲ ಒಂದು ಶರ್ಟ್ (Shirt) ವಿಚಾರದಲ್ಲಿ ಆದ ತಪ್ಪು ಅಮಾಯಕ ವ್ಯಕ್ತಿಯ ಜೀವಕ್ಕೆ (Crime News) ಕಂಟಕವಾಗಿದೆ.

ದುಷ್ಕರ್ಮಿಗಳಿಂದ ಹಲ್ಲೆ
ಮೃತ ವ್ಯಕ್ತಿಯನ್ನ ವಡ್ಡರಹಳ್ಳಿ ಗ್ರಾಮದ 34 ವರ್ಷದ ಅರುಣ್ ಎಂದು ಗುರುತಿಸಲಾಗಿದ್ದು, ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಶುಕ್ರವಾರ ರಾತ್ರಿ ಊರಿಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ಅಂದರೆ ಆಗಸ್ಟ್ 8ರಂದು ಮೃತ ಅರುಣ್ ಸ್ನೇಹಿತ ಸೂರ್ಯ, ಸಹೋದರ ಉಮೇಶ್ ಹಾಗೂ ಸಂಬಂಧಿ ದೇವರಾಜ್ ಜೊತೆಗೆ ಬಾರ್‌ನಲ್ಲಿ ಕುಳಿತು ಕುಡಿಯುತ್ತಿದ್ದ ಸಮಯದಲ್ಲಿ, ಅರುಣ್ ಸ್ನೇಹಿತ ಸೂರ್ಯ ಹಳೇ ದ್ವೇಷದ ಹಿನ್ನೆಲೆ ವಿಕಾಸ್ ಎನ್ನುವ ವ್ಯಕ್ತಿಯ ಜೊತೆಗೆ ಬಾರ್‌ನಲ್ಲಿ ಜಗಳ ಮಾಡಿದ್ದ. ಸುಮಾರು 2 ವರ್ಷದ ಹಿಂದಿನ ಘಟನೆಯನ್ನ ನೆನೆಸಿಕೊಂಡು ನಿನ್ನೆ ಕಾಲು ಕರೆದುಕೊಂಡು ಹೋಗಿ ಜಗಳ ಮಾಡಿದ್ದ. ಈ ಸಮಯದಲ್ಲಿ ಅರುಣ್ ಇಬ್ಬರ ಜಗಳವನ್ನ ಬಿಡಿಸಿ ಪಾರ್ಟಿಯನ್ನ ಮುಂದಿವರೆಸಿದ್ದ. ಆದರೆ ಅಲ್ಲಿಂದ ಹೋಗಿದ್ದ ವಿಕಾಸ್ ಈ ಬಗ್ಗೆ ಬೇರೆಯವರಿಗೆ ದೂರು ನೀಡಿದ್ದು, ಅವರನ್ನ ಸೂರ್ಯನ ಕೊಲೆ ಮಾಡಲು ಕಳುಹಿಸಿದ್ದ. ಆದರೆ ಈ ಸಮಯದಲ್ಲಿ ಆದ ಎಡವಟ್ಟೆ ಅಮಾಯಕನ ಜೀವ ತೆಗೆದಿತ್ತು.
ಶರ್ಟ್ ಬಣ್ಣದಿಂದ ಕೊಲೆಯಾದ ಅರುಣ್
ಅರುಣ್ ಹಾಗೂ ಇತರರು ಪಾರ್ಟಿ ಮಾಡುತ್ತಿರುವಾಗಲೇ ಜಗಳ ಆದ ಕೆಲ ಸಮಯದ ನಂತರ ವಿಕಾಸ್ ಕಳುಹಿಸಿದ್ದ ದುಷ್ಕರ್ಮಿಗಳ ಗ್ಯಾಂಗ್ ಸೂರ್ಯನ ಮೇಲೆ ಅಟ್ಯಾಕ್ ಮಾಡಲು ಬಂದಿದ್ದರು. ಆದರೆ ಸೂರ್ಯ ಕೊಲೆ ಮಾಡಲು ಕಳುಹಿಸಿದ್ದ. ಆದರೆ ಈ ಸಮಯದಲ್ಲಿ ಆದ ಎಡವಟ್ಟೆ ಅಮಾಯಕನ ಜೀವ ತೆಗೆದಿತ್ತು.
ಶರ್ಟ್ ಬಣ್ಣದಿಂದ ಕೊಲೆಯಾದ ಅರುಣ್
ಅರುಣ್ ಹಾಗೂ ಇತರರು ಪಾರ್ಟಿ ಮಾಡುತ್ತಿರುವಾಗಲೇ ಜಗಳ ಆದ ಕೆಲ ಸಮಯದ ನಂತರ ವಿಕಾಸ್ ಕಳುಹಿಸಿದ್ದ ದುಷ್ಕರ್ಮಿಗಳ ಗ್ಯಾಂಗ್ ಸೂರ್ಯನ ಮೇಲೆ ಅಟ್ಯಾಕ್ ಮಾಡಲು ಬಂದಿದ್ದರು. ಆದರೆ ಸೂರ್ಯ ಹಾಗೂ ಇತರರು ಎಸ್ಕೇಪ್ ಆಗಿದ್ದರು. ಈ ಸಮಯದಲ್ಲಿ ವಿಕಾಸ್ ಆ ಗ್ಯಾಂಗ್ ಜನರಿಗೆ ಸೂರ್ಯ ವೈಟ್ ಶರ್ಟ್ ಹಾಕಿದ್ದಾನೆ ಎಂದು ಹೇಳಿದ್ದಾನೆ. ದುರಾದೃಷ್ಟಕ್ಕೆ ಅವತ್ತು ಅರುಣ್ ಸಹ ವೈಟ್ ಶರ್ಟ್ ಹಾಕಿದ್ದ. ಹಾಗಾಗಿ ವೈಟ್ ಶರ್ಟ್ ಹಾಕಿದ್ದ ಅರುಣ್‌ನನ್ನೇ ಸೂರ್ಯ ಅಂತ ತಿಳಿದುಕೊಂಡು ರೌಡಿಗಳು ಫಾಲೋ ಮಾಡಿದ್ದಾರೆ. ಹೆಮ್ಮನಹಳ್ಳಿ ರಸ್ತೆಯ ನಿರ್ಜನ ಪ್ರದೇಶದ ಬಳಿ ಪಾಪದ ಅರುಣ್ ಮೇಲೆ ಟ್ಯಾಕ್ ಮಾಡಿದ್ದು, ಚುಚ್ಚಿ ಚುಚ್ಚಿ ಸಾಯಿಸಿದ್ದಾರೆ. ಈ ಸಮಯದಲ್ಲಿ ಅರುಣ್ ಜೊತೆ ಇದ್ದ ಸಂಬಂಧಿ ದೇವರಾಜು ತಪ್ಪಿಸಿಕೊಂಡಿದ್ದು, ಸದ್ಯ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಹೆಂಡತಿ ಮಕ್ಕಳನ್ನ ಕೊಂದ ಭೂಪ
ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ಪತ್ನಿ ಮತ್ತು 5 ಮತ್ತು 7 ವರ್ಷದ ಇಬ್ಬರು ಹೆಣ್ಣುಮಕ್ಕಳನ್ನು ಕೊಲೆ ಮಾಡಿರುವ ಶಾಕಿಂಗ್ ಘಟನೆ ದೆಹಲಿಯ ಕರವಾಲ್ ನಗರದಲ್ಲಿ ನಡೆದಿದೆ. ಈ ಪ್ರಕರಣ ಅಕ್ಕ ಪಕ್ಕದ ಮನೆಯವರಿಂದ ಬೆಳಕಿಗೆ ಬಂದಿದ್ದು, ಅವರಿಗೆ ಬೆಳಗ್ಗೆ 6 ಗಂಟೆಯ ಸುಮಾರಿಗೆ ಈ ರೀತಿ ಆಗಿದೆ ಎನ್ನುವ ವಿಚಾರ ತಿಳಿದಿದೆ
ನಂತರ ಅವರು ಮನೆಯ ಬಾಗಿಲನ್ನ ತೆಗೆದು ನೋಡಿದಾಗ ತಾಯಿ ಮತ್ತು ಇಬ್ಬರು ಹೆಣ್ಣುಮಕ್ಕಳು ತಮ್ಮ ಹಾಸಿಗೆಯ ಮೇಲೆ ಬಿದ್ದಿರುವುದನ್ನ ಗಮನಿಸಿದ್ದಾರೆ. ತಕ್ಷಣವೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ವಿಧಿವಿಜ್ಞಾನ ತಂಡಗಳು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹ ಮಾಡಿಕೊಂಡಿದೆ.
