ಕೊಹ್ಲಿ-ಎಬಿಡಿ ವಿಲಿಯರ್ಸ್ ನಿಂದ ಬಂದ ಕರೆ- ಪೊಲೀಸರ ಅತಿಥಿಯಾದ ಅಂಗಡಿಯ ವ್ಯಕ್ತಿ

ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಜೊತೆ ಮಾತನಾಡುವ ಅವಕಾಶ ಸಿಕ್ಕರೆ ಯಾರು ತಾನೆ ಬಿಡುತ್ತಾರೆ? ಅಂತಹದೊಂದು ಅವಕಾಶ ಹುಡುಕಿ ಬಂದರೆ? ಹೌದು, ಛತ್ತೀಸ್‌ಗಢದಗರಿಯಾಬಂದ್ ಜಿಲ್ಲೆಯ ದಿನಸಿ ಅಂಗಡಿಯ ಹುಡುಗನೊಬ್ಬನಿಗೆ ಅಂತಹದೊಂದು ಅವಕಾಶ ಸಿಕ್ಕಿದೆ.

ಅದು ಕೂಡ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಸೇರಿದಂತೆ ಅನೇಕರು ಖುದ್ದು ಕರೆ ಮಾಡುವ ಮೂಲಕ..!
ಎನ್ಡಿಟಿವಿ ವರದಿಯ ಪ್ರಕಾರ, ಮನೀಶ್ ಸ್ಥಳೀಯ ಅಂಗಡಿಯಿಂದ ಹೊಸ ಸಿಮ್ಕಾರ್ಡ್ಖರೀದಿಸಿದ್ದರು. ಈ ನಂಬರ್ನಲ್ಲಿ ವಾಟ್ಸಾಪ್ ಓಪನ್ ಮಾಡಿದ್ದರು. ಆದರೆ ವಾಟ್ಸಪ್ ಅನ್ನು ಸಕ್ರಿಯಗೊಳಿಸುತ್ತಿದ್ದಂತೆ ಅಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ ಅವರ ಫೋಟೋ ಕಾಣಿಸಿಕೊಂಡಿದೆ. ಅಲ್ಲದೆ ಆ ವಾಟ್ಸಾಪ್ ಖಾತೆಯಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಕ್ರಿಕೆಟಿಗರ ಕಾಂಟ್ಯಾಕ್ಟ್ ಲಿಸ್ಟ್ ತೋರಿಸಿದೆ.
ಆ ಬಳಿಕ ಮನೀಶ್ಗೆ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಸೇರಿದಂತೆ ಒಂದಷ್ಟು ಮಂದಿಯಿಂದ ಕರೆಗಳು ಸಹ ಬಂದಿದೆ. ಈ ವೇಳೆ ಕರೆ ಸ್ವೀಕರಿಸಿ ಮಾತನಾಡಿದ್ದಾರೆ.
ಕೇಸ್ ದಾಖಲಿಸಿದ ರಜತ್ ಪಾಟಿದಾರ್:
ಮನೀಶ್ಗೆ ಸಿಕ್ಕಿದ ನಂಬರ್ ರಜತ್ ಪಾಟಿದಾರ್ ಅವರ ಹಳೆಯ ಮೊಬೈಲ್ ನಂಬರ್ ಆಗಿತ್ತು. ಈ ನಂಬರ್ ಅನ್ನು 90 ದಿನಗಳಿಂದ ಬಳಸದ ಮೊಬೈಲ್ ಆಪರೇಟರ್ ನಿಷ್ಕ್ರಿಯಗೊಳಿಸಿದ್ದರು. ಹೀಗೆ ನಿಷ್ಕ್ರಿಯಗೊಂಡಿದ್ದ ನಂಬರ್ ಅನ್ನು ಆ ಬಳಿಕ ಮರು ಬಿಡುಗಡೆ ಮಾಡಲಾಗಿತ್ತು. ಈ ನಂಬರ್ ಮನೀಶ್ಗೆ ಸಿಕ್ಕಿದೆ.
ಇತ್ತ ರಜತ್ ಪಾಟಿದಾರ್ ಅವರ ಹಳೆಯ ನಂಬರ್ ನಿಷ್ಕ್ರಿಯಗೊಂಡಿರುವುದು ಗೊತ್ತಿರದ ಅನೇಕ ಕ್ರಿಕೆಟಿಗರು ಮನೀಶ್ಗೆ ಕರೆ ಮಾಡಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡ ಮನೀಶ್ ಎಲ್ಲರೊಂದಿಗೆ ಮಾತನಾಡಿದ್ದಾರೆ.
ಇದಾದ ಬಳಿಕ ಈ ವಿಷಯ ರಜತ್ ಪಾಟಿದಾರ್ಗೆ ಗೊತ್ತಾಗಿದೆ. ಅಲ್ಲದೆ ಮನೀಶ್ಗೆ ಕರೆ ಮಾಡಿ ತನ್ನ ನಂಬರ್ ಅನ್ನು ಹಿಂತಿರುಗಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಕ್ರಿಕೆಟ್ ವಲಯದ ಪ್ರಮುಖ ವ್ಯಕ್ತಿಗಳನ್ನುಸಂಪರ್ಕಿಸಲು ತನಗೆ ಆ ಸಂಖ್ಯೆ ಬೇಕು ಎಂದು ಹೇಳಿ, ವಿಷಯವನ್ನು ವಿವರಿಸಿದರು. ಇದಾಗ್ಯೂ ನಂಬರ್ ನೀಡಲು ಮನೀಶ್ ಮತ್ತು ಸ್ನೇಹಿತರು ಒಪ್ಪಲಿಲ್ಲ. ಹೀಗಾಗಿ ರಜತ್ಪಾಟೀದಾರ್ ಪೊಲೀಸರಿಗೆ ದೂರು ನೀಡಿದ್ದಾರೆ.
ರಜತ್ ಪಾಟಿದಾರ್ ಕರೆ ಮಾಡಿದ 10 ನಿಮಿಷಗಳ ಬಳಿಕ ಮನೀಶ್ ಮನೆಗೆ ಪೊಲೀಸರು ಬಂದಿದ್ದಾರೆ. ಆ ಬಳಿಕವಷ್ಟೇ ದಿನಸಿ ಅಂಗಡಿಯವನಿಗೆ ಪರಿಸ್ಥಿತಿಯ ಗಂಭೀರತೆ ಅರಿವಾಗಿದೆ. ತಕ್ಷಣವೇ ಮನೀಶ್ ಸಿಮ್ಕಾರ್ಡ್ ಅನ್ನು ಹಿಂತಿರುಗಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ.
