Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹಬ್ಬದ ಕೊಡುಗೆ: ಎಲ್‌ಪಿಜಿ ದರ ಏರಿಕೆ ತಡೆಯಲು ₹30,000 ಕೋಟಿ ಸಬ್ಸಿಡಿ ಘೋಷಣೆ

Spread the love

ಕೇಂದ್ರ ಸರ್ಕಾರವು ಎಲ್‌ಪಿಜಿ ಬಳಕೆದಾರರಿಗೆ ಹಬ್ಬದ ದಿನವೇ ಭರ್ಜರಿ ಗುಡ್‌ನ್ಯೂಸ್‌ ಕೊಟ್ಟಿದೆ. ಸಾಮಾನ್ಯವಾಗಿ ತಿಂಗಳ ಮೊದಲ ದಿನವೇ ದೇಶದಾದ್ಯಂತ ಎಲ್‌ಪಿಜಿ ದರಗಳು ಏರಿಳಿತ ಕಾಣುತ್ತಿವೆ. ಆದರೂ ಈಗಿರುವ ವಾಣಿಜ್ಯ ಹಾಗೂ ಗೃಹಬಳಕೆ ಸಿಲಿಂಡರ್‌ ದರಗಳು ಕೂಡ ಸಾರ್ವಜನಿಕರಿಗೆ ದುಬಾರಿಯೇ ಎನ್ನುವ ಮಾತಿದೆ.

ದೇಶೀಯ ಎಲ್‌ಪಿಜಿ ಮಾರಾಟದಿಂದ ಕಂಪನಿಗಳಿಗೆ ಆಗುವ ನಷ್ಟವನ್ನು ಸರಿದೂಗಿಸಲು ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ಎಲ್‌ಪಿಜಿ ಬೆಲೆಗಳನ್ನು ಸ್ಥಿರವಾಗಿಡಲು ತೈಲ ಕಂಪನಿಗಳಿಗೆ ಬರೋಬ್ಬರಿ 30,000 ಕೋಟಿ ರೂಪಾಯಿ ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ದೇಶದ ಪ್ರಮುಖ ಮೂರು ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿಎಲ್), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (ಎಚ್‌ಪಿಸಿಎಲ್) ನಡುವೆ ಈ ಪರಿಹಾರವನ್ನು ವಿತರಿಸುವುದಾಗಿ ಹೇಳಿದೆ. ಇದು ಡೊಮೆಸ್ಟಿಕ್ ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಮಾರಾಟದಲ್ಲಿ ಕಂಡುಬಂದ ನಷ್ಟಗಳನ್ನು ತಡೆಯಲು ಪರಿಹಾರ ಮಾರ್ಗ ಎಂದು ತೀರ್ಮಾನಿಸಿದೆ.

ಜಾಗತಿಕ ಎಲ್‌ಪಿಜಿ ಬೆಲೆಗಳಲ್ಲಿನ ಬದಲಾವಣೆಗಳಿಂದ ಗ್ರಾಹಕರನ್ನು ರಕ್ಷಿಸುವುದು ಮತ್ತು ಸಾರ್ವಜನಿಕ ವಲಯದ ತೈಲ ಕಂಪನಿಗಳ ಆರ್ಥಿಕಮಟ್ಟವನ್ನು ಬೆಂಬಲಿಸುವುದು ಈ ನಿರ್ಧಾರದ ಗುರಿಯಾಗಿದೆ ಎಂದು ಸಂಪುಟ ಸಭೆಯ ನಂತರ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. ತೈಲ ಮತ್ತು ಅನಿಲ ವಲಯದಲ್ಲಿನ ಪ್ರಸ್ತುತ ಭೌಗೋಳಿಕ ರಾಜಕೀಯ ಸನ್ನಿವೇಶಗಳು ಮತ್ತು ಅನಿಶ್ಚಿತತೆಗಳನ್ನು ಗಮನದಲ್ಲಿಟ್ಟುಕೊಂಡು ಈ ಬೆಂಬಲವನ್ನು ನೀಡಲಾಗಿದೆ ಎಂದು ಸಚಿವ ವೈಷ್ಣವ್ ಹೇಳಿದ್ದಾರೆ.

ಮಧ್ಯಮ ವರ್ಗಕ್ಕೆ ಎಲ್‌ಪಿಜಿ ಕೈಗೆಟುಕುವಂತೆ ನೋಡಿಕೊಳ್ಳಲು 30,000 ಕೋಟಿ ರೂಪಾಯಿಗಳ ಸಬ್ಸಿಡಿಯನ್ನು ಅನುಮೋದಿಸಲಾಗಿದೆ. ಪ್ರಸ್ತುತ ಭೌಗೋಳಿಕ ರಾಜಕೀಯದಲ್ಲಿ, ಅನಿಲ ದರಗಳು ಏರಿಳಿತಗೊಳ್ಳುತ್ತವೆ. ಅದನ್ನು ಸರಿದೂಗಿಸಲು ಸಬ್ಸಿಡಿ ನೀಡಲಾಗುತ್ತದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಅಲ್ಲದೆ ದೇಶದಲ್ಲಿ ಎಲ್‌ಪಿಜಿ ಸರಬರಾಜು ನಿರಂತರವಾಗಿರಿಸಲು ಸಾಧ್ಯವಾಗುತ್ತದೆ.

ಈ ನಿರ್ಣಯವು ಗ್ರಾಹಕರನ್ನು ಜಾಗತಿಕ ಇಂಧನ ಬೆಲೆ ಏರಿಳಿತದಿಂದ ರಕ್ಷಿಸುವುದರ ಜೊತೆಗೆ, ಪಿಒಎಸ್‌ಯುಗಳ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸರ್ಕಾರದ ಬದ್ಧತೆಯನ್ನು ಪ್ರತಿಪಾದಿಸುತ್ತದೆ. ಇದಲ್ಲದೆ, ಪ್ರಧಾನಮಂತ್ರಿ ಉಜ್ವಲಾ ಯೋಜನೆ ಮತ್ತಿತರ ಬಡ ಬಳಕೆದಾರರಿಗೆ ಸ್ವಚ್ಛವಾದ ಅಡುಗೆ ಇಂಧನವನ್ನು ವಿಸ್ತರಿಸುವ ಗುರಿ ಹೊಂದಿದೆ. ಹಾಗಾಗಿ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಗೆ ಈ ಭಾರಿ ಮೊತ್ತದ ಸಬ್ಸಿಡಿಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ದೇಶೀಯ LPG ಮಾರಾಟದಿಂದ ಕಂಪನಿಗಳಿಗೆ ಆಗುವ ನಷ್ಟವನ್ನು ಸರಿದೂಗಿಸಲು ಈ ಸಬ್ಸಿಡಿಯನ್ನು ಉದ್ದೇಶಿಸಲಾಗಿದ್ದು, ಹನ್ನೆರಡು ಭಾಗಗಳಲ್ಲಿ ಪಾವತಿಯಾಗಲಿದೆ.

ಎಲ್‌ಪಿಜಿ ಸಿಲಿಂಡರ್‌ಗಳನ್ನು ಗ್ರಾಹಕರಿಗೆ ಸರ್ಕಾರ ನಿಯಂತ್ರಿತ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. 2024-25ರಲ್ಲಿ ಅಂತರರಾಷ್ಟ್ರೀಯ ಎಲ್‌ಪಿಜಿ ಬೆಲೆಗಳು ದರಗಳು ಜಾಸ್ತಿಯೇ ಇದ್ದವು. ಆದರೆ ಸರ್ಕಾರವು ಹೆಚ್ಚಿದ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಲಿಲ್ಲ. ಇದರಿಂದ ಮೂರು ಪ್ರಮುಖ ಕಂಪನಿಗಳು ನಷ್ಟವನ್ನು ಎದುರಿಸಿದವು. ನಷ್ಟದ ನಡುವೆಯೂ ಅವರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಪೂರೈಸುವುದನ್ನು ಮುಂದುವರಿಸಿದ್ದರು. ಈಗ ಸಬ್ಸಿಡಿ ನೀಡಿರುವುದರಿಂದ ಆ ತೈಲ ಸಂಸ್ಥೆಗಳಿಗೂ ಭಾರಿ ಅನುಕೂಲ ಆಗಲಿದೆ ಎಂದು ಹೇಳಲಾಗುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *