ಟ್ರಂಪ್ ಸುಂಕ ನಿರ್ಧಾರ: ಭಾರತ-ಅಮೆರಿಕಾ ವ್ಯಾಪಾರ ಯುದ್ಧದ ಉತ್ಕರ್ಷ

ಭಾರತದ ಮೇಲೆ ಅಮೆರಿಕ ಹಾಕಿರುವ ಹೆಚ್ಚುವರಿ 25 ಶೇಕಾಡ ಸುಂಕವು ವಿಶ್ವದಲ್ಲೇ ಭಾರೀ ಸದ್ದು ಮಾಡುತ್ತಿದೆ. ಇದರಿಂದ ಭಾರತಕ್ಕೆ ಹೊರೆ ಆಗುವುದಕ್ಕಿಂತ ಅಮೆರಿಕ ಹೆಚ್ಚು ನಷ್ಟವನ್ನು ಅನುಭವಿಸುತ್ತದೆ ಎಂದು ಹೇಳಲಾಗಿದೆ. ಅನೇಕರ ಆರ್ಥಿಕ, ರಾಜಕೀಯ ತಜ್ಞರು ಹಾಗೂ ಡೊನಾಲ್ಡ್ ಟ್ರಂಪ್ ಅವರ ಆಪ್ತ ವಲಯ ಕೂಡ ಈ ನೀತಿಯನ್ನು ಖಂಡಿಸಿದ್ದಾರೆ. ಭಾರತ ವಿಶ್ವಾಸರ್ಹ ದೇಶ, ಅದರ ಜತೆಗೆ ಮಿತ್ರವನ್ನು ಹೊಂದಬೇಕಿತ್ತು ಆದರೆ ಟ್ರಂಪ್ ಶತ್ರುವನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ವಿಶ್ವದ ನಾಯಕರು ಹೇಳುತ್ತಿದ್ದಾರೆ. ಇದೀಗ ಸುಂಕದ ವಿರುದ್ಧ ಭಾರತ ಸಮರವನ್ನು ಸಾರಿದೆ. ಚೀನಾಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಇದರ ನಡುವೆ ಅಜಿತ್ ದೋವಲ್ ಕೂಡ ರಷ್ಯಾದ ಅಧಕ್ಷರನ್ನು ಭೇಟಿಯಾಗಿ ಮಹತ್ವ ಚರ್ಚೆಗಳನ್ನು ನಡೆಸಿದ್ದಾರೆ. ಭಾರತ, ಚೀನಾ, ರಷ್ಯಾ ದೊಡ್ಡ ಮಟ್ಟದ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಇದರ ನಡುವೆ ಅಮೆರಿಕದ ತಜ್ಞರು ಕೂಡ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಯನ್ನು ಖಂಡಿನೀಯ ಎಂದು ಟೀಕಿಸಿದ್ದಾರೆ. ಈ ಬಗ್ಗೆ ಎನ್ಡಿಟಿವಿ ಜತೆಗೆ ಮಾತನಾಡಿದ ಅಮೆರಿಕದ ಅರ್ಥಶಾಸ್ತ್ರಜ್ಞ ಮತ್ತು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸ್ಟೀವ್ ಹ್ಯಾಂಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವದ ಇತರ ಭಾಗಗಳ ವಿರುದ್ಧ ವ್ಯಾಪಾರ ಯುದ್ಧವನ್ನು ಪ್ರಾರಂಭಿಸುವ ಮೂಲಕ “ತಮ್ಮನ್ನು ತಾವು ನಾಶಪಡಿಸಿಕೊಳ್ಳುತ್ತಿದ್ದಾರೆ” ಎಂದು ಹೇಳಿದ್ದಾರೆ.

ಟ್ರಂಪ್ ಅವರ ಸುಂಕ ನಿರ್ಧಾರವು “ಸಂಪೂರ್ಣವಾಗಿ ಅಸಂಬದ್ಧ” ಮತ್ತು ಕೇವಲ “ಮರಳಿನ ಮೇಲೆ ಆಧಾರಿತ” ಎಂದು ಸ್ಟೀವ್ ಹ್ಯಾಂಕೆ ಹೇಳಿದ್ದಾರೆ. ಟ್ರಂಪ್ ಅವರ ಅರ್ಥಶಾಸ್ತ್ರವು ಸಂಪೂರ್ಣವಾಗಿ ತಪ್ಪಾಗಿದೆ ಎಂದು ಹೇಳಿದ್ದಾರೆ. ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ 50 ಕ್ಕೆ ಹೆಚ್ಚಿಸಿದ್ದಕ್ಕೆ ಭಾರೀ ಚರ್ಚೆಗಳು ನಡೆಯುತ್ತಿದೆ. ಈ ಉದ್ವಿಗ್ನತೆಯ ನಡುವೆ ಈ ಹೇಳಿಕೆ ನೀಡಿರುವುದು ಚರ್ಚೆಗೆ ಕಾರಣವಾಗಿದೆ. ಸ್ಟೀವ್ ಹ್ಯಾಂಕೆ ನೆಪೋಲಿಯನ್ ಹೇಳಿರುವ ಮಾತನ್ನು ನೆನಪಿಸಿಕೊಂಡಿದ್ದಾರೆ. “ತನ್ನನ್ನು ತಾನು ನಾಶಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಶತ್ರುಗಳ ಜೊತೆ ಎಂದಿಗೂ ಹಸ್ತಕ್ಷೇಪ ಮಾಡಬೇಡಿ”. ಇದೀಗ ಟ್ರಂಪ್ ಕೂಡ ತನ್ನನ್ನು ತಾನು ನಾಶಪಡಿಸಿಕೊಳ್ಳುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಈ ವಿಚಾರದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ, ಸ್ವಲ್ಪ ಕಾಯುವುದು ಒಳ್ಳೆಯದು ಎಂದು ಹೇಳಿದ್ದಾರೆ.
ಟ್ರಂಪ್ ಅವರ ಈ ನೀತಿಯಿಂದ ಅಮೆರಿಕದ ಮೇಲೆ ಭಾರತ ಸೇರಿದಂತೆ ವಿಶ್ವ ಅನೇಕ ಬಲಿಷ್ಠ ರಾಷ್ಟ್ರಗಳು ನಂಬಿಕೆಯನ್ನು ಕಳೆದುಕೊಳ್ಳುತ್ತದೆ. ಹಾಗೂ ಅಮೆರಿಕದ ವಿರುದ್ಧ ಹೋಗುವ ಸಾಧ್ಯತೆ ಇದೆ. ನಾನು ಹೇಳುವ ಪ್ರಕಾರ ಟ್ರಂಪ್ ಅವರ ಈ ಸುಂಕಗಳ ಮೇಲಿನ ಆರ್ಥಿಕ ನಡುಕ ಮರಳಿನ ಮೇಲೆ ನಿಂತಿದೆ. ಅಮೆರಿಕನ್ನರ ಖರ್ಚು ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕಿಂತ ಹೆಚ್ಚಿರುವುದರಿಂದ ಅಮೆರಿಕದಲ್ಲಿ ಭಾರಿ ವ್ಯಾಪಾರ ಕೊರತೆ ಇದೆ. ಆದ್ದರಿಂದ ಅರ್ಥಶಾಸ್ತ್ರವು ಸಂಪೂರ್ಣವಾಗಿ ತಪ್ಪಾಗಿದೆ. ಟ್ರಂಪ್ ಅವರ ಸುಂಕ ಅರ್ಥಶಾಸ್ತ್ರವು ಸಂಪೂರ್ಣವಾಗಿ ಅಸಂಬದ್ಧವಾಗಿದೆ ಎಂದು ಹೇಳಿದ್ದಾರೆ.
ಭಾರತದ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇಕಡಾ 25 ರಷ್ಟು ಸುಂಕವನ್ನು ವಿಧಿಸುವ ಮೂಲಕ ಮತ್ತು ತರುವಾಯ ಅದನ್ನು ಶೇಕಡಾ 50 ಕ್ಕೆ ದ್ವಿಗುಣಗೊಳಿಸುವ ಮೂಲಕ ಭಾರತದ ವಿರುದ್ಧ ತಮ್ಮ ಸುಂಕದ ದಾಳಿ ನಡೆಸಿದ್ದಾರೆ. ಜವಳಿ, ಸಾಗರ ಮತ್ತು ಚರ್ಮದ ರಫ್ತುಗಳಂತಹ ಕ್ಷೇತ್ರಗಳ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿರುವ “ಅನ್ಯಾಯಯುತ, ನ್ಯಾಯಸಮ್ಮತವಲ್ಲದ ಮತ್ತು ಅವಿವೇಕದ” ಕ್ರಮವನ್ನು ಭಾರತ ಖಂಡಿಸಿದೆ. ಆರ್ಥಿಕ ಒತ್ತಡದ ನಡುವೆಯೂ ಭಾರತ ಈ ವಿಚಾರದಿಂದ ಹಿಂದೆ ಸರಿಯುವುದಿಲ್ಲ. ಹಾಗೂ ಭಾರತ ರೈತರ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದು ಎಂದು ನರೇಂದ್ರ ಮೋದಿ ಹೇಳಿದ್ದಾರೆ
