Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತದ ಮೇಲೆ ಟ್ರಂಪ್ ಸುಂಕ ಹೇರಿಕೆಗೆ ಅಮೆರಿಕದಲ್ಲಿ ಭಾರಿ ವಿರೋಧ

Spread the love

ವಾಷಿಂಗ್ಟನ್‌ ಡಿಸಿ: ಭಾರತದ ಸರಕುಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ವಿರುದ್ಧ‌, ಅಮೆರಿಕದಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಅಮೆರಿಕದ ಅನೇಕ ರಾಜಕಾರಣಿಗಳು ಮತ್ತು ಆರ್ಥಿಕ ತಜ್ಞರು, ಭಾರತದ ಮೇಲಿನ ಡೊನಾಲ್ಡ್‌ ಟ್ರಂಪ್‌ ಅವರ ಸುಂಕ ಕೋಪವನ್ನು” ಅನಗತ್ಯ” ಎಂದು ಕರೆದಿದ್ದಾರೆ.

ಈ ಕುರಿತು ಮಾತನಾಡಿರುವ ಯುಎಸ್ ಕಾಂಗ್ರೆಸ್‌ನ ಡೆಮಾಕ್ರೆಟಿಕ್ ಸದಸ್ಯ ಗ್ರೆಗೊರಿ ಮೀಕ್ಸ್, “ಡೊನಾಲ್ಡ್‌ ಟ್ರಂಪ್‌ ಅವರ ಅನಗತ್ಯ ಸುಂಕಗಳು
ವಾಷಿಂಗ್ಟನ್ ಮತ್ತು ನವದೆಹಲಿ ನಡುವೆ ಬಲವಾದ ಪಾಲುದಾರಿಕೆಯನ್ನು ನಿರ್ಮಿಸಲು ನಡೆಸಿದ ಎರಡು ದಶಕಗಳ ಪ್ರಯತ್ನವನ್ನು ಅಪಾಯಕ್ಕೆ ಸಿಲುಕಿಸಿದೆ” ಎಂದು ತೀವ್ರವಾಗಿ ಟೀಕಿಸಿದ್ದಾರೆ.

“ನಾವು ಭಾರತದೊಂದಿಗೆ ಆಳವಾದ ಕಾರ್ಯತಂತ್ರದ ಆರ್ಥಿಕ ಮತ್ತು ಸಾಮಾಜಿಕ ಸಂಬಂಧಗಳನ್ನು ಕಟ್ಟಲು ಎರಡು ದಶಕಗಳ ಕಾಲ ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ನಾವು ಯಾವುದೇ ಸಮಸ್ಯೆಗಳನ್ನು ನಮ್ಮ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಅನುಗುಣವಾಗಿ, ಪರಸ್ಪರ ಗೌರವಯುತ ರೀತಿಯಲ್ಲಿ ಪರಿಹರಿಸಬೇಕು. ಆದರೆ ಡೊನಾಲ್ಡ್‌ ಟ್ರಂಪ್‌ ಅವರು ಭಾರತದ ಮೇಲೆ ಅನ್ಯಾಯದ ಸುಂಕಗಳನ್ನು ಹೇರುವ ಮೂಲಕ, ದಶಕಗಳ ಪ್ರಯತ್ನಗಳಿಗೆ ತಣ್ಣೀರು ಎರಚುತ್ತಿದ್ದಾರೆ” ಎಂದು ಗ್ರೆಗೊರಿ ಮೀಕ್ಸ್ ಅಸಮಾಧಾನ ಹೊರಹಾಕಿದ್ದಾರೆ.

ಭಾರತದ ಸರಕುಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸುವ ಡೊನಾಲ್ಡ್‌ ಟ್ರಂಪ್‌ ಅವರ ನಿರ್ಧಾರ, ಭಾರತ-ಅಮೆರಿಕ ನಡುವಿನ ಕಾರ್ಯತಂತ್ರದ ರಾಜತಾಂತ್ರಿಕ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ ಎಂದು ಗ್ರೆಗೊರಿ ಮೀಕ್ಸ್‌ ಅಭಿಪ್ರಾಯಪಟ್ಟಿದ್ದಾರೆ” ಎಂದು
ವಿದೇಶಾಂಗ ನೀತಿ ಶಾಸನಕ್ಕೆ ಜವಾಬ್ದಾರರಾಗಿರುವ ಹೌಸ್ ಕಮಿಟಿ ತನ್ನ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಟ್ವೀಟ್‌ ಮಾಡಿದೆ.

ಎರಡು ದಶಕಗಳಲ್ಲಿ ಉಭಯಪಕ್ಷೀಯ ಪ್ರಯತ್ನದಿಂದ ಶ್ರಮದಾಯಕವಾಗಿ ನಿರ್ಮಿಸಲಾದ ಭಾರತ-ಯುಎಸ್ ಸಂಬಂಧಗಳ ಮೇಲೆ ಒತ್ತಡ ಹೇರುತ್ತಾ, ಡೊನಾಲ್ಡ್ ಟ್ರಂಪ್ ಕಳೆದ ತಿಂಗಳು ಭಾರತದ ಮೇಲೆ ಶೇ. 25ರಷ್ಟು ಮೂಲ ಸುಂಕವನ್ನು ವಿಧಿಸಿದ್ದಾರೆ. ಅಲ್ಲದೇ ರಷ್ಯಾದೊಂದಿಗೆ ತೈಲ ಒಪ್ಪಂದ ಮಾಡಿಕೊಂಡಿರುವುದಕ್ಕೆ, ದಂಡದ ರೂಪದಲ್ಲಿ ಶೇ. 25ರಷ್ಟು ಹೆಚ್ಚುವರಿ ಸುಂಕ ವಿಧಿಸಲಾಗಿದೆ. ನಮ್ಮ ಘನಿಷ್ಠ ಪಾಲುದಾರ ರಾಷ್ಟ್ರದೊಂದಿಗೆ ಟ್ರಂಪ್ ವ್ಯಾಪಾರ ಮಾತುಕತೆಗಳನ್ನು ಸ್ಥಗಿತಗೊಳಿಸಿದ್ದಾರೆ. ಇದು ಆತಂಕಕಾರಿ ಸಂಗತಿ” ಎಂದು ಗ್ರೆಗೊರಿ ಮೀಕ್ಸ್‌ ಕಿಡಿಕಾರಿದ್ದಾರೆ.

ಭಾರತ ಕೂಡ ಅಮೆರಿಕದ ಹೆಚ್ಚುವರಿ ಸುಂಕಗಳನ್ನು ತೀವ್ರವಾಗಿ ವಿರೋಧಿಸಿದ್ದು, ಇದನ್ನು “ಅನ್ಯಾಯ, ನ್ಯಾಯಸಮ್ಮತವಲ್ಲದ ಮತ್ತು ಅಸಮಂಜಸ” ಎಂದು ಕರೆದಿದೆ. ಅಲ್ಲದೇ ಭಾರತದ ವಿದೇಶಾಂಗ ಸಚಿವಾಲಯವು, “ರಾಷ್ಟ್ರೀಯ ಹಿತಾಸಕ್ತಿ ರಕ್ಷಿಸುವ ಭರವಸೆ ನೀಡಿದೆ. ಅಲ್ಲದೇ ಈ ನಿಟ್ಟಿನಲ್ಲಿ ಎಲ್ಲಾ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ.

ಅದೇ ರೀತಿ ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ ಕೂಡ ಅಮೆರಿಕದ ಸುಂಕ ಹೇರಿಕೆಯನ್ನು ಖಂಡಿಸಿದ್ದು, ಇದು ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಸಂಬಂಧಕ್ಕೆ “ತೀವ್ರ ಹಿನ್ನಡೆ” ಉಂಟು ಮಾಡಿದೆ ಎಂದು ಹೇಳಿದೆ. ಒಟ್ಟಿನಲ್ಲಿ ಡೊನಾಲ್ಡ್‌ ಟ್ರಂಪ್‌ ಅವರ ಸುಂಕ ಕೋಪಕ್ಕೆ ಅಮೆರಿಕದಲ್ಲೇ ವಿರೋಧ ವ್ಯಕ್ತವಾಗುತ್ತಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಭಾರತದ ಮೇಲಿನ ಅಮೆರಿಕದ ಸುಂಕ ನಿರ್ಧಾರವನ್ನು ಚೀನಾ ವಿರೋಧ ಮಾಡಿದೆ.


Spread the love
Share:

administrator

Leave a Reply

Your email address will not be published. Required fields are marked *