ಡೆತ್ ನೋಟ್ ವೆಬ್ ಸಿರೀಸ್ ಪ್ರಭಾವದಿಂದ ನಡೆಯಿತಾ 7ನೇ ಕ್ಲಾಸ್ ಬಾಲಕನ ಆತ್ಮಹತ್ಯೆ?

ಶೋ ಸ್ಪರ್ಧಿ ಸವಿತಾ ಹಾಗೂ ಗಣೇಶ್ ಪ್ರಸಾದ್ ಮಗ ಗಾಂಧಾರ ಆತ್ಮ*ಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾನೆ. ಆದರೆ ಇದಕ್ಕೆ ನಿಖರವಾದ ಕಾರಣ ಏನು ಎಂದು ರಿವೀಲ್ ಆಗಿರಲಿಲ್ಲ. ಈಗ ಈ ಸಾವಿಗೆ ವೆಬ್ ಸಿರೀಸ್ ಕಾರಣ ಎಂಬ ಮಾಹಿತಿ ಹೊರಬಂದಿದೆ.

ಬನಗಿರಿಯಲ್ಲಿ ಗಾಂಧಾರನ ಮನೆಯಿತ್ತು. ಬನಶಂಕರಿಯ ಶಾಲೆಯಲ್ಲಿ ಆತ ಓದುತ್ತಿದ್ದನು. ಆಗಸ್ಟ್ 3ರ ರಾತ್ರಿ ಗಾಂಧಾರ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾನೆ. ಚೆನ್ನಮ್ಮನ ಕೆರೆಅಚ್ಚು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಡೆತ್ ನೋಟ್‌ನಲ್ಲಿ ಏನಿತ್ತು?
7ನೇ ಕ್ಲಾಸ್ ಹುಡುಗ ಮನೆಯಲ್ಲಿ ರಾತ್ರಿ ಡೆತ್ ನೋಟ್ ಬರೆದಿಟ್ಟು ನೇಣು ಹಾಕಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಬೆಡ್ ಮೇಲೆ ಪಿಯಾನೋ ಇಟ್ಟು, ಅದರ ಮೇಲೆ ಬೆಡ್‌ಶೀಟ್ ಹೊದಿಸಿ ಸಾವನ್ನಪ್ಪಿದ್ದಾನೆ. ಡೆತ್‌ನೋಟ್‌ನಲ್ಲಿ, “ಈ ಪತ್ರ ಓದುತ್ತಿರುವವರು ಅಳಬೇಡಿ, ನಾನು ಈಗಾಗಲೇ ಸತ್ತು ಸ್ವರ್ಗದಲ್ಲಿದ್ದೇನೆ. ನನ್ನನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ, ನಿಮ್ಮ ಈಗಿನ ಸ್ಥಿತಿ ಹೇಗಿದೆ ಅಂತ ಗೊತ್ತು, ನಿಮಗೆ ನೋವಾಗತ್ತೆ ಅಂತ ಕೂಡ ಗೊತ್ತಿದೆ. ಈ ಮನೆ ಚೆನ್ನಾಗಿರಬೇಕು ಅಂತ ಹೀಗೆ ಮಾಡಿದೆ. ನನ್ನಿಂದ ನೀವು ನೊಂದಿದ್ದೀರಾ. ನಿಮಗೆ ತೊಂದರೆ ಕೊಟ್ಟಿರುವೆ, ನಿಮ್ಮನ್ನು ನೋಯಿಸೋದು ನನ್ನ ಉದ್ದೇಶ ಅಲ್ಲ. ನನ್ನ ಮೇಲೆ ನಿಮಗೆ ಕೋಪ ಇದ್ದರೆ ಕ್ಷಮೆ ಕೇಳುವೆ. ಹದಿನಾಲ್ಕು ವರ್ಷಗಳ ಕಾಲ ನಾನು ಬದುಕಿದ್ದು, ಅದರಲ್ಲಿ ಸಂತೃಪ್ತಿ ಹೊಂದಿದ್ದೇನೆ. ನಾನು ಸ್ವರ್ಗದಲ್ಲಿ ಖುಷಿಯಾಗಿರುವೆ. ನನ್ನ ಸ್ನೇಹಿತರನ್ನು ಪ್ರೀತಿಸುತ್ತಿದ್ದೆ, ಎಲ್ಲರನ್ನೂ ಮಿಸ್ ಮಾಡಿಕೊಳ್ತೀನಿ, ಗುಡ್‌ಬೈ” ಎಂದು ಆತ ಬರೆದಿಟ್ಟುಕೊಳ್ತೀನಿ ಎಂದಿದ್ದಾರೆ.
ಸಾಯುವ ದಿನ ಏನಾಯ್ತು?
ಸವಿತಾ ಅವರು ಗಾಯನ ಕಾರ್ಯಕ್ರಮಕ್ಕೆಂದು ಆಸ್ಟ್ರೇಲಿಯಾಕ್ಕೆ ಹೋಗಿದ್ದರು. ಬೆಳಗ್ಗೆ ಮೊದಲು ಎದ್ದ ತಂದೆ ಹಿರಿಯ ಮಗನಿಗೆ, ನಿನ್ನ ತಮ್ಮನನ್ನು ಎಬ್ಬಿಸು, ನಾಯಿಯನ್ನು ಕರೆದುಕೊಂಡು ಹೊರಗಡೆ ಹೋಗಲಿ ಎಂದು ಹೇಳಿದ್ದಾರೆ. ಆಗ ಹಿರಿಯ ಮಗ ರೂಮ್‌ವೊಳಗಡೆ ಹೋದಾಗ ನೇಣು ಹಾಕಿಕೊಂಡಿರೋದು ಬೆಳಕಿಗೆ ಬಂದಿದೆ. ಪೊಲೀಸರು ಈ ಬಗ್ಗೆ ತನಿಖೆ ಮಾಡಿದ್ದಾರೆ. ಆ ಒಂದಷ್ಟು ವಿಷಯಗಳು ಹೊರಗಡೆ ಬಂದಿದೆ.
Death Note ವೆಬ್ ಸಿರೀಸ್‌ನಲ್ಲಿ ಏನಿದೆ?
ಗಾಂಧಾರ್ Death Note ಎಂಬ ವೆಬ್ ಸಿರೀಸ್ ನೋಡುತ್ತಿದ್ದ..! ಇದು ಜಪಾನೀಸ್ ಭಾಷೆಯ ವೆಬ್ ಸಿರೀಸ್ ಆಗಿತ್ತು. ಗಾಂಧಾರ್ ಈ ವೆಬ್ ಸಿರೀಸ್‌ನಿಂದ ಪ್ರೇರಣೆಗೊಂಡಿದ್ದ ಎಂಬುದು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಬಯಲಾಗಿತ್ತು. ತನ್ನ ರೂಮ್‌ನಲ್ಲೆಲ್ಲ Death Note ವೆಬ್ ಸಿರೀಸ್‌ನ ಪಾತ್ರಗಳ ಚಿತ್ರ ಬಿಡಿಸಿದ್ದ. ತನ್ನ ರೂಮ್‌ನಲ್ಲಿ ವೆಬ್ ಸಿರೀಸ್‌ನಲ್ಲಿ ಬರುವ ಪಾತ್ರ ಚಿತ್ರ ಬರೆದಿದ್ದನು. Death Note ವೆಬ್ ಸಿರೀಸ್‌ನ ಪ್ರಭಾವದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಷ್ಟೇ ಅಲ್ಲದೆ ಆಧ್ಯಾತ್ಮಿಕದತ್ತ ಮುಖ ಮಾಡಿದ್ದನು.
ಡೆತ್ ನೋಟ್ ಎನ್ನುವ ವೆಬ್ ಸಿರೀಸ್‌ನಲ್ಲಿ ಲೈಟ್ ಯಾಗಮಿ ಎನ್ನುವವನು ಓರ್ವ ಸಾಮಾನ್ಯ ಕಾಲೇಜು ವಿದ್ಯಾರ್ಥಿಯಾಗಿದ್ದು, ಅವನಿಗೆ ಡೆತ್ ನೋಟ್ ಎನ್ನುವ ನೋಟ್‌ಬುಕ್ ಸಿಗುತ್ತದೆ, ಅದು ತನ್ನ ಪುಟಗಳಲ್ಲಿ ಹೆಸರು ಬರೆದಿರುವ ಯಾರನ್ನಾದರೂ ಕೊಲ್ಲಬಹುದು. ಇದು ಈ ಸಿರೀಸ್‌ನ ಒನ್‌ಲೈನ್ ಸ್ಟೋರಿ.
