ಗೊಬ್ಬರಕ್ಕಾಗಿ ಸರತಿ ಸಾಲು: ಶಾಲೆಗೆ ರಜೆ ಹಾಕಿ ನಿಂತ ರೈತರ ಮಕ್ಕಳು

ಹುಬ್ಬಳ್ಳಿ: ಮುಂಗಾರು ಮಳೆ ಮತ್ತೆ ಚುರುಕುಗೊಂಡ ಬೆನ್ನಲ್ಲೇ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿರುವ ಕಾರಣ ರೈತರು ತಮ್ಮ ಮಕ್ಕಳನ್ನು ಕಳುಹಿಸದೆ ಸರತಿ ಸಾಲಿನಲ್ಲಿ ನಿಲ್ಲಿಸುವ ದುಃಸ್ಥಿತಿ ನಿರ್ಮಾಣವಾಗಿದೆ. ವಯೋವೃದ್ಧರು ಕೂಡ 5ರಿಂದ 6 ಗಂಟೆಗಳ ಕಾಲ ನಿಲ್ಲುತ್ತಿದ್ದಾರೆ.

“ಒಂದು ಆಧಾರ್ ಕಾರ್ಡ್ಗೆ ಕೇವಲ ಎರಡು ಚೀಲ ಗೊಬ್ಬರ’ ನಿಯಮದಿಂದ ರೈತರು ತಮ್ಮ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಸಹಿತ ಸರತಿಯಲ್ಲಿ ನಿಲ್ಲುತ್ತಿದ್ದಾರೆ. ಚಿತ್ರದುರ್ಗದ ಕೃಷಿ ಇಲಾಖೆ ಕಚೇರಿ ಬಳಿ ಗುರುವಾರ ಶಾಲೆಗೆ ತೆರಳಬೇಕಿದ್ದ ರೈತರ ಮಕ್ಕಳು ಸಹ ಬೆಳಗ್ಗೆಯೇ ಬಂದು ಆಧಾರ್ ಕಾರ್ಡ್ ಸಹಿತ ಸರತಿ ಸಾಲಿನಲ್ಲಿ ನಿಂತಿದ್ದರು. ರೈತ ಮಹಿಳೆಯರು, ವಯಸ್ಸಾದವರು, ಪುರುಷರು, ಮಕ್ಕಳು ಸೇರಿ ದೂರದ ಊರುಗಳಿಂದ ಬೆಳಗಿನ ಜಾವ ಮೂರು ಗಂಟೆಗೆ ಬಂದು ರೈತರು ಯೂರಿಯಾಗೆ ಸರತಿ ಸಾಲಿನಲ್ಲಿ ನಿಂತಿದ್ದರು.