Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

NCERT ಪಠ್ಯಪುಸ್ತಕಗಳಿಂದ ಟಿಪ್ಪು ಸುಲ್ತಾನ್ ಕೈಬಿಟ್ಟಿದ್ದಕ್ಕೆ ಕೇಂದ್ರ ಸರ್ಕಾರದ ಸಮರ್ಥನೆ

Spread the love

ಹೊಸದಿಲ್ಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ(NCERT)ಯ 8ನೇ ತರಗತಿ ಪಠ್ಯಪುಸ್ತಕಗಳಿಂದ ಟಿಪ್ಪು ಸುಲ್ತಾನ್, ರಝಿಯಾ ಸುಲ್ತಾನ್ ಹಾಗೂ ನೂರ್ ಜಹಾನ್ ರಂತಹ ಚಾರಿತ್ರಿಕ ವ್ಯಕ್ತಿಗಳನ್ನು ಕೈಬಿಟ್ಟಿರುವ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರಕಾರ, ಈ ನಿರ್ಧಾರಕ್ಕೆ ಪಠ್ಯಕ್ರಮದ ಉದ್ದೇಶ ಕಾರಣ ಎಂದು ಸಮಜಾಯಿಷಿ ನೀಡಿದೆ

ಈ ಕುರಿತು ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ರಿತಾಂಬರ ಬ್ಯಾನರ್ಜಿ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಕೇಂದ್ರ ಶಿಕ್ಷಣ ಇಲಾಖೆಯ ರಾಜ್ಯ ಸಚಿವ ಜಯಂತ್ ಚೌಧರಿ, “ಆರನೆಯ ತರಗತಿಯಿಂದ ಎಂಟನೆ ತರಗತಿವರೆಗಿನ ಪಠ್ಯಪುಸ್ತಕಗಳ ಉದ್ದೇಶವು, ಇತಿಹಾಸಪೂರ್ವ ಕಾಲಘಟ್ಟದಿಂದ ಸ್ವಾತಂತ್ರ್ಯದವರೆಗೆ ವಿಸ್ತಾರವಾದ ಸಮೀಕ್ಷೆ ಒದಗಿಸುವುದಾಗಿದೆ. ಪಠ್ಯಪುಸ್ತಕಗಳಲ್ಲಿ ಚಾರಿತ್ರಿಕ ವ್ಯಕ್ತಿಗಳ ಸೇರ್ಪಡೆಯನ್ನು ಸಂದರ್ಭೋಚಿತವಾಗಿ ಹಾಗೂ ಪಠ್ಯಕ್ರಮದ ಉದ್ದೇಶಕ್ಕನುಗುಣವಾಗಿ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

ಕಳೆದ ತಿಂಗಳು ಈ ಶೈಕ್ಷಣಿಕ ವರ್ಷಕ್ಕೆ ಎಂಟನೆ ತರಗತಿಯ ವಿದ್ಯಾರ್ಥಿಗಳಿಗೆ ಹೊಸ ಸಾಮಾಜಿಕ ವಿಜ್ಞಾನ ಪಠ್ಯಕಪುಸ್ತಕವನ್ನು ಬಿಡುಗಡೆ ಮಾಡಿದ ನಂತರ, ಕೇಂದ್ರ ಸರಕಾರವು ಬೋಧಕ ವರ್ಗ ಹಾಗೂ ಶಿಕ್ಷಣ ತಜ್ಞರಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಈ ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್, ಹೈದರ್ ಅಲಿ, ನಾಲ್ಕು ಆಂಗ್ಲೊ-ಮೈಸೂರು ಯುದ್ಧಗಳು, ರಝಿಯಾ ಸುಲ್ತಾನ್ ಹಾಗೂ ನೂರ್ ಜಹಾನ್ ರಂತಹ ಪ್ರಮುಖ ಚಾರಿತ್ರಿಕ ವ್ಯಕ್ತಿಗಳ ಪಠ್ಯಗಳನ್ನು ಕೈಬಿಟ್ಟಿರುವುದರತ್ತ ಅವರು ಬೊಟ್ಟು ಮಾಡಿದ್ದರು.

ಈ ಕುರಿತು ಸ್ಪಷ್ಟೀಕರಣ ನೀಡಿದ ಜಯಂತ್ ಚೌಧುರಿ, ಈ ಪಠ್ಯಪುಸ್ತಕವು ಸಮಗ್ರ ಸಾಮಾಜಿಕ ವಿಜ್ಞಾನ ಸಂಪನ್ಮೂಲವಾಗಿದ್ದು, ಅದನ್ನು ಭಾರತ ಮತ್ತು ಜಗತ್ತು: ಭೂಮಿ ಮತ್ತು ಜನರು, ಭೂತಕಾಲದ ಉಡುಪುಗಳು, ಆಡಳಿತ ಮತ್ತು ಪ್ರಜಾಪ್ರಭುತ್ವ ಹಾಗೂ ನಮ್ಮ ಸುತ್ತಲಿನ ಆರ್ಥಿಕ ಜೀವನ ಎಂಬ ನಾಲ್ಕು ವಿಷಯಗಳನ್ನಾಗಿ ವಿಭಜಿಸಲಾಗಿದೆ. ಈ ವಿಷಯಗಳಲ್ಲಿ ಚಾರಿತ್ರಿಕ ವ್ಯಕ್ತಿಗಳನ್ನು ಸಂದರ್ಭೋಚಿತವಾಗಿ ಹಾಗೂ ಪಠ್ಯಕ್ರಮ ಉದ್ದೇಶದ ಅಗತ್ಯಕ್ಕನುಗುಣವಾಗಿ ಸೇರ್ಪಡೆ ಮಾಡಲಾಗಿದೆ. ನೂತನ ಪಠ್ಯಪುಸ್ತಕಗಳು ಸುಧಾರಿತ ಶಿಕ್ಷಣ ಶಾಸ್ತ್ರವನ್ನೂ ಒಳಗೊಂಡಿದೆ ಹಾಗೂ ದೂರದೃಷ್ಟಿ ಹೊಂದಿದ ಪಠ್ಯಾಕ್ರಮದ ಪೂರೈಕೆ ಹಾಗೂ ಸುಧಾರಿತ ತರಗತಿ ಅಭ್ಯಾಸಗಳನ್ನು ಅಳವಡಿಸಿಕೊಂಡಿವೆ ಎಂದು ಸಮರ್ಥಿಸಿಕೊಂಡರು.

ಪಠ್ಯಪುಸ್ತಕದಲ್ಲಿ ಹೆಸರಾಂತ ಮುಸ್ಲಿಂ ದೊರೆಗಳು ಹಾಗೂ ಪ್ರಮುಖ ಐತಿಹಾಸಿಕ ಸಂಗತಿಗಳನ್ನು ಕೈಬಿಡಲಾಗಿದೆ ಎಂಬ ಕಳವಳಕ್ಕೆ ಪ್ರತಿಕ್ರಿಯಿಸಿದ ಅವರು, ಭೂತಕಾಲದ ಶಿಕ್ಷಣವು ರಾಣಿ ದುರ್ಗಾದೇವಿ, ಅಹಿಲ್ಯಾಬಾಯಿ ಹೋಳ್ಕರ್, ಒಂದನೇ ರಾಣಿ ಅಬ್ಬಕ್ಕ ಹಾಗೂ ಬೇಗಂ ಹಝ್ರತ್ ಮಹಲ್ ರಂತಹ ಮಹಿಳಾ ನಾಯಕಿಯರ ಪಠ್ಯಗಳನ್ನು ಒಳಗೊಂಡಿದೆ ಎಂದು ಸ್ಪಷ್ಟನೆ ನೀಡಿದರು.

“ರಾಜ್ಯಗಳು ಇಚ್ಛೆಯಂತೆ NCERT ಪಠ್ಯಪುಸ್ತಕಗಳನ್ನು ಅಳವಡಿಸಬಹುದು ಅಥವಾ ರಾಷ್ಟ್ರೀಯ ಪಠ್ಯಚೌಕಟ್ಟಿನ ಆಧಾರದ ಮೇಲೆ ತಮ್ಮದೇ ಆದ ಪಠ್ಯಪುಸ್ತಕಗಳನ್ನು ಅಭಿವೃದ್ಧಿಪಡಿಸಬಹುದು. ರಾಜ್ಯಗಳು ತಮ್ಮ ಪಠ್ಯಪುಸ್ತಕಗಳಲ್ಲಿ ಪ್ರಾದೇಶಿಕ ವ್ಯಕ್ತಿತ್ವಗಳು ಹಾಗೂ ಸ್ಥಳೀಯ ಐತಿಹಾಸಿಕ ಘಟನೆಗಳ ಕುರಿತು ಹೆಚ್ಚು ಮಾಹಿತಿಯನ್ನು ನೀಡಬಹುದು”, ಎಂದು ಸಚಿವ ಚೌಧರಿ ಹೇಳಿದರು.

ಹಳೆಯ 7ನೇ ತರಗತಿಯ ಇತಿಹಾಸ ಪಠ್ಯಪುಸ್ತಕದಲ್ಲಿ ದಿಲ್ಲಿ ಸುಲ್ತಾನರು ಮತ್ತು ಮೊಘಲ್ ಸಾಮ್ರಾಜ್ಯದ ಬಗ್ಗೆ ವಿವರವಾದ ಮಾಹಿತಿಯಿತ್ತು. ಆದರೆ ಇತ್ತೀಚೆಗೆ ಬಿಡುಗಡೆಗೊಂಡಿರುವ ಹೊಸ ಆವೃತ್ತಿಯಲ್ಲಿ ಇತಿಹಾಸವು ಈಗ 12ನೇ ಶತಮಾನಕ್ಕೂ ಮೊದಲು ಕೊನೆಗೊಳ್ಳುತ್ತಿದೆ. ದಿಲ್ಲಿ ಸುಲ್ತಾನರು ಹಾಗೂ ಮೊಘಲ್ ಸಾಮ್ರಾಜ್ಯದ ಕುರಿತ ಪ್ರಮುಖ ವಿಷಯಗಳನ್ನು ಕೈಬಿಡಲಾಗಿದೆ. ಅವುಗಳನ್ನು ಈಗ 8ನೇ ತರಗತಿಯ ಹೊಸ ಪಠ್ಯಪುಸ್ತಕದ ಪ್ರಾರಂಭದಲ್ಲಿ ಸೇರಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *