Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಟ್ರಂಪ್ ಆರೋಪ ಸುಳ್ಳು: ಭಾರತ ಹೆಚ್ಚು ಟ್ಯಾರಿಫ್ ಹಾಕುತ್ತಿಲ್ಲ ಎಂಬುದಕ್ಕೆ ದತ್ತಾಂಶ ಸಾಕ್ಷಿ

Spread the love

ನವದೆಹಲಿ: ಡೊನಾಲ್ಡ್ ಟ್ರಂಪ್ ಅವರು ಭಾರತ ವಿಶ್ವದಲ್ಲೇ ಹೆಚ್ಚು ಟ್ಯಾರಿಫ್ ವಿಧಿಸುವ ದೇಶ ಎಂದು ಪದೇ ಪದೇ ಹಂಗಿಸುತ್ತಲೇ ಇದ್ದಾರೆ. ಟ್ರಂಪ್ ಸರ್ಕಾರದ ಕೆಲವರು ಭಾರತವನ್ನು ಟ್ಯಾರಿಫ್​ಗಳ ಮಹಾರಾಜ ಎಂದೂ ಮೂದಲಿಸಿರುವುದುಂಟು. ರಷ್ಯನ್ ತೈಲ ಖರೀದಿ ಇತ್ಯಾದಿ ಇನ್ನೂ ಹಲವು ಕುಂಟು ನೆಪಗಳನ್ನು ಹೇಳಿ ಭಾರತದ ಸರಕುಗಳ ಮೇಲೆ ಅಮೆರಿಕ ಮನಬಂದತೆ ಆಮದು ಸುಂಕಗಳನ್ನು ಹೇರುತ್ತಿದೆ ಅಮೆರಿಕ. ಭಾರತವು ವಿದೇಶಗಳಿಂದ ಬರುವ ಸರಕುಗಳ ಮೇಲೆ ಸುಂಕ ಹಾಕುವುದು ಹೌದು. ಆದರೆ, ಟ್ರಂಪ್ ಆರೋಪಿಸಿರುವಷ್ಟು ದೊಡ್ಡ ಪ್ರಮಾಣದಲ್ಲಿ ಸುಂಕ ಹೇರಿಕೆ ಮಾಡುತ್ತಿದೆ ಎನ್ನುವುದು ಸುಳ್ಳು. ಇದಕ್ಕೆ ವಿವಿಧ ದತ್ತಾಂಶಗಳೇ ಸಾಕ್ಷಿಯಾಗಿವೆ.

ಅಮೆರಿಕಕ್ಕೆ ಭಾರತ ಅತಿಯಾಗಿ ಟ್ಯಾರಿಫ್ ಹಾಕುತ್ತಿಲ್ಲ…

ಭಾರತದ ಸರಾಸರಿ ಸುಂಕವು ಶೇ. 4.6 ಇದೆ. ಅಮೆರಿಕದ ಸರಕುಗಳಿಗೆ ಭಾರತ ಹಾಕುತ್ತಿರುವ ಸುಂಕವೂ ಸರಾಸರಿಯಾಗಿ ಶೇ. 4.6ರಷ್ಟಿದೆ. ಯೂರೋಪಿಯನ್ ಯೂನಿಯನ್ (ಶೇ. 5), ವಿಯೆಟ್ನಾಂ (ಶೇ. 5.1), ಇಂಡೋನೇಷ್ಯಾ (ಶೇ. 5.7), ಬಾಂಗ್ಲಾದೇಶ (ಶೇ. 10.6) ಇತ್ಯಾದಿ ದೇಶಗಳಿಗೆ ಹೋಲಿಸಿದರೆ ಭಾರತವು ವಿಧಿಸುತ್ತಿರುವ ಸರಾಸರಿ ಟ್ಯಾರಿಫ್ ಕಡಿಮೆಯೇ ಇದೆ.

ಅಮೆರಿಕದಿಂದ ಭಾರತಕ್ಕೆ ಬರುವ ಶೇ. 45ರಷ್ಟು ಸರಕುಗಳಿಗೆ ಹಾಕಲಾಗುತ್ತಿರುವ ಟ್ಯಾರಿಫ್ ಶೇ. 5ಕ್ಕಿಂತಲೂ ಕಡಿಮೆ. ಇನ್ನೂ ಬಹಳಷ್ಟವಕ್ಕೆ ಶೇ. 10ಕ್ಕಿಂತಲೂ ಕಡಿಮೆ ಸುಂಕ ಹಾಕಲಾಗುತ್ತಿದೆ.

ಕಳೆದ 30-35 ವರ್ಷದಲ್ಲಿ ಭಾರತವು ವಿಧಿಸುತ್ತಿರುವ ಸುಂಕದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. 1990ರಲ್ಲಿ ಭಾರತ ಶೇ. 56ರಷ್ಟು ಟ್ಯಾರಿಫ್ ಹಾಕುತ್ತಿತ್ತು. ಈಗ ಶೇ. 4.6ಕ್ಕೆ ಇಳಿದಿದೆ.

ಅಮೆರಿಕದಿಂದ ಬರುವ ಕಚ್ಛಾ ತೈಲ, ಎಲ್​ಎನ್​ಜಿ, ಕೈಗಾರಿಕಾ ಯಂತ್ರೋಪಕರಣ, ಔಷಧ ಇತ್ಯಾದಿ ಸರಕುಗಳಿಗೆ ಬಹಳ ಕಡಿಮೆ ಟ್ಯಾರಿಫ್ ಇದೆ. ಪ್ರತೀ ಟನ್ ಕಚ್ಛಾ ತೈಲಕ್ಕೆ 1.1 ರೂ, ಎಲ್​ಎನ್​ಜಿಗೆ ಶೇ. 2.75 ಸುಂಕ ಹಾಕುತ್ತದೆ ಭಾರತ.

ಅಮೆರಿಕದ ಫಾರ್ಮಾ ಉತ್ಪನ್ನಗಳಿಗೆ ಸೊನ್ನೆಯಿಂದ ಶೇ. 7.5ರವರೆಗೆ, ಕಲ್ಲಿದ್ದಲಿಗೆ ಶೇ. 5, ವಿಮಾನ ಬಿಡಿಭಾಗಗಳಿಗೆ ಶೇ. 2.50, ರಸಗೊಬ್ಬರಗಳಿಗೆ ಶೇ. 7.5ರಿಂದ ಶೇ. 10 ಟ್ಯಾರಿಫ್​ಗಳನ್ನು ಭಾರತ ವಿಧಿಸುತ್ತಿದೆ.

ಕೃಷಿ ಮತ್ತು ಹಾಲು ಪದಾರ್ಥಗಳು?

ಹಾಲು ಮತ್ತು ಕೃಷಿ ಉತ್ಪನ್ನಗಳ ಮೇಲೆ ಭಾರತ ಶೇ. 33ರಷ್ಟು ಸುಂಕ ವಿಧಿಸುತ್ತದೆ. ರೈತರ ಹಿತರಕ್ಷಣೆ ದೃಷ್ಟಿಯಿಂದ ಅಧಿಕ ಟ್ಯಾರಿಫ್ ಇದೆ. ಜಪಾನ್, ಸೌತ್ ಕೊರಿಯಾ ಇತ್ಯಾದಿ ಹಲವು ದೇಶಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದ ಟ್ಯಾರಿಫ್ ಇದೆ. ಟ್ರಂಪ್ ಅವರು ಭಾರತವನ್ನು ಮಾತ್ರ ಎತ್ತಿ ತೋರಿಸುತ್ತಿರುವುದು ಅವರ ಆರೋಪದ ಹಿಂದೆ ಬೇರಾವುದೋ ಉದ್ದೇಶ ಇರುವುದನ್ನು ಸೂಚಿಸುತ್ತದೆ.


Spread the love
Share:

administrator

Leave a Reply

Your email address will not be published. Required fields are marked *