Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವರಮಹಾಲಕ್ಷ್ಮೀ ಹಬ್ಬಕ್ಕೆ ಸಿದ್ಧತೆ: ಹೂ-ಹಣ್ಣುಗಳ ಬೆಲೆ ಏರಿಕೆ; ಮಾರುಕಟ್ಟೆಗಳಲ್ಲಿ ಜನದಟ್ಟಣೆ

Spread the love

ಬೆಂಗಳೂರು-ವರಮಹಾಲಕ್ಷ್ಮೀ ಹಬ್ಬಕ್ಕೆ ಇನ್ನೊಂದು ದಿನ ಬಾಕಿ ಇರುವಂತೆಯೇ ಬೆಲೆ ಏರಿಕೆಯ ನಡುವೆ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳು, ಪೂಜಾ ಸಾಮಾಗ್ರಿಗಳ ಖರೀದಿ ಭರಾಟೆ ಜೋರಾಗಿದೆ.

ಹಬ್ಬಗಳ ಸಂದರ್ಭದಲ್ಲಿ ಹೂ, ಹಣ್ಣುಗಳ ಬೆಲೆ ಏರಿಕೆ ಮಾಮೂಲಿ.

ಅದರೆ ವರಮಹಾಲಕ್ಷ್ಮೀ ಹಬ್ಬದಲ್ಲಿ ಬೆಲೆ ತುಸು ಹೆಚ್ಚಾಗಿಯೇ ಇರುತ್ತದೆ. ಹಬ್ಬದ ಹಿಂದಿನ ದಿನ ಖರೀದಿಗೆ ಹೋದರೆ ಬೆಲೆ ಹೆಚ್ಚಾಗಿರುತ್ತದೆ ಹಾಗೂ ಜನಜಂಗುಳಿ ಜಾಸ್ತಿ ಇರುತ್ತದೆ ಎಂದು ಜನರು ಖರೀದಿಗೆ ಇಂದೇ ಮಾರುಕಟ್ಟೆಗೆ ತೆರಳಿ ಖರೀದಿಯಲ್ಲಿ ತೊಡಗಿದ್ದಾರೆ.

ನಗರದ ಪ್ರಮುಖ ಮಾರುಕಟ್ಟೆ ಜೊತೆಗೆ ಮಿನಿ ಮಾರುಕಟ್ಟೆಗಳು , ರಸ್ತೆ ಬದಿ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಅದರಲ್ಲೂ ಕೆಆರ್‌ ಮಾರುಕಟ್ಟೆ ಹಾಗೂ ಯಶವಂತಪುರ ಮಾರುಕಟ್ಟೆಗಳಲ್ಲಿ ಇಂದು ಮುಂಜಾನೆ ಎಲ್ಲಿ ನೋಡಿದರೂ ಜನವೋ ಜನ. ಎತ್ತ ಕಣ್ಣು ಹಾಯಿಸಿದರೂ ಜನರೇ ಕಾಣುತ್ತಿದರು. ಅಷ್ಟರ ಮಟ್ಟಗೆ ಜನರು ಖರೀದಿಗೆ ಮಾರುಕಟ್ಟಗೆ ಬಂದಿದ್ದರು.

ಆಷಾಢ ಮಾಸದಲ್ಲಿ ಸ್ಥಿರತೆ ಕಾಯ್ದು ಕೊಂಡಿದ್ದ ಹೂ ಶ್ರಾವಣ ಮಾಸ ಬರುತ್ತಿದ್ದಂತೆ ಅರಳಿ ನಿಂತು ಬೆಲೆ ಗಗನಕ್ಕೇರಿದೆ, ಅದರದಲ್ಲೂ ಈ ತಿಂಗಳಲ್ಲೇ ಪ್ರಮುಖ ಹಬ್ಬಗಳು ಬಂದಿದ್ದು ಬೇಡಿಕೆ ಹೆಚ್ಚಾಗಿದ್ದು ಬೆಲೆಯೂ ಸಹ ದುಬಾರಿಯಾಗಿದೆ.

ಹೆಚ್ಚಾಗಿ ಹೂ ಬೆಳೆಯುವ ರಾಜ್ಯದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ದಾವಣಗೆರೆ ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಹಬ್ಬಕ್ಕೆಂದು ಬೆಳೆಯಲಾಗಿದ್ದ ಹೂ ಬೇಗ ಹಾಳಾಗುತ್ತಿದೆ, ಜೊತೆಗೆ ನೆರೆಯ ತಮಿಳುನಾಡು, ಆಂಧ್ರದಿಂದ ಬೆಂಗಳೂರಿಗೆ ಮಲ್ಲಿಗೆ, ಕನಕಾಂಬರ ಹೂ ಬರುತ್ತಿದ್ದವು ಆದರೆ ಈ ಭಾರಿ ಅಲ್ಲಿಯೂ ಸಹ ಬೆಳೆ ಇಲ್ಲದಂತಾಗಿದ್ದು ಪೂರೈಕೆ ಕಡಿಮೆಯಾಗಿದ್ದರಿಂದ ಬೆಲೆ ಹೆಚ್ಚಳವಾಗಿದೆ.

ವರಮಹಾಲಕ್ಷ್ಮೀ ಹಬ್ಬಕ್ಕೆ ಹೂ ಪ್ರಮುಖ ವಾಗಿರುತ್ತದೆ ಲಕ್ಷಿ ಪ್ರತಿಷ್ಟಾಪನೆಯ ಅಲಂಕಾರಕ್ಕೆಂದು ನಾನಾ ಬಗೆಯ ಹೂಗಳನ್ನು ಬಳಸಲಾಗುತ್ತದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಬಗೆಬಗೆಯ ಹೂಗಳು ಮಾರಾಟವಾಗುತ್ತಿದ್ದು, ಖರೀದಿಗಾಗಿ ಗ್ರಾಹಕರು ಮುಗಿಬಿದ್ದಿದ್ದ ದೃಶ್ಯ ಕೆಆರ್‌ ಮಾರುಕಟ್ಟೆಯಲ್ಲಿ ಕಂಡು ಬಂತು.

ಕನಕಾಂಬರ ಕೆಜಿಗೆ 1300 ರಿಂದ 1500 ರೂ., ಮಲ್ಲಿಗೆ 500 ರಿಂದ 800ರೂ.,ಕಾಕಡ 700ರೂ, ಸೇವಂತಿಗೆ 300ರೂ., ಬಟನ್ಸ್ 400ರೂ., ಸುಗಂಧರಾಜ 200 ರೂ., ತಾವರೆ ಹೂ ಜೋಡಿಗೆ 100 ರೂ.,ಸುನಾಮಿ ರೋಜ್‌ 150 ರೂ.ಗೆ ಮಾರಾಟವಾಗುತ್ತಿದೆ.

ಪೂಜೆಗೆ ಹೂ ಜೊತೆಗೆ ಹಣ್ಣುಗಳನ್ನು ಸಹ ಜೋಡಿಸಿ ಆಕರ್ಷಕವಾಗಿ ಅಲಂಕಾರ ಮಾಡಲಾಗುತ್ತೆ. ಈ ಹಿನ್ನಲೆಯಲ್ಲಿ ಹಣ್ಣುಗಳ ಬೆಲೆಯೂ ಸಹ ಜಾಸ್ತಿ ಇದೆ. ಏಲಕ್ಕಿ ಬಾಳೆ ಕೆಜಿಗೆ 120 ರೂ ನಿಂದ 150 , ೈನಾಪಲ್‌ ಜೋಡಿಗೆ 100 ರೂ. , ಮೂಸಂಬಿ 130, ಸೇಬು 250, ದಾಳಿಂಬೆ 260 , ಮಾವು 120 ರೂ.ಗೆ ಮಾರುಕಟ್ಟೆಯಲ್ಲಿ ಮರಾಟವಾಗುತ್ತಿದೆ .ಬಾಳೆ ಕಂದು ಜೋಡಿಗೆ 100, ಮಾವಿನ ಸೊಪ್ಪು ಕಟ್ಟು 50 ರೂ. ಇದ್ದು ನಗರದ ಜನತೆ ಇಂದೇ ಅಗತ್ಯ ವಸ್ತುಗಳನ್ನು ಖರೀದಿಸಿ ಹಬ್ಬದ ಸಿದ್ದತೆಯಲ್ಲಿ ತೊಡಗಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *