Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೈಕ್ ರೇಸ್ ಗಲಾಟೆ – ಗನ್ ಮ್ಯಾನ್-ಸ್ಥಳೀಯರ ನಡುವೆ ಭಾರಿ ಸಂಘರ್ಷ

Spread the love

ಈ ವೇಳೆ ಮೈನೆವರೇಳಿಸುವ ಬೈಕ್ ರೇಸ್ ದೃಶ್ಯ ಕಣ್ಣುಂಬಿಕೊಳ್ಳಲು ಸಾವಿರಾರು ಅಭಿಮಾನಿಗಳು ಕೂಡ ಭಾಗವಹಿಸಿದ್ದರು.ಈ ರೇಸ್ ನಲ್ಲಿ ಮಂಡ್ಯ ಮಾತ್ರವಲ್ಲದೇ ಇತರರೆ ಕಡೆಗಳಿಂದಲೂ ಬೈಕ್ ರೈಡರ್ಸ್ ಭಾಗಿಯಾಗಿದ್ದರು .ಆದ್ರೆ ಬೈಕ್ ರೇಸ್ ನಡೆಯುವ ವೇಳೆ ರಾಮನಗರ ಜಿಲ್ಲೆಯ ಜಿಲ್ಲಾಧಿಕಾರಿಯ ಗನ್ ಮ್ಯಾನ್ (Gun man) ಮತ್ತು ಸ್ಥಳಿಯರ ನಡುವೆ ಗಲಾಟೆ ನಡೆದಿದೆ. ಆದ್ರೆ ಯಾವ ವಿಚಾರಕ್ಕೆ ಗಲಾಟೆ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಕಳೆದ ತಿಂಗಳು (ಜು . 27ರಂದು) ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇದೀಗ ತಡವಾಗಿ ಬೆಳಕಿಗೆ. ಹೀಗೆ ರೇಸಿಂಗ್ ಆಯೋಜಿಸಿದ್ದ ವೇಳೆ ಕಿರಿಕ್ ಆರಂಭವಾಗಿದೆ.ಮಂಡ್ಯದ ಕೆ.ಆರ್.ಪೇಟೆಯಲ್ಲಿ ನಡೆದಿರುವ ಘಟ‌ನೆ ಇದಾಗಿದ್ದು, ಜಿಲ್ಲಾಧಿಕಾರಿಗಳ ಗನ್ ಮ್ಯಾನ್ ಮನ್ಸೂರ್ ಎಂಬಾತ ಬೈಕ್ ರೇಸ್ ವಿಚಾರವಾಗಿ ಸ್ಥಳೀಯರೊಟ್ಟಿಗೆ ಗಲಾಟೆ ಮಾಡಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.

ಈ ಮನ್ಸೂರ್ ಎಂಬತಹ ಕೂಡ ಮೂಲತಃ ಕೆ.ಆರ್.ಪೇಟೆ ನಿವಾಸಿಯಾಗಿದ್ದು, ಈತ ಮನ್ಸೂರ್ ಸ್ಥಳಿಯರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಆ ಬಳಿಕ ಸ್ಥಳೀಯರು ರೊಚ್ಚಿಗೆದ್ದಿದ್ದು,ನಾಲ್ಕೈದು ಜನ ಈತನ ಮೇಲೆ ಪ್ರತಿಯಾಗಿ ಹಲ್ಲೆನಡೆಸಿದ್ದಾರೆ. ಹೀಗೆ ಗಲಾಟೆ ಜೋರದಂತೆ ಕೂಡಲೇ ಮಧ್ಯ ಪ್ರವೇಶಿಸಿದ ಪೊಲೀಸರು ಲಾಠಿ ಚಾರ್ಜ್ ಮಾಡಿ ಜನರನ್ನು ಚದುರಿಸಿದ್ದಾರೆ.ಈ ಘಟನೆಯ ಕುರಿತು ಸದ್ಯ ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ರೇಸ್ ಗೆ ಯುವಕರು ಬಲಿ :

ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಬೈಕ್ ರೇಸಿಂಗ್ ಹುಚ್ಚಿಗೆ ಇಬ್ಬರು ಯುವಕರು ಪ್ರಾಣ ಕಳೆದುಕೊಂಡ ಘಟನೆ ಕಳೆದ ಜುಲೈ ತಿಂಗಳಲ್ಲಿ ನಡೆದಿತ್ತು.ಮಧ್ಯರಾತ್ರಿ ಸಂದರ್ಭದಲ್ಲಿ ಅನಧಿಕೃತವಾಗಿ ಬೈಕ್ ರೇಸ್ ಮಾಡ್ತಿದ್ದ ಯುವಕರ ಬೈಕ್ ಅಪಘಾತಕ್ಕೀಡಾಗಿ ಇಬ್ಬರೂ ಜೀವಬಿಟ್ಟಿದ್ದಾರೆ.ಮೈಸೂರಿನ ಬನ್ನಿಮಂಟಪದಲ್ಲಿ ಘಟನೆ ನಡೆದಿದ್ದು,ನೋಡ ನೋಡ್ತಿದ್ದಂತೆ ಬೈಕ್ ಹೊತ್ತಿ ಉರಿದಿತ್ತು. ರೇಸ್ ಮಾಡ್ತಿದ್ದ ಯುವಕರ ಬೈಕ್ ಗೆ ಫುಡ್ ಡೆಲಿವರಿ ಬಾಯ್ ಬೈಕ್ ಗೆ ಡಿಕ್ಕಿ ಹೊಡೆದಿದ್ದು,ಈ ವೇಳೆ ಆಯತಪ್ಪಿ ಬಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಘಟನೆಯ ಕುರಿತು ಬನ್ನಿಮಂಟಪ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಮಿಡ್ ನೈಟ್ ನಲ್ಲಿ ಇತ್ತೀಚೆಗೆ ರೇಸಿಂಗ್ ಹಾವಳಿ ಹೆಚ್ಚಾಗುತ್ತಿದ್ದು, ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.ಈ ಮಧ್ಯೆ ನಗರದಲ್ಲಿ ರಾತ್ರಿ ವೇಳೆ ನಡೆದಿರೋ ಈ ಘಟನೆಗೆ ಕೂಡ ಅನಧಿಕೃತ ಬೈಕ್ ರೇಸಿಂಗ್ ಕಾರಣ ಎಂದು ಪೋಕಿಸರು ಶಂಕಿಸಿದ್ದು ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *