ಉಕ್ರೇನ್ ದಾಳಿಯ ರಷ್ಯಾ ಡ್ರೋನ್‌ಗಳಲ್ಲಿ ಭಾರತೀಯ ಉಪಕರಣ? ಭಾರತ ಸ್ಪಷ್ಟನೆ

ರಷ್ಯಾ ತನ್ನ ವಿರುದ್ಧ ನಡೆಸಿದ ದಾಳಿಯಲ್ಲಿ ಬಳಸಿದ ಇರಾನ್ ನಿರ್ಮಿತ ಡ್ರೋನ್‌ಗಳಲ್ಲಿ, ಬೆಂಗಳೂರಿನ ಔರಾ ಸಂಸ್ಥೆ ಹಾಗೂ ಅಮೆರಿಕ ಮೂಲದ ಕಂಪನಿಯ ಎಲೆಕ್ಟ್ರಾನಿಕ್ ಉಪಕರಣಗಳು ಬಳಸಲ್ಪಟ್ಟಿವೆ ಎಂದು ಉಕ್ರೇನ್ ಕಳವಳ ವ್ಯಕ್ತಪಡಿಸಿದೆ. ಆದರೆ ಭಾರತ ಈ ಆರೋಪವನ್ನು ತಳ್ಳಿ ಹಾಕಿದೆ.

ಉಕ್ರೇನ್‌ನ ರಕ್ಷಣಾ ಅಧಿಕಾರಿಗಳ ತನಿಖೆಯಲ್ಲಿ, ರಷ್ಯಾ ಬಳಸಿದ ಶಹೆದ್-136 ಮಾನವ ರಹಿತ ಡ್ರೋನ್‌ಗಳಲ್ಲಿ ಬೆಂಗಳೂರು ಮೂಲದ ಔರಾ ಸೆಮಿಕಂಡಕ್ಟರ್ ಮತ್ತು ಅಮೆರಿಕದ ವಿಶಯ್ ಇಂಟರ್‌ಟೆಕ್ನಾಲಜಿ ತಯಾರಿಸಿದ ಎಲೆಕ್ಟ್ರಾನಿಕ್ ಉಪಕರಣಗಳು ಪತ್ತೆಯಾಗಿವೆ. ವಿಶಯ್ ಕಂಪನಿಯ ವೋಲ್ಟೇಜ್ ನಿಯಂತ್ರಕ ಹಾಗೂ ಔರಾ ತಯಾರಿಸಿದ ಸಿಗ್ನಲ್ ಜನರೇಟರ್ ಚಿಪ್ ಈ ಡ್ರೋನ್‌ಗಳಲ್ಲಿ ಬಳಸಲ್ಪಟ್ಟಿವೆ ಎಂದು ತನಿಖಾ ವರದಿ ತಿಳಿಸಿದೆ. ರಷ್ಯಾ ಈ ಮಾದರಿಯ ಡ್ರೋನ್‌ಗಳನ್ನು 2020ರಿಂದ ಬಳಸುತ್ತಿದೆ ಎಂದು ಉಕ್ರೇನ್ ಆರೋಪಿಸಿದೆ.
ಈ ಹಿನ್ನೆಲೆಯಲ್ಲಿ, ಉಕ್ರೇನ್ ಭಾರತ ಹಾಗೂ ಯುರೋಪಿಯನ್ ಒಕ್ಕೂಟಗಳ ಗಮನಕ್ಕೂ ಈ ವಿಷಯವನ್ನು ಅಧಿಕೃತವಾಗಿ ತಂದಿದೆ ಎಂದು ತಿಳಿದುಬಂದಿದೆ. ಆದರೆ, ಭಾರತ ಈ ಆರೋಪವನ್ನು ತಿರಸ್ಕರಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, “ಭಾರತ ಅಂತಾರಾಷ್ಟ್ರೀಯ ನಿಯಮಗಳು ಹಾಗೂ ಬಾಧ್ಯತೆಗಳಿಗೆ ಕಟ್ಟುನಿಟ್ಟಾಗಿ ಅನುಗುಣವಾಗಿದೆ. ಅಂತಹ ಉತ್ಪನ್ನಗಳ ರಫ್ತು ವಿಚಾರದಲ್ಲಿ ಯಾವುದೇ ಕಾನೂನು ಉಲ್ಲಂಘನೆ ನಡೆದಿಲ್ಲ” ಎಂದು ಸ್ಪಷ್ಟಪಡಿಸಿದರು.
ಹಿಂದಿನ ವರ್ಷದಿಂದ ಶಹೆದ್-136 ಮಾನವರಹಿತ ಯುದ್ಧ ವಿಮಾನಗಳಲ್ಲಿ (UCAV) ಈ ಘಟಕಗಳು ಪತ್ತೆಯಾಗಿದ್ದರಿಂದ, ಉಕ್ರೇನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಕನಿಷ್ಠ ಎರಡು ಬಾರಿ ರಾಜತಾಂತ್ರಿಕ ಪತ್ರ ವ್ಯವಹಾರ ನಡೆಸಿದೆ. ಜುಲೈ ಮಧ್ಯದಲ್ಲಿ ನವದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಉಕ್ರೇನ್ ರಾಜತಾಂತ್ರಿಕರು EU ನಿರ್ಬಂಧಗಳ ರಾಯಭಾರಿ ಡೇವಿಡ್ ಓ ಸುಲ್ಲಿವಾನ್ ಅವರ ಸಮ್ಮುಖದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದರು. ಓ’ಸುಲ್ಲಿವಾನ್ ಅವರು ಇತ್ತೀಚಿನ EU ನಿರ್ಬಂಧಗಳ ಪ್ಯಾಕೇಜ್ ಮತ್ತು ರಷ್ಯಾದ ತೈಲ ಉತ್ಪನ್ನಗಳ ಮೇಲಿನ ನಿಷೇಧದ ಕುರಿತು ಭಾರತೀಯ ಅಧಿಕಾರಿಗಳಿಗೆ ಮಾಹಿತಿ ನೀಡಲು ಭಾರತಕ್ಕೆ ಬಂದಿದ್ದರು.
ಉಕ್ರೇನ್ ಅಧಿಕಾರಿಗಳ ತನಿಖೆಯ ಪ್ರಕಾರ, ಅಮೆರಿಕ ಮೂಲದ ವಿಶಯ್ ಇಂಟರ್‌ಟೆಕ್ನಾಲಜಿ ಮತ್ತು ಬೆಂಗಳೂರು ಮೂಲದ ಔರಾ ಸೆಮಿಕಂಡಕ್ಟರ್ ತಯಾರಿಸಿದ ಅಥವಾ ಭಾರತದಲ್ಲಿ ಜೋಡಿಸಿದ ಎಲೆಕ್ಟ್ರಾನಿಕ್ ಘಟಕಗಳನ್ನು ರಷ್ಯಾ ಶಹೆದ್-136 ಡ್ರೋನ್‌ಗಳಲ್ಲಿ ಬಳಸಲಾಗಿದೆ. ದಾಖಲೆಗಳ ಪ್ರಕಾರ, ಡ್ರೋನ್‌ನ ವೋಲ್ಟೇಜ್ ನಿಯಂತ್ರಕ ಘಟಕದಲ್ಲಿ ಭಾರತದಲ್ಲಿ ಜೋಡಿಸಲಾದ ವಿಶಯ್ ಇಂಟರ್‌ಟೆಕ್ನಾಲಜಿಯ “ಬ್ರಿಡ್ಜ್ ರೆಕ್ಟಿಫೈಯರ್ E300359” ಹಾಗೂ ಉಪಗ್ರಹ ಸಂಚಲನ ವ್ಯವಸ್ಥೆಯ ಜಾಮರ್-ಪ್ರೂಫ್ ಆಂಟೆನಾದಲ್ಲಿ ಔರಾ ತಯಾರಿಸಿದ “PLL ಆಧಾರಿತ ಸಿಗ್ನಲ್ ಜನರೇಟರ್ AU5426A ಚಿಪ್” ಬಳಕೆಯಾಗಿದೆ. ತಾಂತ್ರಿಕವಾಗಿ ನೋಡಿದರೆ, ಈ ಕಂಪನಿಗಳು ಯಾವುದೇ ಭಾರತೀಯ ಕಾನೂನು ಉಲ್ಲಂಘಿಸಿಲ್ಲ ಎಂದು ಮೂಲಗಳು ಹೇಳಿವೆ.
ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್ ಅವರು ಪ್ರತಿಕ್ರಿಯಿಸುತ್ತಾ, ಭಾರತದ ದ್ವಿ-ಬಳಕೆಯ ವಸ್ತುಗಳ ರಫ್ತು, ಪ್ರಸರಣ ನಿಷೇಧಕ್ಕೆ ಸಂಬಂಧಿಸಿದ ಅಂತರರಾಷ್ಟ್ರೀಯ ಬಾಧ್ಯತೆಗಳಿಗೆ ಅನುಗುಣವಾಗಿದೆ. ಯಾವುದೇ ರಫ್ತು ನಮ್ಮ ಕಾನೂನು ಉಲ್ಲಂಘಿಸದಂತೆ ಖಚಿತಪಡಿಸಿಕೊಳ್ಳಲು ಸೂಕ್ತ ಪರಿಶೀಲನೆ ನಡೆಯುತ್ತದೆ ಎಂದರು.
ಉಕ್ರೇನ್ ರಕ್ಷಣಾ ಗುಪ್ತಚರ ನಿರ್ದೇಶನಾಲಯ (HUR) ತನ್ನ ಅಧಿಕೃತ ಸಾಮಾಜಿಕ ಜಾಲ ತಾಣಗಳಲ್ಲಿ, ಶಹೆದ್ ಡ್ರೋನ್‌ಗಳಲ್ಲಿ ಭಾರತೀಯ ಮೂಲದ ಘಟಕಗಳ ಪತ್ತೆ ಕುರಿತು ಮಾಹಿತಿ ಹಂಚಿದೆ. ವಿಶಯ್ ಇಂಟರ್‌ಟೆಕ್ನಾಲಜಿಯಿಂದ ಪ್ರತಿಕ್ರಿಯೆ ದೊರೆಯಲಿಲ್ಲ. ಔರಾ ಸೆಮಿಕಂಡಕ್ಟರ್ ಪ್ರೈ.ಲಿ. ಸಹ-ಸ್ಥಾಪಕ ಕಿಶೋರ್ ಗಂಟಿ, ನಮ್ಮ ಉತ್ಪನ್ನಗಳ ಕಾನೂನುಬದ್ಧ ಹಾಗೂ ನೈತಿಕ ಬಳಕೆಯನ್ನು ಖಚಿತಪಡಿಸುತ್ತೇವೆ ಮತ್ತು ಎಲ್ಲಾ ರಾಷ್ಟ್ರೀಯ, ಅಂತರರಾಷ್ಟ್ರೀಯ ರಫ್ತು ನಿಯಂತ್ರಣ ಕಾನೂನುಗಳನ್ನು ಪಾಲಿಸುತ್ತೇವೆ ಎಂದು ಹೇಳಿದರು.
ಅವರು ಮುಂದುವರಿದು ಉತ್ತರಿಸಿ ನಮ್ಮ ಉತ್ಪನ್ನಗಳು ಮೂರನೇ ವ್ಯಕ್ತಿಗಳ ಮೂಲಕ ಅನಧಿಕೃತವಾಗಿ ರಕ್ಷಣಾ ತಯಾರಕರಿಗೆ ತಲುಪಿರುವ ಸಾಧ್ಯತೆಯಿಂದ ನಾವು ಕಳವಳಗೊಂಡಿದ್ದೇವೆ. ಇಂತಹ ಚಟುವಟಿಕೆಗಳನ್ನು ನಾವು ಖಂಡಿಸುತ್ತೇವೆ ಮತ್ತು ಪತ್ತೆಯಾದ ಎಲ್ಲೆಡೆ ಕ್ರಮ ಕೈಗೊಳ್ಳಲು ಬದ್ಧರಾಗಿದ್ದೇವೆ ಎಂದರು. ಕಂಪನಿಯು ಉತ್ಪನ್ನ ಬಳಕೆಯ ಕುರಿತು ಸೀಮಿತ ಆಡಿಟ್ ನಡೆಸಿದ್ದರೂ, ಅಂತಿಮ ಬಳಕೆದಾರರ ಬಗ್ಗೆ ಸ್ಪಷ್ಟತೆ ಲಭಿಸಿಲ್ಲ. ಈ ಘಟಕಗಳು ‘ಪ್ಲಗ್-ಅಂಡ್-ಪ್ಲೇ’ ಸ್ವರೂಪದಲ್ಲಿರುವುದರಿಂದ ಅಂತಿಮ ಬಳಕೆದಾರರನ್ನು ಪತ್ತೆಹಚ್ಚುವುದು ಕಷ್ಟಕರ ಎಂದು ಅವರು ಹೇಳಿದರು.
ಮೂಲಗಳ ಪ್ರಕಾರ, ಭಾರತದಲ್ಲಿ ತಯಾರಾದ ಎಲೆಕ್ಟ್ರಾನಿಕ್ ಘಟಕಗಳನ್ನು ಪಶ್ಚಿಮ ಏಷ್ಯಾ ದೇಶಗಳಿಗೆ ಕಾನೂನುಬದ್ಧವಾಗಿ ರಫ್ತು ಮಾಡಲಾಗುತ್ತಿದ್ದು, ಅಲ್ಲಿಂದ ಅವು ರಷ್ಯಾ ಅಥವಾ ಇರಾನ್‌ಗೆ ತಿರುಗುತ್ತಿವೆ. ಉಕ್ರೇನ್ ಈ ವಿಷಯ ಎತ್ತಿದ ನಂತರ, ಭಾರತೀಯ ಭದ್ರತಾ ಸಂಸ್ಥೆಗಳು ದೆಹಲಿ, ಬೆಂಗಳೂರು ಮತ್ತು ಮುಂಬೈನ ಎಲೆಕ್ಟ್ರಾನಿಕ್ ಘಟಕ ತಯಾರಕರಿಗೆ ಅಂತರರಾಷ್ಟ್ರೀಯ ನಿರ್ಬಂಧಗಳ ಬಗ್ಗೆ ಜಾಗೃತಿ ಮೂಡಿಸಿವೆ. 2022ರ ಅಂತ್ಯದಿಂದ ರಷ್ಯಾ, ಕಡಿಮೆ ವೆಚ್ಚದ ಶಹೆದ್ ಡ್ರೋನ್‌ಗಳನ್ನು ಉಕ್ರೇನ್ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದೆ. ಉಕ್ರೇನ್ ವಾಯುಪಡೆಯ ಪ್ರಕಾರ, ಜುಲೈ ವೇಳೆಗೆ ರಷ್ಯಾ 6,129 ಶಹೆದ್ ಮಾದರಿಯ ಡ್ರೋನ್‌ಗಳನ್ನು ಉಡಾಯಿಸಿದೆ.
ಜಾಗತಿಕ ವ್ಯಾಪಾರ ಸಂಶೋಧನಾ ಉಪಕ್ರಮ (GTRI) ಸ್ಥಾಪಕ ಅಜಯ್ ಶ್ರೀವಾಸ್ತವ ಅವರು, “ಭಾರತವು ಅನುಮೋದಿತ ಸ್ಥಳಗಳಿಗೆ ಮಾತ್ರ ದ್ವಿ-ಬಳಕೆಯ ವಸ್ತುಗಳನ್ನು ರಫ್ತು ಮಾಡಲು ಅನುಮತಿಸುತ್ತದೆ. ಆದರೆ, ಸರಕುಗಳು ಮೂರನೇ ದೇಶಗಳಿಗೆ ರಫ್ತು ಆದ ನಂತರ ಅವುಗಳ ಅಂತಿಮ ಬಳಕೆಯನ್ನು ಹಿಂಬಾಲಿಸುವುದು ಕಷ್ಟಕರ” ಎಂದು ಹೇಳಿದರು.
