ಅಮೆರಿಕದಲ್ಲಿ ಹಾರುವ ತಟ್ಟೆ ಪತ್ತೆ: ಅನ್ಯಗ್ರಹ ಜೀವಿಗಳ ಶಂಕೆ

ಅಮೆರಿಕದಲ್ಲಿ ವಿಶ್ವವೇ ಅಚ್ಚರಿಯಿಂದ ನೋಡುವ ಬೆಳವಣಿಗೆಯೊಂದು ನಡೆದಿದೆ ಎನ್ನುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಾರುವ ತಟ್ಟೆ ಪತ್ತೆಯಾಗಿದೆ ಎನ್ನುವ ವಿಡಿಯೋ ವೈರಲ್ ಆಗುತ್ತಿದೆ. ಇದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಹಲವು ವರ್ಷಗಳಿಂದಲೂ ಹಾರುವ ತಟ್ಟೆ ಕಾಣಿಸಿಕೊಂಡಿರುವುದು ಚರ್ಚೆಯಾಗುತ್ತಲ್ಲೇ ಇದೆ. ಈ ಬಗ್ಗೆ ವಿಜ್ಞಾನಿಗಳು ಸಾಕಷ್ಟು ತಲೆಕೆಡಿಸಿಕೊಂಡಿದ್ದಾರೆ. ಇದೀಗ ಹೊಸ ವಿಡಿಯೋವೊಂದು ವೈರಲ್ ಆಗಿದೆ. ಇದರ ಬೆನ್ನಲ್ಲೇ ಅನ್ಯಗ್ರಹದ ಜೀವಿಗಳು ಭೂಮಿಗೆ ಬರುತ್ತಿದ್ದಾರೆ ಎನ್ನುವ ವಿಚಾರ ಭಾರೀ ಕುತೂಹಲ ಮೂಡಿಸಿದೆ.
ಹತ್ತಾರು ವರ್ಷಗಳಿಂದಲೂ ಹಾರುವ ತಟ್ಟೆ ಕಾಣಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದೆಯಾದರೂ ಅದನ್ನು ಎಲ್ಲರೂ ಕಾಣಿಸಿಕೊಂಡಿರಲಿಲ್ಲ. ಹಾರುವ ತಟ್ಟೆ ಎಂದರೆ ಸಾಮಾನ್ಯವಾಗಿ ಅನ್ಯಲೋಕದ ಬಾಹ್ಯಾಕಾಶ ನೌಕೆ ಅಂತಾ ನಂಬುವುದು ಇದೆ. ಈ ವಸ್ತುವಿಗೆ ಯಾವುದೇ ಆಕಾರವಿಲ್ಲ. ಇದು ಚಪ್ಪಟೆಯಾದ ದುಂಡಗಿನ ಆಕಾರವನ್ನು ಹೊಂದಿರುತ್ತದೆ. ಇದನ್ನು ಇಂಗ್ಲೀಷ್‌ನಲ್ಲಿ UFO ಗುರುತಿಸಲಾಗದ ಹಾರುವ ವಸ್ತು ಎಂದೂ ಕರೆಯಲಾಗುತ್ತದೆ. ಇದೀಗ ಈ ಮಾದರಿಯ ವಸ್ತು ಅಮೆರಿಕದ ನಗರವೊಂದರಲ್ಲಿ ಪತ್ತೆ ಆಗಿರುವುದಾಗಿ ವರದಿಯಾಗಿದೆ.
ಅಮೆರಿಕದ ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಗರದಲ್ಲಿ ಹಾರುವ ತಟ್ಟೆ ಕಾಣಿಸಿಕೊಂಡಿದ್ದು ವಿಡಿಯೋ ವೈರಲ್ ಆಗುತ್ತಿದೆ. ಹಾರುವ ತಟ್ಟೆಗಳು ಪಾಪ್ ಸಂಸ್ಕೃತಿ ಎಂದು ಹೇಳಲಾಗುತ್ತದೆ. ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಇರಲಿಲ್ಲ. ಇದೀಗ ಅಮೆರಿಕದಲ್ಲಿ ಹಾರುವ ತಟ್ಟೆ ಕಾಣಿಸಿಕೊಂಡ ವಿಡಿಯೋದಲ್ಲಿ ವಿಚಿತ್ರ ದೃಶ್ಯಗಳೂ ಸೆರೆ ಆಗಿವೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಡ್ರಾಮಾಅಲರ್ಟ್ ಎನ್ನುವ ಖಾತೆಯಿಂದ ಈ ವೀಡಿಯೊವನ್ನು X ನಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲದೇ “ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ SQUID ಆಕಾರದ UFO ಕಂಡುಬಂದಿದೆ” ಎಂದು ಬರೆದುಕೊಳ್ಳಲಾಗಿದೆ.
ಆದರೆ ಹಲವರು ಇದು ನಿಜವಾದ ಹಾರುವ ತಟ್ಟೆ ಇದ್ದಂತೆ ಇಲ್ಲ ಎಂದು ಹೇಳಿದ್ದಾರೆ. ಬಹುಶಃ ಇದು AI ನಿಂದ ಮಾಡಿರುವ ವಿಡಿಯೋ ಇರಬೇಕು ಟೆಕ್ಸಾಸ್‌ನಲ್ಲಿ ಆ ರೀತಿಯ ಪಟಾಕಿಗಳನ್ನು ಮಾರಾಟ ಮಾಡುವುದಿಲ್ಲ ಎಂದು ಕೆಲವರು ತಮಾಷೆ ಮಾಡಿದ್ದಾರೆ.
ಅನ್ಯಗ್ರಹ ಜೀವಿಗಳು: ಅಮೆರಿಕದಲ್ಲಿ ಅನ್ಯಗ್ರಹದ ಜೀವಿಗಳು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಹಾಗೂ ವಿಡಿಯೋ, ಸುದ್ದಿಗಳು ಇಂದು ನೆನ್ನೆಯದಲ್ಲ ಹಲವು ವರ್ಷಗಳಿಂದಲೂ ಅಮೆರಿಕದಲ್ಲಿ ಅನ್ಯಗ್ರಹ ಜೀವಿಗಳ ಸಂಚಾರವಿದೆ ಎನ್ನುವ ಬಗ್ಗೆ ಹೆಚ್ಚು ಚರ್ಚೆಗಳು ನಡೆಯುತ್ತಲ್ಲೇ ಇವೆ. ಅಮೆರಿಕದ ಅನ್ಯಲೋಕದ ಗೀಳು ಇನ್ನೂ ಕಡಿಮೆಯಾಗಿಲ್ಲ. ಈ ವಿಷಯವನ್ನು ಇರಿಸಿಕೊಂಡೇ ಹಾಲಿವುಡ್‌ನಲ್ಲಿ ಹಲವು ಮೂವಿಗಳು ಬಂದಿವೆ. ಅಮೆರಿಕದಲ್ಲಿ ಹಾರುವ ತಟ್ಟೆಗಳು ಎಲ್ಲಿ ತುಂಬಾ ಕಾಣಿಸಿಕೊಂಡಿವೆ ಎನ್ನುವ ಬಗ್ಗೆ ಡೇಟಾವನ್ನೂ ಸಂಗ್ರಹಿಸಲಾಗಿದೆ.
