ದೇಹಕ್ಕೆ 26 ಐಫೋನ್ ಅಂಟಿಸಿ ಕಳ್ಳಸಾಗಣೆ ಮಾಡುತ್ತಿದ್ದ ಯುವತಿ: ಹೃದಯಾಘಾತದಿಂದ ಸಾವು

ಬ್ರಸಿಲಿಯಾ: ಹೃದಯಾಘಾತ ಸಮಸ್ಯೆಗಳು ಇತ್ತೀಚೆಗೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಸರಣಿ ಸಾವುಗಳು ಆತಂಕ ಹೆಚ್ಚಿಸಿದೆ. ಇದೀಗ 20ರ ಹರೆಯದ ಯುವತಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಹೃದಯಾಘಾತಕ್ಕೆ ಬಲಿಯಾದ ಘಟನೆ ನಡೆದಿದೆ. ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಈ ಹೃದಯಾಘಾತಕ್ಕೆ ಕಾರಣ ಬಹಿರಂಗವಾಗಿದೆ.ಈಕೆ ತನ್ನ ದೇಹಕ್ಕೆ 26 ಐಫೋನ್ ಅಂಟಿಸಿದ್ದಳು. ಬಳಿಕ ವಸ್ತ್ರ ಧರಿಸಿ ಯಾರಿಗೂ ತಿಳಿಯದಂತೆ ಐಫೋನ್ ಕಳ್ಳಸಾಗಣೆ ಮಾಡಿದ್ದಳು ಅನ್ನೋದು ಬಹಿರಂಗವಾಗಿದೆ. ಇದೀಗ ಈಕೆ ಹೃದಯಾಘಾತಕ್ಕೆ ದೇಹಕ್ಕೆ ಅಂಟಿಸಿದ್ದ 26 ಫೋನ್ ಕಾರಣವಾಗಿರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

ಏನಿದು ಘಟನೆ?
ಬ್ರೆಜಿಲ್‌ನ 20 ವರ್ಷದ ಯುವತಿ ಸಾವೋ ಪೌಲೋಗೆ ತೆರಳಲು ಬಸ್ ಹತ್ತಿದ್ದಾಳೆ. ಬಸ್ ಪ್ರಯಾಣ ಆರಂಭಗೊಂಡಿದೆ. ಕೆಲ ಹೊತ್ತಲ್ಲಿ ಯುವತಿ ಅಸ್ವಸ್ಥಗೊಂಡಿದ್ದಾಳೆ. ಉಸಿರಾಟದ ಸಮಸ್ಯೆ ಎದುರಿದ್ದಾಳೆ. ಹೀಗಾಗಿ ಬಸ್ ಚಾಲಕ ತಕ್ಷಣವೇ ರೆಸ್ಟೋರೆಂಟ್ ಬಳಿ ಬಸ್ ನಿಲ್ಲಿಸಿದ್ದಾರೆ. ಬಳಿಕ ತುರ್ತು ಸೇವೆಗೆ ಕರೆ ಮಾಡಿದ್ದಾರೆ. ಇದರ ನಡುವೆ ಯುವತಿಗೆ ಸಿಪಿಆರ್ ನೀಡುವ ಪ್ರಯತ್ನ ನಡೆದಿದೆ. ಅಷ್ಟರಲ್ಲೇ ತುರ್ತು ಸೇವೆಯ ವೈದ್ಯರು, ಸಿಬ್ಬಂದಿಗಳು ಆಗಮಿಸಿದ್ದಾರೆ. ಕೆಲ ಹೊತ್ತಿನ ಬಳಿಕವೂ ಯುವತಿ ಚೇತರಿಸಿಕೊಳ್ಳಲಿಲ್ಲ. 45 ನಿಮಿಷಗಳ ಪ್ರಯತ್ನದ ಬಳಿಕ ಯುವತಿ ಮೃತಪಟ್ಟಿರವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.
ಅಸ್ವಸ್ಥ ಯುವತಿ ದೇಹದಲ್ಲಿತ್ತು 26 ಐಫೋನ್
ಅಸ್ವಸ್ಥಗೊಂಡ ಯುವತಿಗೆ ಚಿಕಿತ್ಸೆ ನೀಡಲು ತುರ್ತು ಸೇವಾ ಸಿಬ್ಬಂದಿಗಳು, ವೈದ್ಯರು ಆಗಮಿಸಿದ್ದಾರೆ. ಚಿಕಿತ್ಸೆ ನೀಡುತ್ತಿದ್ದಂತೆ ಆಕೆಯ ದೇಹದಲ್ಲಿ ಐಫೋನ್‌ಗಳು ಪತ್ತೆಯಾಗಿದೆ. ತನ್ನ ದೇಹದ ಸುತ್ತ 26 ಐಫೋನ್ ಅಂಟಿಸಿದ್ದಳು. ದೇಹಕ್ಕೆ ಐಫೋನ್ ಅಂಟಿಸಿ ಅದರ ಮೇಲೆ ವಸ್ತ್ರ ಧರಿಸಿದ್ದಳು. ಹೀಗಾಗಿ ಸಿಬ್ಬಂದಿಗಳು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಪೊಲೀಸರು ಯುವತಿ ದೇಹದಲ್ಲಿ ಅಂಟಿಸಿದ್ದ ಐಫೋನ್ ವಶಕ್ಕೆ ಪಡೆದಿದ್ದಾರೆ. ಬಳಿಕ ಯುವತಿ ಮೃತದೇಹ ಮರಣೋತ್ತರ ಪರೀಕ್ಷೆಕೆ ಕಳುಹಿಸಿದ್ದಾರೆ. ಇಷ್ಟೇ ಅಲ್ಲ ಎಫ್‌ಎಸ್‌ಎಲ್ ಪರೀಕ್ಷೆಗೂ ಕಳುಹಿಸಿದ್ದಾರೆ. ಇದೀಗ ವರದಿಗಾಗಿ ವೈದ್ಯರು ಹಾಗೂ ಪೊಲೀಸರು ಕಾಯುತ್ತಿದ್ದಾರೆ. ಇತ್ತ ಪೊಲೀಸರು ಯುವತಿ ಐಫೋನ್ ಕಳ್ಳಾಸಾಗಾಣಿಕೆ ಮಾಡಲು ಈ ರೀತಿ ಅಂಟಿಸಿರುವ ಸಾಧ್ಯತೆ ಇದೆ. ಸಾರ್ವಜನಿಕ ಬಸ್ ಮೂಲಕ ಸಾಗಿದರೆ ಮತ್ತಷ್ಟು ಸುರಕ್ಷಿತ ಅನ್ನೋ ಕಾರಣಕ್ಕೆ ಈ ಸಾರಿಗೆ ಆಯ್ಕೆ ಮಾಡಿಕೊಂಡಿರುವ ಸಾಧ್ಯತೆ ಹೆಚ್ಚು ಎಂದಿದ್ದಾರೆ.
ವೈದ್ಯರು ಹೇಳುವುದೇನು?
26 ಐಫೋನ್ ಅಂಟಿಸಿ ಸಾಗಿಸಿದ್ದ ಯುವತಿ ಆರೋಗ್ಯದಲ್ಲಿ ಏರುಪೇರಾಗಿದೆ. ಐಫೋನ್‌ಗಳು ಯುವತಿಯ ರಕ್ತ ಪರಿಚಲನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ದೇಹಕ್ಕೆ ಅಂಟಿಸಿದ್ದ ಕಾರಣ ಪರಿಣಾಮ ತೀವ್ರಗೊಂಡಿರುವ ಸಾಧ್ಯತೆ ಹೆಚ್ಚು. ಫೋನ್ ರೇಡಿಯೆಟರ್, ಸದ್ಯ ಆರೋಗ್ಯ ಪರಿಸ್ಥಿತಿಗಳು ಹೃದಯಾಘಾತಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.
ಬ್ರೆಜಿಲ್ ಅತೀ ದೊಡ್ಡ ಬ್ಲಾಕ್ ಮಾರ್ಕೆಟ್ ಕೇಂದ್ರ
ಬ್ರೆಜಿಲ್‌ನಲ್ಲಿ ಫೋನ್‌ಗಳು ಅಕ್ರಮವಾಗಿ ಸಾಗಾಣಿಕೆ ಮಾಡುವುದೇ ಹೆಚ್ಚು. ಪಕ್ಕದ ಪೆರುಗ್ವೆಯಿಂದ ಫೋನ್‌ಗಳನ್ನು ಕಳ್ಳಸಾಗಾಣಿಕೆ ಮಾರ್ಗದ ಮೂಲಕ ತಂದು ಮಾರಾಟ ಮಾಡಲಾಗುತ್ತದೆ. ಶೇಕಡಾ 25 ಫೋನ್‌ಗಳು ಬ್ರೆಜಿಲ್‌ನಲ್ಲಿ ಅಕ್ರಮ ಮಾರ್ಗದ ಮೂಲಕ ಬಂದು ಮಾರಾಟಗೊಳ್ಳುತ್ತಿದೆ ಎಂದು ವರದಿ ಹೇಳುತ್ತಿದೆ. ಅಧಿಕಾರಿಗಳ ಪ್ರಕರಾ ಬ್ರೆಜಿಲ್‌ಗೆ ಪ್ರತಿ ದಿನ ಸರಾಸರಿ 10,000 ಫೋನ್ ಕಳ್ಳಸಾಗಾಣಿಕೆಯಾಗುತ್ತಿದೆ ಎಂದಿದ್ದಾರೆ. ಒಂದು ಪ್ರಕರಣದಲ್ಲಿ ಕಳ್ಳಸಾಗಾಣೆ ಮಾಡುತ್ತಿದ್ದ 196 ಐಫೋನ್‌ಗಳನ್ನು ಟ್ರಕ್‌ನಿಂದ ವಶಪಡಿಸಿಕೊಳ್ಳಲಾಗಿತ್ತು. ಪ್ರತಿ ದಿನ ಬ್ರೆಜಿಲ್‌ನಲ್ಲಿ ಫೋನ್ ಕಳ್ಳಸಾಗಾಣೆ ಪ್ರಕರಣ ದಾಖಲಾಗುತ್ತಿದೆ.
