Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕರ್ನಾಟಕದಲ್ಲಿ ಕೆಲಸದ ಅವಧಿ ವಿಸ್ತರಣೆ ಪ್ರಸ್ತಾವಕ್ಕೆ ವಿರೋಧ: ಕಾರ್ಮಿಕರ ಒಪ್ಪಿಗೆ ಇಲ್ಲದೆ ವಿಸ್ತರಣೆ ಇಲ್ಲ, ಸರ್ಕಾರದ ಸ್ಪಷ್ಟನೆ!

Spread the love

ಬೆಂಗಳೂರು: ಕಾರ್ಮಿಕರ ಕೆಲಸದ ಅವಧಿಯನ್ನು 8 ರಿಂದ 10 ಗಂಟೆ ವಿಸ್ತರಣೆ (Working Hours Extension) ಮಾಡುವ ಬಗ್ಗೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಪ್ರಸ್ತಾವನೆ ಕಳುಹಿಸಿತ್ತು. ಈ ಪ್ರಸ್ತಾವನೆಗೆ ಕೆಲಸದ ಕರ್ನಾಟಕದಲ್ಲಿ ಕಾರ್ಮಿಕ ಸಂಘಟನೆಗಳು ಸಾಕಷ್ಟು ವಿರೋಧ ವ್ಯಕ್ತಪಡಿಸಿವೆ
ಇದರ ಬೆನ್ನಲ್ಲೇ ಕರ್ನಾಟಕ ಕಾರ್ಮಿಕ ಇಲಾಖೆಯು ಸಚಿವ ಸಂತೋಷ್ ಲಾಡ್ (Santosh Lad) ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳು, ಕೈಗಾರಿಕೋದ್ಯಮಿಗಳು, ಐಟಿ ಉದ್ಯಮಿಗಳ ಜೊತೆ ಹಲವು ಬಾರಿ ಸಭೆ ನಡೆಸಿದೆ. ಕೇಂದ್ರದ ಪ್ರಸ್ತಾವಕ್ಕೆ ಕಾರ್ಮಿಕ ಸಂಘಟನೆಗಳು ಸಾಕಷ್ಟು ವಿರೋಧ ವ್ಯಕ್ತಪಡಿಸಿದರೆ, ಕೈಗಾರಿಕೋದ್ಯಮಿಗಳು ವಿರೋಧ ವ್ಯಕ್ತಪಡಿಸಿಲ್ಲ. ಇದೀಗ ರಾಜ್ಯ ಕಾರ್ಮಿಕ ಇಲಾಖೆಯು (Karnataka Labour Department) ಕಾರ್ಮಿಕರ ಹಿತದೃಷ್ಟಿಯಿಂದ ಒಂದು ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

ಕೇಂದ್ರ ಸರ್ಕಾರದ ಕೆಲಸದ ಅವಧಿ ವಿಸ್ತರಣೆ ಪ್ರಸ್ತಾವನೆಗೆ ಯಾವುದೇ ಪರ-ವಿರೋಧ ವ್ಯಕ್ತಪಡಿಸದೆ ಇರುವ ಕಾರ್ಮಿಕ ಇಲಾಖೆ, ಕಾರ್ಮಿಕರಿಗೆ ಒತ್ತಡ ಹಾಕಿ 10 ಗಂಟೆಗಳ ಕಾಲ ಕೆಲಸ ಮಾಡದಂತೆ ಕಂಪನಿಗಳಿಗೆ ಎಚ್ಚರಿಕೆ ಕೊಟ್ಟಿದೆ.

ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಹೇಳಿದ್ದೇನು?

ಕೇಂದ್ರ ಸರ್ಕಾರವು 9-10 ಗಂಟೆ ಕೆಲಸ ಮಾಡಿಸುವ ಬಗ್ಗೆ ಪ್ರಸ್ತಾವನೆ ಕಳುಹಿಸಿತ್ತು. ನಾವು ಟ್ರೇಡ್ ಯೂನಿಯನ್ ಸಭೆ ಮಾಡಿದ್ದೆವು. ಕೈಗಾರಿಕೋದ್ಯಮಿಗಳನ್ನು ಸಹ ಕರೆದು ಮಾತನಾಡಿದ್ದೆವು. ಕಾರ್ಮಿಕರು ಕೆಲಸದ ಅವಧಿ ವಿಸ್ತರಣೆಗೆ ಒಪ್ಪಿದರೆ ಅವರಿಗೆ ವಾರದಲ್ಲಿ ಎರಡುದಿನ ರಜೆ ಇರಲಿದೆ. ಕಾರ್ಮಿಕರು ಒಪ್ಪಿದರೆ ಇದನ್ನು ಜಾರಿಗೆ ತರಬಹುದು. ಮಾರ್ಗಸೂಚಿ ಪ್ರಕಾರ ನಾವು ಅವರಿಗೆ ಅವಕಾಶ ಕೋಡುತ್ತೇವೆ. ಕಾರ್ಮಿಕರ ಒಪ್ಪಿಗೆ ಇಲ್ಲದಿದ್ದರೆ ಅವಕಾಶ ಕೊಡಲ್ಲ. ಕಾರ್ಮಿಕರ ಅಭಿಪ್ರಾಯವನ್ನು ನಾವು ಪಡೆಯುತ್ತೇವೆ . ಕಾರ್ಮಿಕರು ಒಪ್ಪಿದರೆ ಮಾತ್ರ ಕೆಲಸದ ಅವಧಿ ವಿಸ್ತರಣೆ ಮಾಡಲು ಅವಕಾಶ ನೀಡುತ್ತೇವೆ ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಅದರೆ, ಕಾರ್ಮಿಕ ಇಲಾಖೆ ಸಚಿವನಾಗಿ ಕೆಲಸದ ಅವಧಿ ವಿಸ್ತರಣೆಗೆ ನನ್ನ ಒಪ್ಪಿಗೆ ಇಲ್ಲ ಎಂದು ಲಾಡ್ ಕಾರ್ಮಿಕರ ಪರ ಬ್ಯಾಟ್ ಬೀಸಿದ್ದಾರೆ.

ಅವಧಿ ವಿಸ್ತರಣೆಗೆ ರಾಜ್ಯದಲ್ಲಿ ಮಾನದಂಡ ತರಲು ನಿರ್ಧಾರ

ಕೆಲಸದ ಅವಧಿ ವಿಸ್ತರಣೆಯಿಂದ ಕಾರ್ಮಿಕರಿಗೆ ಸಾಕಷ್ಟು ಅನನುಕೂಲ ಆಗಲಿದೆ. ಅದರಲ್ಲೂ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿರುವುದರಿಂದ ಕೆಲಸಕ್ಕೆ ಬರುವುದಕ್ಕೆ, ಆಮೇಲೆ ಕೆಲಸ ಮುಗಿಸಿ ಹೋಗುವುದಕ್ಕೆ ಸಾಕಷ್ಟು ತೊಂದರೆ ಆಗುತ್ತದೆ. ಹೀಗಾಗಿ ರಾಜ್ಯ ಕಾರ್ಮಿಕ ಇಲಾಖೆ ಒಂದಷ್ಟು ಮಾನದಂಡಗಳನ್ನು ತರಲು ನಿರ್ಧಾರ ಮಾಡಿದೆ. ಕಾರ್ಮಿಕರಿಗೆ ಒತ್ತಡ ಹಾಕಿ ಕೆಲಸ ಮಾಡಿಸುವಂತಿಲ್ಲ. ಕಾರ್ಮಿಕರು ಕೆಲಸ ಮಾಡುವುದಾಗಿ ಒಪ್ಪಿ ಪತ್ರ ಬರೆದು ಕೊಡಬೇಕು, ಹಾಗಿದ್ದರಷ್ಟೇ ಮಾಡಿಸಬಹುದು. ಕಂಪನಿಯವರು ತೊಂದರೆ ಕೊಟ್ಟರೆ ಕಾರ್ಮಿಕ ಇಲಾಖೆಗೆ ನೇರವಾಗಿ ಕಾರ್ಮಿಕರು ದೂರು ನೀಡಬಹುದು. ಕೆಲಸದ ಅವಧಿ ವಿಸ್ತರಣೆಯ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಆಗಾಗ ಪರಿಶೀಲನೆ ಮಾಡಬೇಕು. ಈ ರೀತಿಯ ಮಾನದಂಡಗಳನ್ನು ಜಾರಿಗೆ ತರಲು ನಿರ್ಧಾರ ಮಾಡಿದೆ ಎಂದು ಲಾಡ್ ಹೇಳಿದ್ದಾರೆ.

ಸದ್ಯಕ್ಕೆ ಕೇಂದ್ರದ ಅವಧಿ ವಿಸ್ತರಣೆ ಪ್ರಸ್ತಾವಕ್ಕೆ ಪರ ಅಥವಾ ವಿರೋಧವನ್ನು ರಾಜ್ಯ ಸರ್ಕಾರ ವ್ಯಕ್ತಪಡಿಸಿಲ್ಲ. ಆದರೆ ಕಾರ್ಮಿಕರಿಗೆ ತೊಂದರೆ ಆದರೆ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ಕೊಟ್ಟಿದೆ. ಕಾರ್ಮಿಕರ ಕೆಲಸದ ಅವಧಿ ವಿಸ್ತರಣೆಗೆ‌ ಕೈಗಾರಿಕೋದ್ಯಮಿಗಳ ಒತ್ತಡ ಕೂಡ ಹೆಚ್ಚಾಗಿದೆ . ಹೀಗಾಗಿ ರಾಜ್ಯ ಸರ್ಕಾರ ಅನಿವಾರ್ಯವಾಗಿ ಕೇಂದ್ರದ ಅವಧಿ ವಿಸ್ತರಣೆ ನಿರ್ಧಾರಕ್ಕೆ ಮಣಿಯುತ್ತದೆಯಾ ಅಥವಾ ಕಾರ್ಮಿಕರ ಪರ ನಿಲ್ಲುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.


Spread the love
Share:

administrator

Leave a Reply

Your email address will not be published. Required fields are marked *