16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧ

ಜಗತ್ತಿನ ಎಲ್ಲ ದೇಶಗಳು ಅಚ್ಚರಿಗೊಳಿಸುವಂತ ಮಹತ್ವದ ನಿರ್ಧಾರವನ್ನು ಆಸ್ಟ್ರೇಲಿಯಾ ತೆಗೆದುಕೊಂಡಿದೆ. ಆಸ್ಟ್ರೇಲಿಯಾ ಸರ್ಕಾರವು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸುವಂತಿಲ್ಲ ಎಂದು ಘೋಷಿಸಿದೆ.

ಮಕ್ಕಳನ್ನು ಆನ್ಲೈನ್ನಿಂದ ರಕ್ಷಿಸಲು, ಈ ಅಭ್ಯಾಸದಿಂದ ದೂರವಿರಿಸಲು ಸರ್ಕಾರ ಈ ಕೆಲಸಕ್ಕೆ ಮುಂದಾಗಿದೆ.
ಆದ್ದರಿಂದ ನಾವು 16 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿಷೇಧಿಸುತ್ತಿದ್ದೇವೆ. ಸೋಶಿಯಲ್ ಮೀಡಿಯಾದ ಮೂಲಕ ಮಕ್ಕಳು ತಮ್ಮದೇ ಆದ ಕೆಟ್ಟ ಲೋಕವನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿಕೆ ನೀಡಿದ್ದಾರೆ.
ಇನ್ನು ನಿರ್ಧಾರ ತೆಗೆದುಕೊಳ್ಳುವ ಮೊದಲು ಕೆಲವೊಂದು ವಿಚಾರಗಳನ್ನು ಪ್ರಧಾನಿ ಆಂಥೋನಿ ಅಲ್ಬನೀಸ್ ಪ್ರಸ್ತಾಪಿಸಿದ್ದಾರೆ. ಈ ಸಾಮಾಜಿಕ ಜಾಲತಾಣದ ಅಭ್ಯಾಸದಿಂದ ಮೂವರು ಹದಿಹರೆಯದವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕಾನೂನನ್ನು ಈ ತಿಂಗಳ ಕೊನೆಯಲ್ಲಿ ಜಾರಿಗೆ ಬರುವಂತೆ ಆದೇಶಿಸಲಾಗಿದೆ. ತಂತ್ರಜ್ಞಾನ ಕಂಪನಿಗಳು ಅಪ್ರಾಪ್ತ ವಯಸ್ಕ ಖಾತೆಗಳನ್ನು ನಿಷ್ಕ್ರಿಯಗೊಳಿಸುವುದು, ಹೊಸ ಖಾತೆಗಳನ್ನು ರಚಿಸುವುದನ್ನು ತಡೆಯುವುದು ಮತ್ತು ಯಾವುದೇ ಪರಿಹಾರೋಪಾಯಗಳನ್ನು ಸರಿಪಡಿಸುವುದು ಈ ತಕ್ಷಣದಿಂದಲೇ ಮಾಡಬೇಕು. ಒಂದು ವೇಳೆ ಇದನ್ನು ಮಾಡಿಲ್ಲವಾದರೆ 50 ಮಿಲಿಯನ್ ದಂಡವನ್ನು ವಿಧಿಸಲಾಗುವುದು ಎಂದು ಹೇಳಿದ್ದಾರೆ.
ಹದಿಹರೆಯದವರು ಇನ್ನೂ YouTube ಆನ್ನು ವೀಕ್ಷಿಸಲು ಸಾಧ್ಯವಾಗುತ್ತದೆ, ಆದರೆ ಖಾತೆಯಿಲ್ಲದೆ ಅವರು ಸಂವಹನ ನಡೆಸಲು, ಕಾಮೆಂಟ್ ಮಾಡಲು ಅಥವಾ ಪೋಸ್ಟ್ ಮಾಡಲು ಸಾಧ್ಯವಾಗುವುದಿಲ್ಲ. ಆನ್ಲೈನ್ ಗೇಮಿಂಗ್, ಮೆಸೇಜ್ಕಳುಹಿಸುವ ಅಪ್ಲಿಕೇಶನ್ಗಳು, ಶಿಕ್ಷಣ ಮತ್ತು ಆರೋಗ್ಯ ಸಂಬಂಧಿತ ವಿಷಯಗಳು ಕಡಿಮೆ ಹಾನಿಯನ್ನು ಉಂಟು ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ ಇದಕ್ಕೆ ಮಾತ್ರ ಶಾಸನದಿಂದ ವಿನಾಯಿತಿ ನೀಡಲಾಗಿದೆ.
ಜಾಗತಿಕವಾಗಿ ಈ ನಿರ್ಧಾರ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ನಾರ್ವೆ ಈಗಾಗಲೇ ಇದೇ ರೀತಿಯ ನಿರ್ಬಂಧವನ್ನು ಘೋಷಿಸಿದೆ ಮತ್ತು ಯುಕೆ ಕೂಡ ಇದನ್ನು ಅನುಸರಿಸಲು ಮುಂದಾಗಿದೆ.