Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮೈಸೂರಿನಲ್ಲಿ ₹390 ಕೋಟಿ ಮೌಲ್ಯದ ಡ್ರಗ್ಸ್ ತಯಾರಿಕಾ ಘಟಕ ಪತ್ತೆ

Spread the love

ಮೈಸೂರು: ಜುಲೈ 28ರಂದು ಮುಂಬೈ ಪೊಲೀಸರು ಹೊರವಲಯದಲ್ಲಿ 390 ಕೋಟಿ ಮೌಲ್ಯದ 192 ಕೆ.ಜಿ. ಮೆಫೆಡ್ರೋನ್ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದು, ಪ್ರಕರಣದ ಸಂಬಂಧ 8 ಜನರನ್ನು ಬಂಧಿಸಲಾಗಿದೆ. ಈ ಬಗ್ಗೆ ವಿಪಕ್ಷ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ

ಖಚಿತ ಮಾಹಿತಿ ಮೇರೆಗೆ ಮಹಾರಾಷ್ಟ್ರ ಪೊಲೀಸರು ಮೈಸೂರು ಪೊಲೀಸರ ಸಹಾಯದಿಂದ ಮೈಸೂರಿನ ಹೊರವಲಯದ ರಿಂಗ್ ರಸ್ತೆಯಲ್ಲಿರುವ ಎಂಡಿಎಂಎ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ಮೌಲ್ಯದ ಮತ್ತು ಕಚ್ಚಾ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

8 ಕೋಟಿ ಮೌಲ್ಯದ ಡ್ರಗ್‌ ವಶ

ಮೈಸೂರಿನಲ್ಲಿ ಎಂಡಿಎಂಎ ಡ್ರಗ್ ತಯಾರಿಕಾ ಘಟಕದ ಮೇಲೆ ದಾಳಿ ಮಾಡುವ ಮುನ್ನ 8 ಕೋಟಿ ರೂ. ಮೌಲ್ಯದ 5 ಕೆಜಿ ಮಫೆಡ್ರೋನ್ ಡ್ರಗ್ಸ್‌ ಸಿಕ್ಕಿತ್ತು. ಅದರ ಜಾಲ ಹುಡುಕುತ್ತಾ ಹೋದಾಗ ತಯಾರಿಕ ಘಟಕದಲ್ಲಿ 187 ಕೆಜಿಯ 382 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ ಪತ್ತೆ ಮಾಡಿದೆವು. ಒಟ್ಟಾರೆಯಾಗಿ 390 ಕೋಟಿ ರೂಪಾಯಿ ಮೌಲ್ಯದ 192 ಕೆಜಿ ಡ್ರಗ್ಸ್‌ ಸಿಕ್ಕಿದೆ ಎಂದು ಮುಂಬೈ ಉಪ ಪೊಲೀಸ್ ಆಯುಕ್ತರಾದ ದತ್ತಾ ನಲವಾಡೆ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಏಪ್ರಿಲ್‌ನಲ್ಲಿ ಪಶ್ಚಿಮ ಮುಂಬೈನ ಸಾಕಿನಾಕಾದಲ್ಲಿ ಬಾಂದ್ರಾ ರಿಕ್ಲಮೇಶನ್‌ನ ಸಲೀಂ ಇಮ್ತಿಯಾಜ್ ಶೇಖ್ ಅಲಿಯಾಸ್ ಸಲೀಂ ಲ್ಯಾಂಡ್ಗಾ (45) ಎಂಬಾತನನ್ನು 52 ಗ್ರಾಂ ಮೆಫೆಡ್ರೋನ್‌ನೊಂದಿಗೆ ಬಂಧಿಸಲಾಗಿತ್ತು. ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಬಾಯಿಬಿಡಿಸಿದಾಗ, ಅವನ ಸಹಚರರಾದ ಮೂವರು ವ್ಯಕ್ತಿಗಳನ್ನು ಬಂಧಿಸಿದ್ದೆವು. ಆನಂತರ ಅವರಲ್ಲಿದ್ದ, 8 ಕೋಟಿ ಮೌಲ್ಯದ 4.53 ಕಿಲೋಗ್ರಾಂ ಮೆಫೆಡ್ರೋನ್ ಅನ್ನು ವಶಪಡಿಸಿಕೊಳ್ಳಲಾಗಿತ್ತು.

ಬಂಧಿತರ ಮಾಹಿತಿಯ ಆಧಾರದ ಮೇಲೆ ಪೊಲೀಸರು ಮೈಸೂರಿಗೆ ಬಂದ ಮುಂಬೈ ಪೊಲೀಸರು, ರಿಂಗ್‌ ರಸ್ತೆಯ ಕಟ್ಟಡದ ಮುಂಭಾಗ ಹೋಟೆಲ್ ಮತ್ತು ಗ್ಯಾರೇಜ್‌ನಂತೆ ಕಾಣುತ್ತಿದ್ದ ಪ್ರದೇಶ ಶೋಧಿಸಿದಾಗ, ನಮಗೆ ಮೆಫೆಡ್ರೋನ್ ಉತ್ಪಾದನಾ ಘಟಕ ಸಿಕ್ಕಿತು ಎಂದು ಹೇಳಲಾಗಿದೆ.

ಮೈಸೂರಿನಿಂದ ಅಕ್ರಮವಾಗಿ ಮುಂಬೈ ಮತ್ತು ಪಕ್ಕದ ಜಿಲ್ಲೆಗಳಿಗೆ ಡ್ರಗ್ ಸರಬರಾಜು ಮಾಡಲಾಗುತ್ತಿತ್ತು. ಇಲ್ಲಿಯವರೆಗೂ ಈ ಪ್ರಕರಣದಡಿ 8 ಜನರನ್ನು ಬಂಧಿಸಲಾಗಿದೆ. 390 ಕೋಟಿ ರು. ಮೌಲ್ಯದ 192 ಕೇಜಿ ಮೆಫೆಡ್ರೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಂದು ಡಿಸಿಪಿ ಮಾಹಿತಿ ನೀಡಿದರು.
ಪರಮೇಶ್ವರ್‌ ಹೇಳಿದ್ದೇನು?

ಮೈಸೂರಿನಲ್ಲಿಮಾದಕ ದ್ರವ್ಯ ಫ್ಯಾಕ್ಟರಿ ಪತ್ತೆ ಪ್ರಕರಣದಲ್ಲಿರಾಜ್ಯ ಪೊಲೀಸರ ಲೋಪ ಎದ್ದು ಕಾಣುತ್ತಿರುವುದನ್ನು ರಾಜ್ಯದ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಒಪ್ಪಿಕೊಂಡಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ”ಮಹಾರಾಷ್ಟ್ರದ ಪೊಲೀಸರು ಡ್ರಗ್ಸ್‌ ಫ್ಯಾಕ್ಟರಿ ಮೇಲೆ ದಾಳಿ ಮಾಡುವವರೆಗೆ ಸ್ಥಳೀಯ ಪೊಲೀಸರಿಗೆ ಇದು ಗೊತ್ತಾಗಿಲ್ಲಎಂದರೆ ಇದು ನಮ್ಮದೇ ಲೋಪ. ಈ ಬಗ್ಗೆ ಅಗತ್ಯ ಕ್ರಮ ವಹಿಸಲು ಸಂಬಂಧಪಟ್ಟ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ, ಮೈಸೂರಿನಲ್ಲಿರಾಜಾರೋಷವಾಗಿ ಡ್ರಗ್ಸ್‌ ತಯಾರಾಗುತ್ತಿತ್ತು ಎಂಬುದು ಆತಂಕದ ವಿಚಾರ,” ಎಂದು ಕಳವಳ ವ್ಯಕ್ತಪಡಿಸಿದರು.
ಯಾರು ಏನಂದ್ರು?

ಮೈಸೂರು ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮಾದಕ ವಸ್ತುಗಳ ದಂಧೆಗೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು, ಆರೋಪಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಉಲಮಾ ಹುಫ್ಛಾಜ್‌ ಯೂನಿಯನ್‌ ಪ್ರಧಾನ ಕಾರ್ಯುದರ್ಶಿ ನಾಸೀರ್‌ ಉಲ್ಲಾ ಖಾನ್‌ ಒತ್ತಾಯಿಸಿದರು.

”ಮಾದಕ ವಸ್ತುಗಳ ಬಳಕೆ, ಮಾರಾಟ ಮತ್ತು ಮಾದಕ ವ್ಯಸನಿಗಳ ಜಾಲ ವ್ಯಾಪಕವಾಗಿ ಹರಡುತ್ತಿದೆ. ಪ್ರತಿ ಏರಿಯಾದಲ್ಲಿಸಕ್ರಿಯವಾಗಿ ಬೆಳವಣಿಗೆ ಆಗುತ್ತಿರುವುದು ಕಂಡುಬರುತ್ತಿದೆ. ಇದರಿಂದ ನಾಗರಿಕರಿಗೂ ನೆಮ್ಮದಿ ಇಲ್ಲದಂತಾಗಿದೆ,” ಎಂದು ಸುದ್ದಿಗೋಷ್ಠಿಯಲ್ಲಿಹೇಳಿದರು.

”ಶಾಲಾ ಕಾಲೇಜು ವಿದ್ಯಾರ್ಥಿಗಳು, ಯುವಕರು, ಮಹಿಳೆಯರನ್ನು ಪ್ರಮುಖವಾಗಿ ಕೇಂದ್ರೀಕರಿಸಿ ಮಾರಾಟ ಮಾಡುತ್ತಿದ್ದಾರೆ. ಈ ನಶೆಯಿಂದ ಸಮಾಜಘಾತುಕ ಚಟುವಟಿಕೆ ಹೆಚ್ಚಾಗುತ್ತಿದೆ. ನರಸಿಂಹರಾಜ ಕ್ಷೇತ್ರ ಇದರಲ್ಲಿಮುಂಚೂಣಿಯಲ್ಲಿದೆ. ಈ ಹಿನ್ನೆಲೆಯಲ್ಲಿಡ್ರಗ್ಸ್‌ ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಂಡು ಶಿಕ್ಷೆ ವಿಧಿಸಬೇಕು,” ಎಂದು ಕೋರಿದರು.


Spread the love
Share:

administrator

Leave a Reply

Your email address will not be published. Required fields are marked *