Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

‘ಸು ಫ್ರಮ್ ಸೋ’ ಕನ್ನಡ ಚಿತ್ರರಂಗಕ್ಕೆ ಹೊಸ ಆಶಾಕಿರಣ: 3 ದಿನಗಳಲ್ಲಿ ₹6 ಕೋಟಿ ಕಲೆಕ್ಷನ್!

Spread the love

ಬೆಂಗಳೂರು: ಕನ್ನಡ ಚಿತ್ರರಂಗ ಸೋಲುತ್ತಿದೆ, ಎಷ್ಟೇ ಸಿನೆಮಾ ಮಾಡಿದರೂ ಜನ ಮಾತ್ರ ಚಿತ್ರ ಮಂದಿರಗಳಿಗೆ ಬರುತ್ತಿಲ್ಲ. ಸಿನೆಮಾ ಯಾರಿಗಾಗಿ ಮಾಡಬೇಕು ಎಂಬ ಪ್ರಶ್ನೆಗಳಿಗೆ “ತೆರೆ’ ಬಿದ್ದಿದೆ. ಒಳ್ಳೆಯ ಸತ್ವ ಇರುವ ಚಿತ್ರವನ್ನು ಕೊಟ್ಟರೆ ಖಂಡಿತ ಥಿಯೇಟರ್‌ಗಳಿಗೆ ಜನ ಬಂದೇ ಬರುತ್ತಾರೆ ಎಂಬುದನ್ನು ಈಗ “ಸು ಫ್ರಮ್ ಸೋ’ ಸಾಬೀತುಪಡಿಸಿದೆ.

ಜು. 25ರ ಶುಕ್ರವಾರ ತೆರೆಕಂಡಿದ್ದ ಸಿನೆಮಾ ಓಟ ರವಿವಾರವೂ ಭರ್ಜರಿಯಾಗಿ ಪ್ರದರ್ಶನ ಕಂಡಿದೆ.

ರಾಜ್ಯದ ಬಹುತೇಕ ಸಿಂಗಲ್‌ ಸ್ಕ್ರೀನ್‌ ಹಾಗೂ ಮಲ್ಟಿಪ್ಲೆಕ್ಸ್‌ ಚಿತ್ರಗಳಲ್ಲಿ “ಸು ಫ್ರಮ್ ಸೋ’ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಈ ಮೂಲಕ ದೊಡ್ಡ ಗೆಲುವಿಗಾಗಿ ಎದುರು ನೋಡುತ್ತಿದ್ದ ಕನ್ನಡ ಚಿತ್ರರಂಗಕ್ಕೆ “ಸು ಫ್ರಮ್ ಸೋ’ ಮತ್ತೆ ಹೊಸ ಆಶಾಕಿರಣವಾಗಿದೆ.

750ಕ್ಕೂ ಹೆಚ್ಚು ಪ್ರದರ್ಶನ
ಆರಂಭದಲ್ಲಿ ಕೆಲವೇ ಶೋಗಳ ಮೂಲಕ ತೆರೆಕಂಡ ಚಿತ್ರ ರವಿವಾರ ರಾಜ್ಯಾದ್ಯಂತ 750ಕ್ಕೂ ಹೆಚ್ಚು ಶೋಗಳ ಮೂಲಕ ಪ್ರದರ್ಶನ ಕಂಡದ್ದು ವಿಶೇಷ. ಸಾಮಾನ್ಯವಾಗಿ ಸ್ಟಾರ್‌ ಸಿನೆಮಾ ಮಾತ್ರ ಶೋ ಮುಂಜಾನೆಯೇ ಆರಂಭವಾಗುತ್ತದೆ. ಅದನ್ನೀಗ “ಸು ಫ್ರಮ್ ಸೋ’ ಸುಳ್ಳಾಗಿಸಿದ್ದು, ಏಕ ಪರದೆ ಚಿತ್ರಮಂದಿರಗಳು ಬೆಳಗ್ಗೆ 8 ಗಂಟೆಗೆ ಶೋ ಆರಂಭಿಸಿದರೆ, ಅನೇಕ ಮಲ್ಟಿಪ್ಲೆಕ್ಸ್‌ಗಳಲ್ಲಿ ಬೆಳಗ್ಗೆ 6 ಗಂಟೆಗೇ ಪ್ರದರ್ಶನ ಆರಂಭವಾಗಿದೆ.

“ಸು ಫ್ರಮ್ ಸೋ’ ಚಿತ್ರದ ಗೆಲುವು ಈಗ ಉತ್ತರ ಭಾರತದತ್ತ ದಾಪುಗಾಲು ಹಾಕುವಂತೆ ಮಾಡಿದೆ. ಅನಿಲ್‌ ತಡಾನಿ ಒಡೆತನದ ಬಾಲಿವುಡ್‌ನ‌ ಖ್ಯಾತ ವಿತರಣ ಸಂಸ್ಥೆಯಾದ “ಎಎ ಫಿಲಂಸ್‌’ ಚಿತ್ರದ ಉತ್ತರ ಭಾರತದ ವಿತರಣೆಯ ಹಕ್ಕನ್ನು ಪಡೆದಿದೆ.

ಪಿಎಚ್‌ಎಫ್ ಎಂಬ ಸಂಸ್ಥೆಯೊಂದು ಆ. 1ರಿಂದ ಚಿತ್ರವನ್ನು ವಿದೇಶಗಳಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಕನ್ನಡ ಚಿತ್ರರಂಗಕ್ಕೆ ಬರುವ ಅನೇಕ ತಂಡಗಳು ಹೊಸ ಹೊಸ ದಾರಿಯನ್ನು ಪರಿಚಯಿಸಿವೆ. ಅದರಲ್ಲಿ ಈ ಚಿತ್ರ ಕೂಡ ಒಂದು. ಇಲ್ಲಿ ನಟಿಸಿದ ಪ್ರತಿಯೊಬ್ಬರೂ ಹೊಸಬರು. ಇಂತಹ ಇನ್ನಷ್ಟು ಗೆಲುವು ಕನ್ನಡ ಚಿತ್ರರಂಗಕ್ಕೆ ಸಿಕ್ಕರೆ ಮತ್ತೆ ನಗು ಮೂಡುವುದರಲ್ಲಿ ಎರಡು ಮಾತಿಲ್ಲ.

3 ದಿನ; 6 ಕೋಟಿ ರೂ. ಕಲೆಕ್ಷನ್‌
ಚಿತ್ರ ಬಿಡುಗಡೆಯಾದ ದಿನದಿಂದಲೇ ಚಿತ್ರ ಬಾಕ್ಸ್‌ ಆಫೀಸ್‌ನಲ್ಲೂ ಕಮಾಲ್‌ ಮಾಡಿದೆ. 3 ದಿನಕ್ಕೆ ಈ ಚಿತ್ರ ಬರೋಬ್ಬರಿ 6 ಕೋಟಿ ರೂ. ಕಲೆಕ್ಷನ್‌ ಮಾಡುವ ಮೂಲಕ ಸಿನಿಮಂದಿಯ ಹುಬ್ಬೇರಿಸಿದೆ.

ಸಿನೆಮಾ ವರ್ಕ್‌ ಆಗಬೇಕಾದರೆ ಒಂದೋ ಕಾಂತಾರ ಅಥವಾ ಕೆಜಿಎಫ್‌ ತರಹ ಮಾಡ ಬೇಕು. ಇಲ್ಲವಾದರೆ ಜನ ನೋಡುವುದಿಲ್ಲ ಎಂಬ ಭಾವ ನಮ್ಮಲ್ಲೂ ಇತ್ತು. ಅದಕ್ಕೆ ಪೂರಕವಾಗಿ ನಮ್ಮ ಬಳಿ ಬರುವ ಜನರು ಕೂಡ ಅದನ್ನೇ ಹೇಳುತ್ತಿದ್ದರು. ಸಿನೆಮಾ ವನ್ನು ದೊಡ್ಡದು, ಚಿಕ್ಕದು ಮಾಡುವುದು ಜನ ಎಂಬುದು ಮತ್ತೆ ಸಾಬೀತಾಗಿದೆ.
-ರಾಜ್‌ ಬಿ. ಶೆಟ್ಟಿ , ನಟ, ನಿರ್ಮಾಪಕ


Spread the love
Share:

administrator

Leave a Reply

Your email address will not be published. Required fields are marked *