Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

“ದರ್ಶನ್ ಬಂಧನವೇ ಆಗುತ್ತಿರಲಿಲ್ಲ ಮುಚ್ಚಿ ಹೋಗುತ್ತಿತ್ತು”ಲಾಯರ್ ಜಗದೀಶ್

Spread the love

ನಟ ದರ್ಶನ್‌ ಜುಲೈ 26 ರ ಬೆಳಗ್ಗೆ ಥೈಲ್ಯಾಂಡ್‌ನಲ್ಲಿ ಡೆವಿಲ್‌ ಚಿತ್ರದ ಚಿತ್ರೀಕರಣ ಹಾಗೂ ಪ್ರವಾಸ ಮುಗಿಸಿ ವಾಪಸ್ ಬೆಂಗಳೂರಿಗೆ ಬಂದಿಳಿದಿದ್ದಾರೆ.

ಇನ್ನು ದರ್ಶನ್‌ ಥೈಲ್ಯಾಂಡ್‌ನಲ್ಲಿ ಚಿತ್ರೀಕರಣದಲ್ಲಿ ನಿರತರಾಗಿರುವಾಗಲೇ ಹೈಕೋರ್ಟ್‌ ಜಾಮೀನು ನೀಡಿದ್ದನ್ನ ಪ್ರಶ್ನಿಸಿ ಪೊಲೀಸರು ಸಲ್ಲಿಸಿದ್ದ ಅರ್ಜಿಯ ಅಂತಿಮ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿದೆ.

ವಿಚಾರಣೆ ಬಳಿಕ ಜಾಮೀನು ನೀಡಿದ ಹೈಕೋರ್ಟ್‌ ಅನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್‌ ವಿವೇಚನೆ ಇಲ್ಲದೇ ಜಾಮೀನು ನೀಡಲಾಗಿದೆ ಎಂದು ಕಿಡಿಕಾರಿದೆ. ಅಲ್ಲದೇ ಆದೇಶವನ್ನು ಕಾಯ್ದಿರಿಸಿದ್ದು, ಸದ್ಯ ದರ್ಶನ್‌ ಜಾಮೀನನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಲಿದೆಯಾ ಎಂಬ ಪ್ರಶ್ನೆ ಎದ್ದಿದೆ.

ಹೀಗೆ ಭಾರೀ ಕುತೂಹಲದ ಹಂತ ತಲುಪಿರುವ ದರ್ಶನ್‌ ಜಾಮೀನು ರದ್ದತಿ ಅರ್ಜಿ ಕುರಿತ ಸುಪ್ರೀಂ ಕೋರ್ಟ್‌ ವಿಚಾರಣೆ ಕುರಿತು ಲಾಯರ್‌ ಜಗದೀಶ್‌ ಮಾತನಾಡಿದ್ದು, ಜಾಮೀನು ರದ್ದಾಗುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ.

ಜಾಮೀನು ರದ್ದು ಮಾಡುವ ಪ್ರಮೇಯ ಇರದೇ ಇದ್ದರೆ ಸುಪ್ರೀಂ ಕೋರ್ಟ್‌ ಅಂದೇ ಆದೇಶವನ್ನು ಹೊರಡಿಸುತ್ತಿತ್ತು. ಸುಪ್ರೀಂ ಕೋರ್ಟ್‌ ಯೋಚಿಸುತ್ತಿದೆ ಎಂದರೆ ವಿನಯ್‌ ಕುಲಕರ್ಣಿ ಪ್ರಕರಣದ ರೀತಿಯೇ ಈ ಪ್ರಕರಣದಲ್ಲೂ ಜಾಮೀನು ರದ್ದಾಗಲಿದೆ ಎಂದರು.

ಅಲ್ಲದೇ ಇನ್ನೂ ಮುಂದುವರಿದು ಮಾತನಾಡಿದ ಜಗದೀಶ್‌ ಕುರಿ, ಕೋಳಿಗಳನ್ನು ಕತ್ತರಿಸಿದ ಹಾಗೆ ಕೊಲೆ ಮಾಡಿದ್ದಾರೆ. ಇದೊಂದು ಅಪರೂಪದಲ್ಲೇ ಅಪರೂಪದ ಕೇಸ್. ಬಹುಶಃ ಸಿದ್ದರಾಮಯ್ಯ ಅಲ್ಲದೇ ಬೇರೆ ಯಾರೇ ಇದ್ದಿದ್ದರೂ ದರ್ಶನ್‌ ಬಂಧನವಾಗುತ್ತಿರಲಿಲ್ಲ. ಆಮೇಲೆ ಚಂದನ್‌ ಅಲ್ಲದೇ ಬೇರೆ ಯಾರೇ ಆಗಿದ್ದರೂ ಈ ಕೇಸ್‌ ಬಗ್ತಾ ಇರಲಿಲ್ಲ, ತನಿಖೆ ನಡೆಯುತ್ತಾ ಇರಲಿಲ್ಲ ಎಂದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *