ಮಾನವ ಕಳ್ಳಸಾಗಣೆ ಆರೋಪ: ಛತ್ತೀಸ್‌ಗಢದಲ್ಲಿ ಇಬ್ಬರು ಕೇರಳ ನನ್‌ಗಳು ಸೇರಿ ಮೂವರ ಬಂಧನ!

ದುರ್ಗ್: ಮಾನವ ಕಳ್ಳಸಾಗಣೆಆರೋಪದ ಮೇಲೆ ಛತ್ತೀಸ್‌ಗಢದಲ್ಲಿ ಕೇರಳದ ಇಬ್ಬರು ನನ್(ಕ್ರೈಸ್ತ ಸನ್ಯಾಸಿನಿ) ಸೇರಿ ಒಟ್ಟು ಮೂವರನ್ನು ಬಂಧಿಸಲಾಗಿದೆ. ಮಹಿಳೆಯರ ಕಳ್ಳಸಾಗಣೆ ಆರೋಪದ ಮೇಲೆ ಛತ್ತೀಸ್‌ಗಢದ ದುರ್ಗ್ ರೈಲ್ವೆ ನಿಲ್ದಾಣದಿಂದ ಮೂವರನ್ನು ಬಂಧಿಸಲಾಗಿದೆ. ಬಸ್ತಾರ್‌ನ ಮೂವರು ಹುಡುಗಿಯರ ಹೇಳಿಕೆಗಳ ಆಧಾರದ ಮೇಲೆ, ದುರ್ಗ್ ಜಿಆರ್‌ಪಿ ಪೊಲೀಸರು ಈ ಪ್ರಕರಣದಲ್ಲಿ ಮಾನವ ಕಳ್ಳಸಾಗಣೆ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ಹುಡುಗಿಯರನ್ನು ಸಖಿ ಕೇಂದ್ರಕ್ಕೆ ಕಳುಹಿಸಿದ್ದಾರೆ. ಇಬ್ಬರು ನನ್ ಮತ್ತು ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.

ಮೂವರನ್ನೂ 143 ಬಿಎನ್‌ಎಸ್ ಅಡಿಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು ನ್ಯಾಯಾಲಯದಿಂದ ದುರ್ಗ್ ಜೈಲಿಗೆ ಕಳುಹಿಸಲಾಯಿತು.
ವಾಸ್ತವವಾಗಿ, ಛತ್ತೀಸ್‌ಗಢದ ಬಸ್ತಾರ್‌ನ ನಕ್ಸಲ್ ಪೀಡಿತ ಪ್ರದೇಶದಿಂದ ಮೂವರು ಹುಡುಗಿಯರನ್ನು ಹಮ್‌ಸಫರ್ ಎಕ್ಸ್‌ಪ್ರೆಸ್‌ನಲ್ಲಿ ಉತ್ತರ ಪ್ರದೇಶದ ಆಗ್ರಾಕ್ಕೆ ಕಳುಹಿಸಲಾಗುತ್ತಿದೆ ಎಂಬ ಮಾಹಿತಿ ಬಜರಂಗದಳ ದುರ್ಗದ ಕಾರ್ಯಕರ್ತರಿಗೆ ಬಂದಿತ್ತು.
ಇದಾದ ನಂತರ, ಬಜರಂಗದಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ರೈಲ್ವೆ ನಿಲ್ದಾಣಕ್ಕೆ ತಲುಪಿ ಇಬ್ಬರು ನನ್ಗಳಾದ ಸಿಸ್ಟರ್ ಪ್ರೀತಿ ಮೇರಿ, ವಂದನಾ ಫ್ರಾನ್ಸಿಸ್ ಮತ್ತು ಸುಖ್‌ಮಾನ್ ಮಾಂಡವಿ ಬಳಿ ಮೂವರು ಹೆಣ್ಣುಮಕ್ಕಳ ಬಗ್ಗೆ ಮಾಹಿತಿ ಕೇಳಿದ್ದರು. ಆದರೆ ಅವರು ಯಾವುದೇ ಮಾಹಿತಿ ನೀಡಲಿಲ್ಲ. ಬಳಿಕ ಅವರದ್ದೇ ಸಮುದಾಯದ ಸಾಕಷ್ಟು ಮಂದಿ ಅಲ್ಲಿಗೆ ತಲುಪಿದ್ದರು.
ವಿಷಯದ ಗಂಭೀರತೆಯನ್ನು ಅರ್ಥಮಾಡಿಕೊಂಡ ಜಿಆರ್‌ಪಿ ಪೊಲೀಸರು ಮೂವರು ಹುಡುಗಿಯರನ್ನು ವಿಚಾರಣೆ ನಡೆಸಿದರು. ಈ ಸಂದರ್ಭದಲ್ಲಿ, ಉತ್ತಮ ಉದ್ಯೋಗ ಮತ್ತು ಶಿಕ್ಷಣದ ಆಮಿಷವೊಡ್ಡಿ ಉತ್ತರ ಪ್ರದೇಶದ ಆಗ್ರಾ ನಗರಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಯುವತಿಯರು ಮಾಹಿತಿ ನೀಡಿದ್ದರು. ಎಲ್ಲಾ ಹುಡುಗಿಯರು ಹಿಂದೂ ಧರ್ಮದವರು.
ಅವರಲ್ಲಿ ಒಬ್ಬ ಹುಡುಗಿ ನಾರಾಯಣಪುರದವಳು ಎಂದು ಹೇಳಲಾಗುತ್ತಿದ್ದರೆ, ಇಬ್ಬರು ಯುವತಿಯರು ಓರ್ಚಾದವರು. ಹುಡುಗಿಯರ ಹೇಳಿಕೆಯ ನಂತರ, ದುರ್ಗ್ ಜಿಆರ್‌ಪಿ ಹೊರಠಾಣೆ ಪೊಲೀಸರು ದುರ್ಗ್ ಜಿಆರ್‌ಪಿ ಪೊಲೀಸರು ಪ್ರೀತಿ ಮೇರಿ, ವಂದನಾ ಫ್ರಾನ್ಸಿಸ್ ಮತ್ತು ಸುಖ್‌ಮಾನ್ ಮಾಂಡವಿ ವಿರುದ್ಧ ಮಾನವ ಕಳ್ಳಸಾಗಣೆ ಪ್ರಕರಣವನ್ನು ದಾಖಲಿಸಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಕಳುಹಿಸಿದ್ದಾರೆ.
ಅಲ್ಲಿಂದ ನ್ಯಾಯಾಲಯವು ಮೂವರನ್ನೂ ಜೈಲಿಗೆ ಕಳುಹಿಸಿದೆ. ಮಾನವ ಕಳ್ಳಸಾಗಣೆ ಪ್ರಕರಣವನ್ನು ದಾಖಲಿಸಿದ್ದಾರೆ. ಬಜರಂಗದಳದ ರವಿ ನಿಗಮ್ ಅವರ ದೂರಿನ ಮೇರೆಗೆ ಮೂವರು ಹುಡುಗಿಯರನ್ನು ರಕ್ಷಿಸಲಾಗಿದೆ ಎಂದು ಜಿಆರ್‌ಪಿ ಉಸ್ತುವಾರಿ ರಾಜ್‌ಕುಮಾರ್ ಬೋರ್ಜಾ ತಿಳಿಸಿದ್ದಾರೆ.
ಜಾಮೀನಿಗೆ ಅರ್ಜಿ ಛತ್ತೀಸ್ಗಢ ಮೂಲದ ಯುವತಿಯರಿಗೆ ಕೆಲಸ ಕೊಡಿಸಲು ಕರೆದೊಯ್ಯಲಾಗುತ್ತಿತ್ತು, ಅವರನ್ನು ಮತಾಂತರ ಮಾಡಿಲ್ಲ ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ. ಜತೆಗೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಸಂಸತ್ತಿನಲ್ಲಿ ಚರ್ಚೆಗೆ ಒತ್ತಾಯ ಸಂಸತ್ತಿನಲ್ಲಿ ಕೇರಳ ನನನ್ ಬಂಧನ ವಿಚಾರ ಕುರಿತು ಚರ್ಚಿಸುವಂತೆ ಕಾಂಗ್ರೆಸ್ ಸಂಸದರು ಪಟ್ಟು ಹಿಡಿದಿದ್ದರು.