Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸ್ಪೇಸ್ ಎಕ್ಸ್ ಗೆ ಸಾಧ್ಯವಾಗದ ಸಾಧನೆ: ಬೆಂಗಳೂರಿನ ವಿಶ್ವದ ಮೊತ್ತಮೊದಲ ಪೂರ್ಣ ರೀಯೂಸಬಲ್ ರಾಕೆಟ್

Spread the love

ಬೆಂಗಳೂರು: ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಕಂಪನಿಗೂ ಸಾಧ್ಯವಾಗದ ಕೆಲಸವನ್ನು ಬೆಂಗಳೂರಿನ ಎತೀರಿಯಲ್ ಎಕ್ಸ್ ಎನ್ನುವ ಕಂಪನಿ ಮಾಡಿದೆ. ನಭಕ್ಕೆ ಹೋಗಿ ವಾಪಸ್ ಭೂಮಿಗೆ ವಾಪಸ್ ಬರಬಲ್ಲ ರಾಕೆಟ್ ಅನ್ನು ಎತಿರಿಯಲ್ ಕಂಪನಿ ಅಭಿವೃದ್ಧಿಪಡಿಸಿದೆ. ಈ ಮೂಲಕ ಬೆಂಗಳೂರಿನ ಸ್ಟಾರ್ಟಪ್ ಹೊಸ ದಾಖಲೆ ಬರೆದಿದೆ. ವಿಶ್ವದಲ್ಲಿ ಯಾರೂ ಕೂಡ ಪೂರ್ಣ ರೀತಿಯಲ್ಲಿ ರೀಯೂಸಬಲ್ ರಾಕೆಟ್.

ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಸಂಸ್ಥೆ ರೀಯೂಸಬಲ್ ರಾಕೆಟ್ ತಯಾರಿಸಿದೆಯಾದರೂ ಅದು ಪೂರ್ಣ ರೀಯೂಸಬಲ್ ಅಲ್ಲ. ರಾಕೆಟ್​ನಲ್ಲಿನ ಲೋಯರ್ ಸ್ಟೇಜ್​ನ ಭಾಗ ಮಾತ್ರ ಭೂಮಿಗೆ ಮರಳಿ, ಮರುಬಳಕೆಗೆ ಯೋಗ್ಯವಾಗಿರುತ್ತದೆ. ಬೂಸ್ಟರ್ ಭಾಗವು ತನ್ನ ಕೆಲಸ ಮುಗಿದ ಬಳಿಕ ನಾಶವಾಗಿ ಹೋಗುತ್ತದೆ. ಪೂರ್ಣವಾಗಿ ರೀಯೂಸಬಲ್ ಆಗಬಲ್ಲಂತಹ ಇಡೀ ರಾಕೆಟ್ ಅಥವಾ ಸ್ಪೇಸ್​ಶಿಪ್ ಅನ್ನು ತಯಾರಿಸುವ ಪ್ರಯತ್ನದಲ್ಲಿ ಸ್ಪೇಸ್ ಎಕ್ಸ್ ಇದೆ. ಆದರೆ, ಅದಕ್ಕೂ ಮೊದಲೇ ಬೆಂಗಳೂರಿನ ಎತೀರಿಯಲ್ ಕಂಪನಿ ಈ ಕೆಲಸ ಮಾಡಿದೆ.

2022ರಲ್ಲಿ ಹುಟ್ಟಿದ ಎತೀರಿಯಲ್​ಎಕ್ಸ್ ಕಂಪನಿ ಕೇವಲ ಮೂರು ವರ್ಷದಲ್ಲಿ ತನ್ನ ಛಾಪು ಮೂಡಿಸಿದೆ. ಅಪ್ಪರ್ ಮತ್ತು ಬೂಸ್ಟರ್ ಭಾಗಗಳೆರಡೂ ಭೂಮಿಗೆ ಸುರಕ್ಷಿತವಾಗಿ ಮರಳಿ, ಮರುಬಳಕೆಗೆ ಯೋಗ್ಯವಾಗಿರಬಲ್ಲ ರಾಕೆಟ್​ಗಳನ್ನು ಈ ಕಂಪನಿ ತಯಾರಿಸುತ್ತಿದೆ. ಈ ತಂತ್ರಜ್ಞಾನವನ್ನು ಕಂಪನಿ ಯಶಸ್ವಿಯಾಗಿ ಪರೀಕ್ಷೆ ಮಾಡಿದೆ. ಇದನ್ನು ಬಳಸಿ ರಾಕೆಟ್ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ.

ಬಿಸಿಯಿಂದ ಹಾನಿಯಾಗದಂತೆ ಹೊಸ ತಂತ್ರಜ್ಞಾನ

ಎದಿರಿಯಲ್​ಎಕ್ಸ್ ಸಂಸ್ಥೆ ವಿನೂತನ ರಾಕೆಟ್ ಎಂಜಿನ್ ಫೀಡ್ ಸೈಕಲ್ ನಿರ್ಮಿಸಿದೆ. ಇದು ರಾಕೆಟ್​ನಲ್ಲಿ ಇಂಧನವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುತ್ತದೆ. ರಾಕೆಟ್ ಭೂಮಿಯ ವಾತಾವರಣಕ್ಕೆ ಬರುವಾಗ ಸಾಮಾನ್ಯವಾಗಿ ಅತಿಯಾದ ಶಾಖದಿಂದಾಗಿ ಸುಟ್ಟು ಹೋಗುತ್ತದೆ. ಬಹಳ ದುಬಾರಿಯಾದ ಹೀಟ್ ಶೀಲ್ಡ್​ಗಳನ್ನು ಬಳಸಬೇಕಾಗುತ್ತದೆ. ಆದರೆ, ಎತಿರಿಯಲ್ ಅಭಿವೃದ್ಧಿಪಡಿಸಿರುವ ಎಂಜಿನ್​ನಲ್ಲಿ ಬಿಸಿಯನ್ನು ಬೇರೆಡೆ ವರ್ಗಾಯಿಸುವ ಮೂಲಕ ರಾಕೆಟ್​ನ ಅಪ್ಪರ್ ಸ್ಟೇಜ್ ಅನ್ನು ಹಾಳಾಗದಂತೆ ರಕ್ಷಿಸುತ್ತದೆ.

ಎದಿರಿಯಲ್​ಎಕ್ಸ್ ಸಂಸ್ಥೆಯ ರೀಯೂಸಬಲ್ ರಾಕೆಟ್ ಅನ್ನು ರೇಜರ್ ಕ್ರೆಸ್ಟ್ ಎಂಕೆ-1 ಎಂದು ಹೆಸರಿಸಿದೆ. ಇದು ಮಧ್ಯಮ ಸಾಮರ್ಥ್ಯದ ರಾಕೆಟ್. ಕೆಳ ಭೂಕಕ್ಷೆಗೆ 24.8 ಟನ್​ಗಳವರೆಗೆ ಪೇಲೋಡ್ ಹೊತ್ತೊಯ್ಯಬಲ್ಲುದು. ತುಸು ಮೇಲಿರುವ ಜಿಟಿಒ ಕಕ್ಷೆಗೆ 10.8 ಟನ್​ಗಳಷ್ಟು ಪೇಲೋಡ್ ಅನ್ನು ಈ ರಾಕೆಟ್ ಒಯ್ಯುವ ಸಾಮರ್ಥ್ಯ ಹೊಂದಿದೆ.


Spread the love
Share:

administrator

Leave a Reply

Your email address will not be published. Required fields are marked *