ಮದ್ಯ, ತಂಬಾಕು, ತಂಪು ಪಾನೀಯ ಬೆಲೆ ಶೇ.50 ರಷ್ಟು ಹೆಚ್ಚಿಸಲು WHO ಕರೆ: ಮತ್ತೊಂದು ಶಾಕ್‌ಗೆ ಮದ್ಯಪ್ರಿಯರು ಸಿದ್ಧರಾಗಿ!

ಕರ್ನಾಟಕದಲ್ಲಿ ಮದ್ಯದ ಬೆಲೆ ಈಗಾಗಲೇ ದುಬಾರಿಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಮೂರು ಬಾರಿ ಹೆಚ್ಚಳವಾಗಿದೆ. ಬಿಯರ್‌ನ ಬೆಲೆ ಸಹ ಹೆಚ್ಚಳವಾಗಿದೆ. ಇದರ ನಡುವೆ ಕರ್ನಾಟಕ ಮಾತ್ರವಲ್ಲ ಭಾರತವೂ ಸೇರಿದಂತೆ ವಿಶ್ವದಾದ್ಯಂತ ಮದ್ಯ, ತಂಬಾಕು ಹಾಗೂ ತಂಪು ಪಾನೀಯಗಳ ಬೆಲೆ ಭಾರೀ ದೊಡ್ಡ ಮಟ್ಟದಲ್ಲಿ ಹೆಚ್ಚಳವಾಗುವ ಪ್ರಸ್ತಾವನೆಯೊಂದನ್ನು ಸಲ್ಲಿಕೆ ಮಾಡಲಾಗಿದೆ

ಮದ್ಯ ಪ್ರಿಯರಿಗೆ ಈಗಾಗಲೇ ಕರ್ನಾಟಕ ಸರ್ಕಾರವು ಭಾರೀ ಶಾಕ್ ನೀಡಿದೆ. ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಮದ್ಯ ಖರೀದಿ ಪ್ರಮಾಣ ಸಹ ಇಳಿಕೆ ಕಂಡಿದೆ. ಇದರ ನಡುವೆ ಇದೀಗ ಮದ್ಯದ ಬೆಲೆಯು ದುಬಾರಿಯಾಗುವ ಚರ್ಚೆ ಶುರುವಾಗಿದೆ.
ಮದ್ಯದ ಬೆಲೆಯು ಭಾರೀ ದೊಡ್ಡ ಮಟ್ಟದಲ್ಲಿ ಹೆಚ್ಚಳವಾಗಿದೆ. ಮದ್ಯ ಪ್ರಿಯರು ನಿರಂತರ ಬೆಲೆ ಏರಿಕೆಯ ಶಾಕ್‌ನಿಂದ ಇನ್ನೂ ಹೊರಗೆ ಬಂದಿಲ್ಲ. ಮದ್ಯ ಮಾರಾಟ ಕಂಪನಿಗಳು ಸಹ ಮದ್ಯದ ಬೆಲೆಯನ್ನು ನಿರಂತರವಾಗಿ ಹೆಚ್ಚಳ ಮಾಡಬಾರದು ಕಡಿಮೆ ಮಾಡಬೇಕು ಎಂದು ಒತ್ತಾಯಿಸುತ್ತಲ್ಲೇ ಇವೆ. ಇದೀಗ ಮದ್ಯ ಪ್ರಿಯರು ಮದ್ಯ ಖರೀದಿಯಿಂದಲೇ ತುಂಬಾ ದೂರ ಓಡಿ ಹೋಗುವಂತಹ ನ್ಯೂಸ್‌ವೊಂದು ಬಂದಿದೆ. ಮದ್ಯ ಪ್ರಿಯರಿಗೆ ಭಾರೀ ತಲೆಬಿಸಿ ಎದುರಾಗುವ ಸಾಧ್ಯತೆ ಇದೆ.
ಹೌದು ವಿಶ್ವ ಆರೋಗ್ಯ ಸಂಸ್ಥೆಯು ತಂಪು ಪಾನೀಯಗಳು, ಮದ್ಯ ಮತ್ತು ತಂಬಾಕಿನ ಬೆಲೆಗಳನ್ನು ಶೇ. 50 ರಷ್ಟು ಹೆಚ್ಚಿಸುವಂತೆ ಕರೆ ನೀಡಿದೆ. ಸೆವಿಲ್ಲೆಯಲ್ಲಿ ಆಯೋಜಿಸಿದ್ದ UN ಅಭಿವೃದ್ಧಿಗಾಗಿ ಹಣಕಾಸು ಸಮ್ಮೇಳನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುವ ಹಾಗೂ ವಿಶ್ವಾದ್ಯಂತ ಆರೋಗ್ಯ ವ್ಯವಸ್ಥೆ ಸುಧಾರಿಸುವ ಭಾಗವಾಗಿ ಈ ಶಿಫಾರಸ್ಸು ಮಾಡಲಾಗಿದೆ. ಈ ಶಿಫಾರಸ್ಸಿನ ಮೂಲಕ ಮುಂದಿನ ವರ್ಷಗಳಲ್ಲಿ ಹಂತ – ಹಂತವಾಗಿ ಬೆಲೆ ಏರಿಕೆ ಮಾಡುವುದಕ್ಕೆ ಸೂಚಿಸಲಾಗಿದೆ. ಮುಂದಿನ ಹತ್ತು ವರ್ಷಗಳಲ್ಲಿ ಈ ಬೆಲೆ ಏರಿಕೆ ಮಾಡಬಹುದು ಎಂದು ಹೇಳಲಾಗಿದೆ.
ಈ ರೀತಿ ಹೆಚ್ಚುವರಿ ತೆರಿಗೆಗಳನ್ನು ಜಾರಿಗೆ ಮಾಡುವ ಮೂಲಕ, ಎಲ್ಲಾ ದೇಶಗಳಲ್ಲೂ ಸಕ್ಕರೆ ಕಾಯಿಲೆ ಮತ್ತು ಕ್ಯಾನ್ಸರ್‌ಗಳಂತಹ ಗಂಭೀರ ರೋಗಗಳನ್ನು ಕಡಿಮೆ ಮಾಡಬಹುದು ಎಂದು WHO ಅಭಿಪ್ರಾಯಪಟ್ಟಿದೆ. ಈ ಕ್ರಮದಿಂದಾಗಿ ಜಾಗತಿಕವಾಗಿ ಆರೋಗ್ಯ ಸಮಸ್ಯೆಗಳು ಕಡಿಮೆ ಆಗಲಿವೆ ಎನ್ನಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಈ ರೀತಿ ಆರೋಗ್ಯ ತೆರಿಗೆಗಳ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಆರೋಗ್ಯ ತೆರಿಗೆಗಳು ನಮ್ಮಲ್ಲಿರುವ ಅತ್ಯಂತ ಪರಿಣಾಮಕಾರಿ ಕ್ರಮ ಎಂದು ಹೇಳಲಾಗಿದೆ.
ಈ ದೇಶಗಳಲ್ಲಿ ಯಶಸ್ವಿ: ಇನ್ನು ಮದ್ಯ ಹಾಗೂ ತಂಪು ಪಾನೀಯ (ಸಕ್ಕರೆ ಅಂಶ ಇರುವ ಕೂಲ್ ಡ್ರಿಂಕ್ಸ್)ಗಳ ಮಾರಾಟದ ಬೆಲೆ ಏರಿಕೆ ಮಾಡಲಾಗಿದ್ದು. ಇದರಿಂದ ಕೆಲವು ದೇಶಗಳಲ್ಲಿ ಆರೋಗ್ಯ ಸಮಸ್ಯೆ ಇಳಿಕೆ ಆಗಿದೆ. ಕೊಲಂಬಿಯಾ ಹಾಗೂ ದಕ್ಷಿಣ ಆಫ್ರಿಕಾದಂತಹ ದೇಶಗಳಲ್ಲಿ ಈ ಪ್ರಯೋಗವನ್ನು ಮಾಡಲಾಗಿದೆ ಎಂದೂ ಉಲ್ಲೇಖ ಮಾಡಲಾಗಿದೆ.
