ಜಿ ಎಸ್ ಟಿ ನೋಟಿಸ್ ಹಿಂಪಡೆಯಲು ವ್ಯಾಪಾರಿಗಳ ಮುಷ್ಕರ ರದ್ದು

ಬೆಂಗಳೂರು: ಸಣ್ಣ ವ್ಯಾಪಾರಿಗಳಿಗೆ (small traders) ಜಿಎಸ್ಟಿ (GST)ನೋಟಿಸ್ ವಿರೋಧಿಸಿ ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ ಜುಲೈ 25ರಂದು ಕರೆ ನಿಡಿದ್ದ ಮುಷ್ಕರವನ್ನು ವಾಪಸ್ ಪಡೆದುಕೊಂಡಿದೆ. ಜಿಎಸ್‌ಟಿ ನೋಟಿಸ್ ಪಡೆದ ವರ್ತಕರಿಂದ 3 ವರ್ಷದ ತೆರಿಗೆ ಬಾಕಿ ವಸೂಲಾತಿ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಸಣ್ಣ ವರ್ತಕರು ಪ್ರತಿಭಟನೆ ವಾಪಸ್ ಪಡೆದುಕೊಂಡಿದ್ದು, ಸಿಎಂ ಸಿದ್ದರಾಮಯ್ಯನವರ ನಡೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

40 ಲಕ್ಷ ರೂ. ವ್ಯವಹಾರ ನಡೆಸಿದ್ದಕ್ಕೆ ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯ ವರ್ತಕರಿಗೆ ನೋಟಿಸ್ ಜಾರಿ ಮಾಡಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾದ ಬೆನ್ನಲ್ಲೇ ಸಿದ್ದರಾಮಯ್ಯ ಇಂದು ತೆರಿಗೆ ಇಲಾಖೆಯ ಅಧಿಕಾರಿಗಳು, ವರ್ತಕ ಸಂಘದ ಪ್ರತಿನಿಧಿಗಳ ಜೊತೆ ಸಭೆ ನಡೆಸಿ, ವರ್ತಕರ ತೆರಿಗೆ ಹಣವನ್ನು ಮನ್ನಾ ಮಾಡಲು ತೀರ್ಮಾನಿಸಲಾಗಿದೆ. ಇದರ ಬೆನ್ನಲ್ಲೇ ಸಣ್ಣ ವ್ಯಾಪಾರಿಗಳು ಜುಲೈ 25ರಂದು ಕರೆ ನೀಡಿದ್ದ ಬಂದ್ ವಾಪಸ್ ಪಡೆದುಕೊಂಡಿದ್ದಾರೆ. ಈ ಸಂಬಂಧ ಸಣ್ಣ ಪುಟ್ಟ ವ್ಯಾಪಾರಿಗಳ ಹೋರಾಟದ ನೇತೃತ್ವ ವಹಿಸಿದ್ದ ಕಾರ್ಮಿಕ ಕಾರ್ಮಿಕ ಪರಿಷತ್ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಸರ್ಕಾರದ ಭರವಸೆ ಬೆನ್ನಲ್ಲೇ ಪ್ರತಿಭಟನೆ ಕೈಬಿಡುವುದಾಗಿ ಘೋಷಿಸಿದರು.
ಮೊದಲನೆಯದಾಗಿ ನಾವು ಈ ಕಪ್ಪು ಪಟ್ಟಿಯನ್ನು ವಾಪಸ್ಸು ತೆಗೆಯುತ್ತಿದ್ದೇವೆ . ಸರ್ಕಾರದ ಮರಣ ಶಾಸನ ಕೊನೆಗಾಣಿಸಿದ್ದಕ್ಕೆ ಧನ್ಯವಾದ ಹೇಳುತ್ತೇನೆ. ಸರ್ಕಾರ ಯಾವುದೇ ಷರತ್ತು ಹಾಕದೆ ಎಲ್ಲ ನೊಟೀಸ್ ವಾಪಸ್ ತೆಗೆದುಕೊಳ್ಳಲು ನಿರ್ಧಾರ ಮಾಡಿದೆ ಎಂದು ನನಗೆ ಮಾಹಿತಿ ಸಿಕ್ಕಿದೆ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸದೆ ಇದ್ದಲ್ಲೇ ನಾಳೆ ಫ್ರೀಡಂ ಪಾರ್ಕಿನಲ್ಲಿ ಲಕ್ಷಾಂತರ ಜನ ಸೇರುತ್ತಿದ್ದರು. ಸರ್ಕಾರ ಮತ್ತೆ ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ನೀಡದ ರೀತಿ ನೋಡಿಕೊಳ್ಳಬೇಕು . ನಮ್ಮ ಹಲವು ದಿನಗಳ ಹೋರಾಟ ನಿಜಕ್ಕೂ ಒಂದು ಸುಖಾಂತ್ಯ ಕಂಡಿದೆ. ಇದಕ್ಕೆ ಖುಷಿ ಆಗುತ್ತಿದೆ ಎಂದು ಭಾವೋದ್ವೇಗಕ್ಕೆ ಒಳಗಾದರು.
ಈ ಕುರಿತು ಚಿಕ್ಕಪೇಟೆ ಟ್ರೇಡರ್ಸ್ ವರ್ತಕರ ಸಂಘದ ಸದಸ್ಯ ಸಜ್ಜನ್ ಮೆಹತಾ ಟಿವಿ9ಗೆ ಪ್ರತಿಕ್ರಿಯಿಸಿ, FKCCI ಸೇರಿದಂತೆ ಹಲವು ಸಂಘ ಸಂಸ್ಥೆಗಳ ಜೊತೆ ಸಿಎಂ ಸಭೆ ನಡೆಸಿದ್ದಾರೆ. ಹೀಗಾಗಿ ಪ್ರತಿಭಟನೆ, ರ್ಯಾಲಿ ನಮ್ಮ ಅಸೋಸಿಯೇಷನ್ ವಾಪಾಸ್ ಪಡೆದಿದೆ. ಬಂದ್ ಮಾಡಿದ್ರೆ ಬೆಂಗಳೂರಿನ ಬ್ಯುಸಿನೆಸ್ ಹಾಳಾಗುತ್ತೆ. ನಮ್ಮ ಬ್ಯುಸಿನೆಸ್ ತುಮಕೂರಿಗೆ ಹೋಗುತ್ತೆ. ಸರ್ಕಾರ 40 ಲಕ್ಷದಿಂದ 5 ಕೋಟಿ ರೂ.ವರೆಗೆ ಇದ್ದವರಿಗೆ ನೋಟಿಸ್ ಕೊಟ್ಟಿದೆ. ಹಳೆ ಅರಿಯರ್ಸ್ ಪರಿಹಾರ ಮಾಡುತ್ತಾರೆ. ಸಿಎಂ ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ಹೀಗಾಗಿ ನಾಳೆಯ ಪ್ರತಿಭಟನೆ ಕೈ ಬಿಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದರು.
