Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹೊಸಕೋಟೆ ಬಿರಿಯಾನಿ ಪ್ರಿಯರಿಗೆ ಶಾಕ್: ಬೆಳಗಿನ ಜಾವ 4 ಗಂಟೆಗೆ ಬಿರಿಯಾನಿ ಸಿಗಲ್ಲ, ಪೊಲೀಸರ ಖಡಕ್ ಸೂಚನೆ!

Spread the love

ಹೊಸಕೋಟೆ: 4 ಗಂಟೆಗೆ ಸಿಗುವ ಬಿರಿಯಾನಿ ಎಂದೇ ಫೇಮಸ್‌ ಆಗಿರುವ ಹೊಸಕೋಟೆ ಬಿರಿಯಾನಿ ಪ್ರಿಯರಿಗೆ ಶಾಕ್‌ ಆಗಲಿದೆ. ಹೌದು, ಮಾರ್ನಿಂಗ್‌ ಹೊರಟು ಲಾಂಗ್‌ ಡ್ರೈವ್‌ ಮಾಡಿಕೊಂಡು ಹೊಸಕೋಟೆಯಲ್ಲಿ ಬಿಸಿಬಿಸಿ ಬಿರಿಯಾನಿ ತಿನ್ನುತ್ತಿದ್ದ ಯುವಪೀಳಿಗೆಗೆ ಪೊಲೀಸ್‌ ಶಾಕ್‌ ನೀಡಿದ್ದಾರೆ.

4 ಗಂಟೆಗೆ ಹೋಟೆಲ್ ತೆರೆದು ಬಿರಿಯಾನಿ ಮಾರಾಟ ಮಾಡೋದ್ರಿಂದ ಜನರು ಮಧ್ಯಾಹ್ಯ ರಾತ್ರಿ, ನಸುಕಿನ ಮಂಜಿನಲ್ಲಿ ಡ್ರೈವ್ ಮಾಡ್ತಾ ಹೋಟೆಲ್ಗಳಿಗೆ ಬರ್ತಾರೆ. ಯುವಕರು ಲಾಂಗ್ ಡ್ರೈವ್ ನೆಪದಲ್ಲಿ ಬಿರಿಯಾನಿಗೆ ಕ್ಯೂ ನಿಲ್ತಿದ್ದಾರೆ. ಇದ್ರಿಂದ ಸಮಸ್ಯೆ ಹೆಚ್ಚಾಗಿದೆ ಎಂದು ಮಾಲೀಕರಿಗೆ ಖಾಕಿ ಕ್ಲಾಸ್ ತೆಗೆದುಕೊಂಡಿದೆ.

ಯುವಕರು ಲಾಂಗ್ ಡ್ರೈವ್ ಅಂತ ಸ್ಪೀಡ್ ಆಗಿ ವಾಹನ ಚಲಿಸೋದ್ರಿಂದ ಅಪಘಾತ ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಇನ್ಮುಂದೆ ನೀವು 4 ಗಂಟೆಗೆ ಬಿರಿಯಾನಿ ಹೋಟೆಲ್ ತೆರೆಯುವಂತಿಲ್ಲ ಎಂದು ಮಾಲೀಕರಿಗೆ ಖಾಕಿ ಖಡಕ್ ಸೂಚನೆ ನೀಡಿದೆ.

ಹೊಸಕೋಟೆ ಬಿರಿಯಾನಿ ಸಖತ್ ಫೇಮಸ್ ಆಗಿದೆ. ದೂರ ದೂರುಗಳಿಂದ ಬೆಳಗ್ಗೆ 4 ಗಂಟೆಗೆ ಮೊದಲೇ ಕ್ಯೂ ನಿಂತು ಮಟನ್ ಬಿರಿಯಾನಿ ತಿಂತಿದ್ರು. ಆದ್ರೀಗ ಮುಂಜಾನೆ ಆರಂಭವಾಗ್ತಿದ್ದ ಬಿರಿಯಾನಿ ಹೋಟೆಲ್ ಸಮಯ ಬದಲಾವಣೆ ಆಗಲಿದೆ. 4 ಗಂಟೆಗೆ ಬದಲಿಗೆ 6 ಗಂಟೆಗೆ ಹೋಟೆಲ್ ತೆರೆಯುವಂತೆ ಪೊಲೀಸರು ಸೂಚನೆ ನೀಡಿದ್ದಾರೆ ಎನ್ನಲಾಗ್ತಿದೆ


Spread the love
Share:

administrator

Leave a Reply

Your email address will not be published. Required fields are marked *