Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮನೆ ಖಾಲಿ ಮಾಡ್ತಾ ಬೆಳ್ಳಿಯ ಕಡಗ ಉಡುಗೊರೆ! – ಬೆಂಗಳೂರು ಮನೆ ಮಾಲೀಕನಿಂದ ಬಾಡಿಗೆದಾರನಿಗೆ ಔದಾರ್ಯ

Spread the love

ಬೆಂಗಳೂರು:ಬೆಂಗಳೂರಿಗೆ ಉದ್ಯೋಗ ಹಾಗೂ ಕಲಿಕೆಗಾಗಿ ಬರುವ ಅನೇಕರಿಗೆ ಬಾಡಿಗೆಗೆ ಮನೆ ಹುಡುಕುವುದು ಕಷ್ಟದ ಕೆಲಸ. ಮನೆ ಸಿಕ್ಕಿದರೂ ಬಾಡಿಗೆ ಹೆಚ್ಚು, ಇಲ್ಲದಿದ್ದರೆ ಉದ್ಯೋಗದ ಸ್ಥಳದಿಂದ ಮನೆ ತುಂಬಾ ದೂರ ಎನ್ನುವ ಅಸಮಾಧಾನ. ಹೀಗಾಗಿ ಈ ಬಾಡಿಗೆ ಮನೆ ಹಾಗೂ ಮನೆ ಮಾಲೀಕರ ವಿಚಾರದಲ್ಲಿ ಸಾಕಷ್ಟು ಕಹಿ ಅನುಭವವಾಗಿರುತ್ತದೆ. ಆದರೆ ಇಲ್ಲೊಬ್ಬ ಬೆಂಗಳೂರಿನ ವ್ಯಕ್ತಿಯೂ ಮನೆ ಮಾಲೀಕನು ತನ್ನನ್ನು ನಡೆಸಿಕೊಂಡ ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಮನೆ ಖಾಲಿ ಮಾಡುವ ಸಂದರ್ಭದಲ್ಲಿ ತನ್ನನ್ನು ಅತಂತ್ಯ ಪ್ರೀತಿಯಿಂದ ಬೆಳ್ಳಿಯ ಕಡಗವನ್ನು ಉಡುಗೊರೆಯಾಗಿ ನೀಡಿ ವಿದಾಯ ಹೇಳಿದ್ದಾರೆ, ಒಳ್ಳೆಯ ಮನಸ್ಸಿನ ವ್ಯಕ್ತಿ ಎಂದು ರೆಡ್ಡಿಟ್ ಹಂಚಿಕೊಂಡಿದ್ದಾರೆ.

Reddit ರೆಡ್ಡಿಟ್ ಖಾತೆಯಲ್ಲಿ ಬಾಡಿಗೆ ಮನೆ ಬಿಡುವಾಗ ಮನೆ ಮಾಲೀಕನ ಪ್ರೀತಿಯ ಬೀಳ್ಕೊಡುಗೆ ಉಡುಗೊರೆಯ ಬಗ್ಗೆ ಹೇಳಿಕೊಂಡಿದ್ದಾರೆ. ಮನೆ ಮಾಲೀಕರು ಠೇವಣಿಯನ್ನೂ ಹಿಂದಿರುಗಿಸದ ನಗರದಲ್ಲಿ, ನನ್ನ ಮನೆ ಮಾಲೀಕರು ನನಗೆ ವಿದಾಯ ಉಡುಗೊರೆಯನ್ನು ನೀಡಿದರು. ನಾನು ಎರಡು ವರ್ಷಗಳ ಕಾಲ ಒಂದೇ ಮನೆಯಲ್ಲಿ ವಾಸಿಸುತ್ತಿದ್ದ ವೇಳೆಯಲ್ಲಿ ಮಾಲೀಕರು ತಮ್ಮ ವಾಸ್ತವ್ಯದ ಉದ್ದಕ್ಕೂ ತಮ್ಮನ್ನು ಮಗನಂತೆ ನಡೆಸಿಕೊಂಡಿದ್ದಾರೆ. ಮನೆ ಖಾಲಿ ಮಾಡುವಾಗ ಮನೆಯ ಮಾಲೀಕರಿಂದ ಬೀಳ್ಕೊಡುಗೆ ಉಡುಗೊರೆಯಾಗಿ ಬೆಳ್ಳಿ ಕಡಗ ಸಿಕ್ಕಿದೆ. ನನಗೆ ಅಗತ್ಯವಿದ್ದ ವಸ್ತುಗಳ ತೆಗೆದುಕೊಂಡು ಬರಲು ನನಗೆ ಅಗತ್ಯವಿದ್ದಾಗಲೆಲ್ಲಾ ಅವರು ತನ್ನ ಸ್ಕೂಟಿಯನ್ನು ಸಹ ನನಗೆ ನೀಡುತ್ತಿದ್ದರು ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ನಾನಾ ರೀತಿಯ ಕಾಮೆಂಟ್ ಮಾಡಿ ಆ ಮನೆ ಮಾಲೀಕರ ಒಳ್ಳೆಯ ವ್ಯಕ್ತಿತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ನೀವು 8 ಬಿಲಿಯನ್‌ನಲ್ಲಿ 1 ಮೊಟ್ಟೆಯಿಡುವ ಅವಕಾಶವಿರುವ ಮನೆ ಮಾಲೀಕರನ್ನು ಆಕಸ್ಮಿಕವಾಗಿ ಭೇಟಿಯಾದಿರಿ ಎಂದಿದ್ದಾರೆ. ಇನ್ನೊಬ್ಬರು, ಕೆಲವು ವರ್ಷಗಳ ಹಿಂದೆ ನನಗೂ ಒಳ್ಳೆಯ ಮನೆ ಮಾಲೀಕರು ಸಿಕ್ಕಿದ್ದರು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೀವು ಅವರಿಗೆ ಏನಾದರೂ ರೀತಿಯಲ್ಲಿ ಉಪಕಾರ ಮಾಡಿ. ಇಷ್ಟೊಂದು ಒಳ್ಳೆಯ ಜನರು ಇರುವುದು ಅಪರೂಪ. ನೀವು ಅವರೊಂದಿಗಿನ ಒಳ್ಳೆಯ ಬಾಂಧವ್ಯವನ್ನು ನಿಮ್ಮ ಕೆಲಸ ಕಾರ್ಯಗಳಲ್ಲಿ ವ್ಯಕ್ತಪಡಿಸಬೇಕು ಎಂದು ಹೇಳಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *