ಪಿಒಕೆನಲ್ಲಿ ಪತ್ತೆಯಾದ ಮೋಸ್ಟ್ ವಾಂಟೆಡ್ ಭಯೋತ್ಪಾದಕ – ಭಾರತ ಗಡಿಯಲ್ಲಿ ಹೈ ಅಲರ್ಟ್

ನವದೆಹಲಿ : ಪುಲ್ವಾಮಾ ಭಯೋತ್ಪಾದಕ ದಾಳಿ, ಪಠಾಣ್ ಕೋಟ್ ದಾಳಿ ಸೇರಿದಂತೆ ಭಾರತದಲ್ಲಿ ಹಲವು ಉಗ್ರ ಚಟುವಟಿಕೆ ನಡೆಸಿರುವ ಮೋಸ್ಟ್ ವಾಂಟೆಡ್ ಉಗ್ರ ಮಸೂಜ್ ಅಜರ್ ಇದೀಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪತ್ತೆಯಾಗಿದ್ದಾನೆ. ಆಪರೇಶನ್ ಸಿಂದೂರ್ ವೇಳೆ ಬಹಾವಲ್ಪುರ್‌ನಲ್ಲಿರುವ ಮಸೂಜ್ ಅಜರ್ ಭದ್ರಕೋಟೆಯನ್ನು ಧ್ವಂಸ ಮಾಡಲಾಗಿತ್ತು.

ಇದೀಗ ಇಲ್ಲಿಂದ 1000 ಕಿಲೋಮೀಟರ್ ದೂರದಲ್ಲಿ ಮಸೂದ್ ಅಜರ್ ಪತ್ತೆಯಾಗಿದ್ದು, ಭಾರತದ ಗಡಿಯಲ್ಲಿ ಹೈ ಅಲರ್ಟ್ ನೀಡಲಾಗಿದೆ. ಮತ್ತೊಂದು ದಾಳಿಗೆ ಮಸೂದ್ ಅಜರ್ ತಯಾರಿ ಮಾಡಿಕೊಳ್ಳುತ್ತಿರುವ ಕುರಿತು ಅನುಮಾನಗಳು ವ್ಯಕ್ತವಾಗಿದೆ.
ಗಿಲ್ಟಿಟ್ ಬಾಲ್ಟಿಸ್ತಾನ್ ಪ್ರದೇಶದಲ್ಲಿದ್ದಾನೆ ಅಜರ್
ಪಾಕಿಸ್ತಾನ ಆಕ್ರಮಿತಿ ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರದೇಶದಲ್ಲಿ ಉಗ್ರ ಮಸೂದ್ ಅಜರ್ ಕಾಣಿಸಿಕೊಂಡಿದ್ದಾನೆ. ಕಳೆದ ಹಲವು ತಿಂಗಳುಗಳಿಂದ ಮಸೂದ್ ಅಜರ್ ಚಲನವಲನಗಳ ಬಗ್ಗೆ ನಿಗಾವಹಿಸಿದ್ದ ಭಾರತೀಯ ಗುಪ್ತಚರ ಇಲಾಖೆ ಮಹತ್ವದ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದೆ. ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರ ಕ್ಯಾಂಪ್‌ಗಳಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಗುಪ್ತಚರ ಇಲಾಖೆ ಮಹತ್ವದ ಸೂಚನೆ ನೀಡಿದೆ.
ಬಹಾವಲ್ಪುರ್‌ನಿಂದ ಕೆಲ ದೂರದಲ್ಲೇ ಅಜರ್ ಕಾರ್ಯಾಚರಣೆ
ಪೆಹಲ್ಗಾಂ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಆಪರೇಶನ್ ಸಿಂದೂರ್ ಮೂಲಕ ಪಾಕಿಸ್ತಾನ ದೇಶದೊಳಗೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದೊಳಗಿನ 9 ಉಗ್ರ ನೆಲೆಗಳನ್ನು ಭಾರತ ಧ್ವಂಸ ಮಾಡಿತ್ತು. ಈ ವೇಲೆ ಮಸೂದ್ ಅಜರ್ ಭದ್ರಕೋಟೆಯನ್ನು ಟಾರ್ಗೆಟ್ ಮಾಡಲಾಗಿತ್ತು. ಬಹಾವಲ್ಪುರ್ ಮಸೂದ್ ಅಜರ್ ಭದ್ರಕೋಟೆಯಾಗಿತ್ತು. ಆದರೆ ಪೆಹಲ್ಗಾಂ ದಾಳಿ ಬಳಿಕ ಮಸೂದ್ ಅಜರ್ ರಹಸ್ಯವಾಗಿ ತನ್ನ ನೆಲೆ ಬದಲಿಸಿಕೊಂಡಿದ್ದ. ಹೀಗಾಗಿ ಭಾರತ ಬಹಾವಲ್ಪುರ್ ಮೇಲಿನ ಏರ್ ಸ್ಟ್ರೈಕ್‌ನಲ್ಲಿ ಮಸೂದ್ ಅಜರ್ ಕುಟುಂಬ ಸದಸ್ಯರು ಮೃತಪಟ್ಟರೆ, ಮಸೂದ್ ಅಜರ್ ಉಳಿದುಕೊಂಡಿದ್ದ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇದೀಗ ಮಸೂದ್ ಅಜರ್ ಉಗ್ರರ ಕ್ಯಾಂಪ್ ಕಾರ್ನಿರ್ವಹಿಸುತ್ತಿದೆ ಅನ್ನೋದು ಗುಪ್ತಚರ ಮಾಹಿತಿಯಿಂದ ಸ್ಪಷ್ಟವಾಗಿದೆ.
ಸ್ಕರ್ದುವಿನಲ್ಲಿ ಅಜರ್ ಚಲನವಲ, ಭಾರತ ಕಟ್ಟೆಚ್ಚೆರ
ಸ್ಕರ್ದು ಗಿಲ್ಗಿಟ್ ಬಾಲ್ಟಿಸ್ತಾನ್‌ದ ಗ್ರಾಮವಾಗಿದೆ. ಸ್ಕರ್ದುವಿನಲ್ಲಿ ಮಸೂದ್ ಅಜರ್ ಪತ್ತೆಯಾಗಿದ್ದಾನೆ. ಸ್ಕರ್ದ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕೊನೆಯ ಗ್ರಾಮವಾಗಿದೆ. ಭಾರತದ ಕೊನೆಯ ಗ್ರಾಮ ತುರ್ತುಕ್. ತುರ್ತುಕ್ ಬಳಿಕ ಸಿಗುವುದೇ ಇದೇ ಸ್ಕರ್ದು. ಇಲ್ಲೀವರೆಗೆ ಮಸೂದ್ ಅಜರ್ ಕಾರ್ಯಾಚರಣೆ ಹಬ್ಬಿದೆ ಎಂದರೆ ಭಾರತಕ್ಕೆ ಅಪಾಯದ ಎಚ್ಚರಿಕೆ ನೀಡಿದಂತೆ. ಹೀಗಾಗಿ ಗಡಿಯಲ್ಲಿ ಭಾರತ ಹೈ ಅಲರ್ಟ್ ನೀಡಿದೆ.
ಸ್ಕರ್ದು ಹಾಗೂ ಸದ್ಪರಾ ಪ್ರದೇಶದಲ್ಲಿ ಅಜರ್ ಮಸೂದ್ ನಿಯಂತ್ರಣದಲ್ಲಿರುವ ಎರಡು ಮಸೀದಿ, ಮದರಸಾ ಹಾಗೂ ಹಲವು ಸರ್ಕಾರಿ -ಖಾಸಗಿ ಅತಿಥಿ ಗ್ರಹಗಳಿವೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಜರ್ ಮಸೂದ್ ಓಡಾಟ ಹೆಚ್ಚಾಗಿರುವ ಕಾರಣ ಮತ್ತೊಂದು ಸಂಚು ನೆಡೆಸುತ್ತಿರುವ ಸಾಧ್ಯತೆ ಹೆಚ್ಚಿದೆ.
