Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಟಾಲಿವುಡ್ ಹಾಸ್ಯನಟ ಫಿಶ್ ವೆಂಕಟ್ ವಿಧಿವಶ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಕಲಾವಿದ ಇನ್ನಿಲ್ಲ!

Spread the love

ಕಳೆದ ಕೆಲವು ದಿನಗಳಿಂದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಟಾಲಿವುಡ್‌ನ ಜನಪ್ರಿಯ ಹಾಸ್ಯನಟ ಫಿಶ್ ವೆಂಕಟ್ (ವೆಂಕಟ್ ರಾಜ್) ನಿಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫಿಶ್‌ ವೆಂಕಟ್‌ ಅವರ ಎರಡೂ ಮೂತ್ರಪಿಂಡಗಳು ಹಾನಿಗೊಳಗಾಗಿದ್ದವು.

ವೈದ್ಯರು ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಫಿಶ್ ವೆಂಕಟ್ ಕೊನೆಯುಸಿರೆಳೆದಿದ್ದಾರೆ. ಇದರಿಂದ ಫಿಶ್ ವೆಂಕಟ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದ ಲಕ್ಷಾಂತರ ಅಭಿಮಾನಿಗಳಿಗೆ ಆಘಾತವುಂಟಾಗಿದೆ. ಅವರ ನಿಧನಕ್ಕೆ ತೆಲುಗು ಚಿತ್ರರಂಗದಲ್ಲಿ ಕಂಬನಿ ಮಿಡಿದಿದೆ.

ಖ್ಯಾತ ನಟನ ಸಾವಿನಿಂದ ಟಾಲಿವುಡ್‌ ಚಿತ್ರರಂಗಕ್ಕೆ ದೊಡ್ಡ ಶಾಕ್‌ ಉಂಟಾಗಿದೆ. ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಈಗಾಗಲೇ ಫಿಶ್ ವೆಂಕಟ್‌ಗೆ ಸಹಾಯ ಮಾಡಿದ್ದರು. ಫಿಶ್ ವೆಂಕಟ್ ಚೇತರಿಸಿಕೊಳ್ಳಬೇಕೆಂದು ಅವರು ಬಯಸಿದ್ದರು. ಆದರೆ ನಟನ ಸಾವಿನ ನಂತರ ಚಿತ್ರರಂಗದ ಅನೇಕರು ದುಃಖದಲ್ಲಿ ಮುಳುಗಿದ್ದಾರೆ. ಎರಡೂ ಮೂತ್ರಪಿಂಡಗಳು ಸಹ ಹಾನಿಗೊಳಗಾಗಿದ್ದರಿಂದ ಫಿಶ್‌ ವೆಂಕಟ್‌ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಮೂತ್ರಪಿಂಡ ಕಸಿಗೆ ಸುಮಾರು 50 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ವೈದ್ಯರು ಹೇಳಿದ್ದರು. ಫಿಶ್ ವೆಂಕಟ್ ಅವರ ಕುಟುಂಬ ಸದಸ್ಯರು ಈ ನಿಟ್ಟಿನಲ್ಲಿ ಸಹಾಯ ಮಾಡುವಂತೆ ಚಿತ್ರರಂಗ ಮತ್ತು ಸರ್ಕಾರಕ್ಕೆ ಮನವಿ ಮಾಡಿದ್ದರು. ಫಿಶ್ ವೆಂಕಟ್ ಅವರು ಚೇತರಿಸಿಕೊಳ್ಳಲಿ ಎಂದು ಅನೇಕ ನಾಯಕರು ನೆರವು ಕೂಡ ನೀಡಿದ್ದರು. ಡಯಾಲಿಸಿಸ್‌ಗೆ ಒಳಗಾಗಿದ್ದ ಅವರನ್ನ ಆರೋಗ್ಯ ಸ್ಥಿತಿ ಹದಗೆಟ್ಟ ನಂತರ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಆದರೆ, ಫಿಶ್ ವೆಂಕಟ್ ಆರೋಗ್ಯ ಹದಗೆಟ್ಟ ಕಾರಣ ಅವರು ಕೊನೆಯುಸಿರೆಳೆದಿದ್ದಾರೆ.

ಫಿಶ್‌ ವೆಂಕಟ್‌ ನಿಧನಕ್ಕೆ ಅವರ ಆಪ್ತರು ಮತ್ತು ಅಭಿಮಾನಿಗಳು ತಮ್ಮ ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಫಿಶ್ ವೆಂಕಟ್ ಅವರ ಅಕಾಲಿಕ ಮರಣವು ಟಾಲಿವುಡ್‌ಗೆ ದೊಡ್ಡ ನಷ್ಟವಾಗಿದೆ ಎಂದು ಅನೇಕರು ಹೇಳಿದ್ದಾರೆ. ಫಿಶ್‌ ವೆಂಕಟ್‌ಗೆ ನಟ ಪ್ರಭಾಸ್ ಸಹಾಯ ಮಾಡಲು ಮುಂದೆ ಬಂದಿದ್ದಾರೆಂದು ಸುದ್ದಿಯಾಗಿತ್ತು. ಆದರೆ ಅವರ ಕುಟುಂಬಸ್ಥರು ಇದು ಸುಳ್ಳು ಸುದ್ದಿ ಎಂದು ತಳ್ಳಿಹಾಕಿದ್ದರು. 2000ರಲ್ಲಿ ʼಸಮ್ಮಕ್ಕ ಸಾರಕ್ಕʼ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಫಿಶ್ ವೆಂಕಟ್ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಕಾಮಿಡಿ ವಿಲನ್‌ ಎಲ್ಲಾ ಸ್ಟಾರ್ ಹೀರೋಗಳೊಂದಿಗೆ ತೆರೆ ಹಂಚಿಕೊಂಡಿದ್ದರು.

ಫಿಶ್ ವೆಂಕಟ್ ತಮ್ಮ ವಿಶಿಷ್ಟ ತೆಲಂಗಾಣ ಉಪಭಾಷೆ ಮತ್ತು ನಿಷ್ಪಾಪ ಹಾಸ್ಯ ಸಮಯಪ್ರಜ್ಞೆಗೆ ಹೆಸರುವಾಸಿಯಾಗಿದ್ದರು. ಇದು ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆಯನ್ನು ಗಳಿಸಿತು. ಹೈದರಾಬಾದ್‌ನಲ್ಲಿ ಜನಿಸಿದ ಅವರು 2000ರ ದಶಕದ ಆರಂಭದಲ್ಲಿ ʼಖುಷಿʼ ಚಿತ್ರದ ಮೂಲಕ ಉತ್ತಮ ಹೆಸರು ಮಾಡಿದ್ದರು. ಅವರು ಆದಿ, ಬನ್ನಿ, ಅದುರ್ಸ್, ಗಬ್ಬರ್ ಸಿಂಗ್ ಮತ್ತು ಡಿಜೆ ಟಿಲ್ಲು ಮುಂತಾದ ಹಲವಾರು ಚಿತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಹಾಸ್ಯ ಪಾತ್ರಗಳ ಜೊತೆಗೆ ಅವರು ವಿಲನ್ ಪಾತ್ರಗಳಲ್ಲಿನ ಅಭಿನಯದ ಮೂಲಕವೂ ಛಾಪು ಮೂಡಿಸಿದ್ದರು. ಫಿಶ್ ವೆಂಕಟ್ ಇತ್ತೀಚಿನ ಚಿತ್ರಗಳಾದ ಸ್ಲಮ್ ಡಾಗ್ ಹಸ್ಬೆಂಡ್, ನರಕಾಸುರ ಮತ್ತು ಕಾಫಿ ವಿತ್ ಎ ಕಿಲ್ಲರ್‌ನಲ್ಲಿ ನಟಿಸಿದ್ದರು.


Spread the love
Share:

administrator

Leave a Reply

Your email address will not be published. Required fields are marked *