Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಡಾಲಿ ಚಾಯ್‌ವಾಲಾ ಸಾಮ್ರಾಜ್ಯ: ₹43 ಲಕ್ಷಕ್ಕೆ ಫ್ರ್ಯಾಂಚೈಸಿ ಆಫರ್, ಇಂಟರ್‌ನೆಟ್ ಶಕ್ತಿಗೆ ಸಾಕ್ಷಿ!

Spread the love

ನೀವು ಸಾಮಾಜಿಕ ಜಾಲತಾಣದಲ್ಲಿ ಡಾಲಿ ಚಾಯ್‌ವಾಲಾ ಹೆಸರು ಕೇಳಿರುತ್ತೀರಿ. ಚಾಯ್ ಅಂಗಡಿ ಇಟ್ಟುಕೊಂಡು ದೇಶದಾದ್ಯಂತ ಫೇಮಸ್ ಆಗಿರುವ ವ್ಯಕ್ತಿ. ವಿಚಿತ್ರ ಶೈಲಿಯಲ್ಲಿ ಟೀ ಮಾಡಿಕೊಡುವ ಮೂಲಕ ಆತ ಮನೆ ಮಾತಾಗಿದ್ದ. ಅದ್ರಲ್ಲೂ ಬಹಳಷ್ಟು ಸೆಲೆಬ್ರೆಟಿಗಳ ಜೊತೆಯೂ ಕಾಣಿಸಿಕೊಂಡಿದ್ದ ಬಿಲ್‌ಗೇಟ್ಸ್‌ಗೆ ಟೀ ಮಾಡಿ ಕೊಡುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದ.

ಇದಾದ ಬಳಿಕ ಆತನ ಇನ್ಸ್‌ಸ್ಟಾಗ್ರಾಮ್ ಖಾತೆ ವೈರಲ್ ಆಗಿದ್ದಲ್ಲದೆ ದುಬೈ ಸೇರಿದಂತೆ ವಿದೇಶಗಲ್ಲಿ ಪ್ರವಾಸ ಮಾಡ ತೊಡಗಿದ್ದ. ಹೀಗಾಗಿ ಡಾಲಿ ಚಾಯ್‌ವಾಲ ರಾತ್ರೋರಾತ್ರಿ ಫೇಮಸ್ ಆಗಿದ್ದ. ಆತ ಹೋದಲ್ಲಿ ಬಂದಲ್ಲಿ ಜನ ಆತನ ಹಿಂದೆ ಬೀಳುತ್ತಿದ್ದರು ಹಾಗೆ ಆತನಿಗೆ ಒಂದಿಷ್ಟು ಅಭಿಮಾನಿಗಳು ಕೂಡ ಹುಟ್ಟಿಕೊಂಡರು.

ಬರುಬರುತ್ತಾ ಡಾಲಿ ಚಾಯ್‌ವಾಲಾ ಹೆಸರು ಫೇಮಸ್ ಆಗಿತ್ತು, ಆತನ ಟೀ ವ್ಯಾಪಾರ ನಂತರ ದೊಡ್ಡ ಬ್ಯುಸಿನೆಸ್ ಆಯಿತು. ಈಗ ಆತ ತನ್ನ ಟೀ ಮಾರಾಟ ಮಳಿಗೆಯನ್ನು ಫ್ರ್ಯಾಂಚೈಸಿ ಮೂಲಕ ನೀಡಲು ಮುಂದಾಗಿದ್ದಾನೆ. ಡಾಲಿ ಚಾಯ್‌ವಾಲಾ ಹೆಸರಿನಲ್ಲಿ ನೀವು ಸಹ ಈಗ ಮಳಿಗೆ ತೆರೆಯಬಹುದು. ಹೌದು ನೀವು ಕೂಡ ಡಾಲಿ ಹೆಸರಿನ ಅಂಗಡಿ ತೆರೆಯಲು ಹಣ ನೀಡಬೇಕಿದೆ.

ಹೌದು ಡಾಲಿ ಕಿ ಟ್ಯಾಪ್ರಿ ಆರಂಭಿಸುವುದಾಗಿ ಆತ ಹೇಳಿದ್ದು, ಈ ಕುರಿತಾಗಿ ತನ್ನ ಇನ್ಸ್‌ಸ್ಟಾಗ್ರಾಮ್‌ ಖಾತೆಯಲ್ಲಿ ಆತ ಹೇಳಿಕೊಂಡಿದ್ದಾನೆ. ಡಾಲಿ ಕಿ ಟ್ಯಾಪ್ರಿ ಆರಂಭಿಸಲು ಈಗಾಗಲೇ 1600 ಅರ್ಜಿಗಳು ಬಂದಿವೆಯಂತೆ. ಇದಕ್ಕಾಗಿ ನೀವು ಹಲವು ರೀತಿಯ ನಿಯಮಗಳ ಪಾಲಿಸಬೇಕಿದೆ.

ಡಾಲಿ ಚಾಯ್‌ವಾಲಾನ ‘ಡಾಲಿ ಕಿ ಟ್ಯಾಪ್ರಿ’ಗೆ ಎಷ್ಟು ಹಣ ನೀಡಬೇಕು?

ನೀವು ದೊಡ್ಡ ದೊಡ್ಡ ಕಂಪನಿಯ ಮಳಿಗೆ ತೆರೆಯಲು ಲಕ್ಷ ಲಕ್ಷ ರೂಪಾಯಿ ನೀಡಬೇಕಿದೆ. ಹಾಗೆ ಡಾಲಿಯ ಅತ್ಯುತ್ತಮ ಮಳಿಗೆ ಫ್ರಾಂಚೈಸ್ ಪಡೆಯಬೇಕಾದರೆ ಬರೋಬ್ಬರಿ 43 ಲಕ್ಷ ರೂಪಾಯಿ ನೀಡಬೇಕಿದೆ. ಹೌದು ಇಷ್ಟು ದುಬಾರಿ ಮೊತ್ತದಲ್ಲಿ ಡಾಲಿ ಫ್ರಾಂಚೈಸಿ ಖರೀದಿಸಬೇಕು. ಅದ್ರಲ್ಲೂ ನೀವು ತಳ್ಳುವ ಗಾಡಿಯಂತಹ ರಚನೆಯ ಕಾರ್ಟ್‌ ಪಡೆಯಲು ಸುಮಾರು 4.5 ಲಕ್ಷ ರೂಪಾಯಿಯಿಂದ 6 ಲಕ್ಷ ರೂಪಾಯಿ ನೀಡಬೇಕಿದೆ. ಇದರಲ್ಲಿ ಹೆಚ್ಚೇನು ಸಿಗುವುದಿಲ್ಲ. ಆದರೆ 43 ಲಕ್ಷ ರೂಪಾಯಿಗೆ ದೊಡ್ಡ ಮಳಿಗೆಯ ಸೌಲಭ್ಯ ಸಿಗಲಿದೆ. ಕಾರ್ಟ್ ಸ್ಟಾಲ್‌ಗೆ ₹4.5 ಲಕ್ಷದಿಂದ ₹6 ಲಕ್ಷ, ಸ್ಟೋರ್ ಮಾದರಿ ₹20 ಲಕ್ಷದಿಂದ ₹22 ಲಕ್ಷ , ಫ್ಲಾಗ್‌ಶಿಪ್ ಕೆಫೆ: ₹39 ಲಕ್ಷದಿಂದ ₹43 ಲಕ್ಷ ರೂಪಾಯಿ ಆಗಿರಲಿದೆ.

ಈ ಪೋಸ್ಟ್ ನೋಡಿ ಬಳಕೆದಾರರು ಶಾಕ್ ಆಗಿದ್ದಾರೆ. ದೊಡ್ಡ ದೊಡ್ಡ ಕಂಪನಿಗಳು ತಮ್ಮ ಬ್ರಾಂಡ್‌ಗಳ ಮೂಲಕ ಹೆಸರು ಮಾಡಿದ್ದರೂ ಕುಡ ಇಷ್ಟು ದುಬಾರಿ ಮೊತ್ತದ ಫ್ರಾಂಚೈಸಿ ತೆರೆಯಲು ಸಾಧ್ಯವಾಗದೆ ಪರದಾಡುತ್ತಿವೆ. ಆದ್ರೆ ಈ ಚಾಯ್‌ವಾಲಾ ತನ್ನ ಮಳಿಗೆಗೆ 43 ಲಕ್ಷ ರೂಪಾಯಿ ನಿಗಧಿ ಮಾಡಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಯಾವುದೇ ಐಐಟಿ ಡಿಗ್ರಿ ಇಲ್ಲದೆ ಒಬ್ಬ ಸಾಮಾನ್ಯ ಚಾಯ್‌ವಾಲಾ ಈಗ ಕೋಟಿ ಕೋಟಿಯ ಉದ್ಯಮ ಹುಟ್ಟುಹಾಕಲು ಮುಂದಾಗಿರುವುದು ನಿಜಕ್ಕೂ ಇಂಟರ್‌ನೆಟ್‌ನ ಶಕ್ತಿ ಎಷ್ಟಿದೆ ಎಂಬುದನ್ನು ಸಾಬೀತುಪಡಿಸುತ್ತಿದೆ.

ಯಾರು ಈ ಚಾಯ್‌ವಾಲಾ?

ನಾಗ್ಪುರದಲ್ಲಿ ಜನಿಸಿದ ಸುನಿಲ್ ಪಾಟೀಲ್, ಬಾಲ್ಯದಿಂದಲೇ ತಮ್ಮ ಕುಟುಂಬ ನಿರ್ವಹಣೆಗಾಗಿ ಚಹಾ ಅಂಗಡಿ ನಡೆಸುತ್ತಿದ್ದರು. ಬಡತನದ ಕಾರಣ ಶಾಲೆ ಮೆಟ್ಟಿಲು ಹತ್ತದ ಆತ ಚಹಾ ಮಾರುವುದನ್ನೇ ಜೀವನ ನಿರ್ವಹಣೆಯ ದಾರಿಯನ್ನಾಗಿಸಿದ್ದ. ಆದ್ರೆ ಎಲ್ಲರಂತೆ ಟೀ ಮಾಡುತ್ತಿರಲಿಲ್ಲ. ವಿಭಿನ್ನ ರೀತಿಯಲ್ಲಿ ಹಾವಿನಂತೆ ನಾಲಿಗೆ ಹೊರಹಾಕಿ ಹಾಲನ್ನು ಹಾಕುವುದು, ಗ್ರಾಹಕರಿಗೆ ಟೀ ಜೊತೆಗೆ ಏಲಕ್ಕಿ, ನಟ ರಜಿನಿಕಾಂತ್ ಸ್ಟೈಲ್‌ ಮಾದರಿಯಲ್ಲಿ ಸಿಗರೇಟ್ ಹಚ್ಚಿ ನೀಡುವುದು ಈ ರೀತಿಯ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದ.


Spread the love
Share:

administrator

Leave a Reply

Your email address will not be published. Required fields are marked *