ಸಿಂಧನೂರು: ಗುಜರಾತ್‌ಗೆ ಸಾಗಿಸುತ್ತಿದ್ದ ಪಡಿತರ ಅಕ್ಕಿ ಲಾರಿ ವಶಕ್ಕೆ, ಒಬ್ಬರ ಬಂಧನ!

ಸಿಂಧನೂರು: ಬಳ್ಳಾರಿಯಿಂದ ಪಡಿತರ ಅಕ್ಕಿಯ ಚೀಲಗಳನ್ನು ತುಂಬಿಕೊಂಡು ಗುಜರಾತ್‍ಗೆ ಸಾಗಾಣಿಕೆ ಮಾಡುತ್ತಿದ್ದ ಲಾರಿಯನ್ನು ಕೆಲ ಸಂಘಟನೆಗಳ ಮುಖಂಡರು ಹಿಡಿದು ಗ್ರಾಮೀಣ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಪೋತ್ನಾಳ ಪಟ್ಟಣದ ಗುರುರಾಜ ಎನ್ನುವವರು ಬಳ್ಳಾರಿಯಿಂದ ಅಕ್ಕಿಯನ್ನು ಲಾರಿಯ ಮೂಲಕ ಗುಜರಾತ್‍ಗೆ ಮಾರಾಟ ಮಾಡಲು ಬೆಳಿಗ್ಗೆ 6 ಗಂಟೆ ಸುಮಾರಿಗೆ ತೆರಳುತ್ತಿದ್ದರು.
ಈ ವೇಳೆ ಅನುಮಾನಗೊಂಡು ಕೆಲ ಸಂಘಟನೆಗಳ ಮುಖಂಡರು ತಾಲ್ಲೂಕಿನ ಶ್ರೀಪುರಂಜಂಕ್ಷನ್ ಬಳಿ ಲಾರಿಯನ್ನು ತಡೆದು 112ಗೆ ಕರೆ ಮಾಡಿ ವಿಷಯ ತಿಳಿಸಿದಾಗ ಸ್ಥಳಕ್ಕೆ ಬಂದ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಗ್ರಾಮೀಣ ಪೊಲೀಸ್ ಠಾಣೆಗೆ ತಂದರು.
ಆಹಾರ ಇಲಾಖೆಯ ನಿರೀಕ್ಷಕ ಹನುಮೇಶ ನಾಯಕ ಬಂದು ಪರಿಶೀಲಿಸಿದಾಗ ಪಡಿತರ ಅಕ್ಕಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಅವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ.
