Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

2030 ಗುರಿ 2025ರಲ್ಲೇ ಸಾಧಿಸಿದ ಭಾರತ – ನವೀಕರಣ ಶಕ್ತಿಯಲ್ಲಿ ಮೈಲಿಗಲ್ಲು

Spread the love

ನವದೆಹಲಿ: ಭಾರತದ ಒಟ್ಟಾರೆ ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಪೈಕಿ ಪಳೆಯುಳಿಕೆಯಲ್ಲದ ವೇಳೆ ಭಾರತವು 2030ಕ್ಕೆ ಈ ಗುರಿ ನಿಗದಿ ಮಾಡಿತ್ತು. ಆದರೆ, ಐದು ವರ್ಷ ಮುಂಚೆಯೇ ಗುರಿ ಮುಟ್ಟಲಾಗಿದೆ. ಈ ರಿನಿವಬಲ್ ಎನರ್ಜಿ ಮೈಲಿಗಲ್ಲಿನ ಬಗ್ಗೆ ಸರ್ಕಾರದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೇಂದ್ರ ನವೀಕರಣ ಇಂಧನ ಸಚಿವ ಪ್ರಹ್ಲಾದ್ ಜೋಷಿ ಅವರು ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಸ್ವಚ್ಛ ಹಾಗೂ ಪಳೆಯುಳಿಕೆಯಲ್ಲದ ಇಂಧನ ಮೂಲಗಳಿಂದ ಶೇ. 50 ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯಕ್ಕೆ ಬೆಳೆದಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಭಾರತದಲ್ಲಿ ಸ್ಥಾಪಿತವಾಗಿರುವ ಘಟಕಗಳಿಂದ ಒಟ್ಟಾರೆ 484.82 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು. ಈ ಪೈಕಿ ನವೀಕರಣ ಇಂಧನ ಅಥವಾ ಪಳೆಯುಳಿಕೆಯಲ್ಲದ ಇಂಧನ ಮೂಲಗಳಿಂದ ವಿದ್ಯುತ್ ತಯಾರಿಕೆ ಸಾಮರ್ಥ್ಯ 242.78 ಗಿ.ವ್ಯಾಟ್ ತಲುಪಿದೆ.

ಸೌರಶಕ್ತಿ, ವಾಯುಶಕ್ತಿ ಇತ್ಯಾದಿ ನವೀಕರಣ ಶಕ್ತಿಯ ಮೂಲಕ 184.62 ಗಿ.ವ್ಯಾಟ್ ವಿದ್ಯುತ್, ಜಲವಿದ್ಯುತ್ ಘಟಕಗಳ ಮೂಲಕ 49.38 ಗಿ.ವ್ಯಾಟ್, ಹಾಗೂ ಪರಮಾಣು ಮೂಲಕ 8.78 ಗಿ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯ ಭಾರತಕ್ಕೆ ಇದೆ.

‘ಇಡೀ ಜಗತ್ತು ಹವಾಮಾನ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿರುವಾಗ ಭಾರತವು ದಾರಿ ತೋರುತ್ತಿದೆ. 2030ರ ಗುರಿಗಿಂತ ಐದು ವರ್ಷ ಮುನ್ನವೇ ಶೇ. 50 ನಾನ್ ಫಾಸಿಲ್ ಫುಯಲ್ ಸಾಮರ್ಥ್ಯವನ್ನು ಸಾಧಿಸುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುವ ಸಂಗತಿ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಹಸಿರು ಪರಿವರ್ತನೆಯಲ್ಲಿದೆ’ ಎಂದು ಪ್ರಲ್ಹಾದ್ ಜೋಷಿ ಅಭಿಪ್ರಾಯಪಟ್ಟಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *