ನವವಿವಾಹಿತೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ – ವರದಕ್ಷಿಣೆ ಕಿರುಕುಳಕ್ಕೆ ಕೊಲೆ ಆರೋಪ!

ರಾಯಚೂರು : ಇಲ್ಲಿನ ಸಿಂಧನೂರಿನ ಸಿ.ಎಸ್ .ಎಫ್ ಕ್ಯಾಂಪ್ ನಲ್ಲಿ ಮಹಿಳೆಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಆತ್ಮತ್ಯೆಯಲ್ಲ ಕೊಲೆ ಎಂದು ಮಹಿಕೆಯರ ಕುಟುಂಬಸ್ಥರು ಆರೋಪಿಸಿದ್ದಾರೆ.ವರದಕ್ಷಿಣೆ ಕಿರುಕುಳದ ಹಿನ್ನೆಲೆ ಕೊಲೆಯಾಗಿದೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಮಾಬಮ್ಮ ಎಂಬ ಯುವತಿ ಹುಸೇನಬಾಷ ಎಂಬಾತನನ್ನು ವಿವಾಹವಾಗಿದ್ದರು.ಆದ್ರೆ ವಿವಾಹದ ಒಂದು ವರ್ಷದ ಬಳಿಕ ಪತಿ ಹಾಗೂ ಮನೆಯವರಿಂದ ವರದಕ್ಷಿಣೆ ತರುವಂತೆ ಕಿರುಕುಳ ಆರಂಭವಾಗಿತ್ತು ಎನ್ನಲಾಗಿದೆ.ತವರು ಮನೆಯಿಂದ ವರದಕ್ಷಿಣೆ ತರುವಂತೆ ಪತಿ ಪ್ರತಿನಿತ್ಯ ಪತ್ನಿ ಮಾಬಮ್ಮ ಜೊತೆ ಜಗಳವಾಡುತ್ತಿದ್ದ ಎಂದು ದೂಸಿನಲ್ಲಿ ಉಲ್ಲೇಖಿಸಲಾಗಿದೆ.
26 ವರ್ಷದ ಮಾಬಮ್ಮ ಅನುಮಾನಾಸ್ಪದವಾಗಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಂಬಂಧ ಮಹಿಳೆಯ ಕುಟುಂಬಸ್ಥರು ಪತಿ ಹುಸೇನಭಾಷ, ಮಾವ ನಬೀಸಾಬ್ ಹಾಗೂ ಮೈದುನ ಹುಸೇನ್ ಬಾಷಾ ವಿರುದ್ಧ ಬಳಗಾನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
