ಒಂದಾಗಿ ಬಾಳೋಣವೆಂದು… ಡಿವೋರ್ಸ್ ನಿಲ್ಲಿಸಿದ ದಂಪತಿ: ಲೋಕ್ ಅದಾಲತ್‌ನಲ್ಲಿ ಮತ್ತೆ ಹಾರ ಬದಲಾಯಿಸಿದ ಪ್ರೇಮ ಕಥೆ!

ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಅನ್ನೋದು ಮಾಮೂಲಿ ಆಗಿ ಹೋಗಿದೆ. ಕೆಲವೊಂದು ಡಿವೋರ್ಸ್ ಕೇಸ್ ಗಳು ಹೊಂದಾಣಿಕೆಯಾಗದೆ ದೂರ ದೂರ ಆದರೆ ಇನ್ನು ಕೆಲವೊಂದು ಜೋಡಿಗಳು ಯಾರದ್ದೋ ಮಧ್ಯಪ್ರವೇಶ, ಮೂರನೆಯವರ ಹೇಳಿಕೆಗಳಿಂದ ದೂರವಾಗುತ್ತಾರೆ. ದಾವಣಗೆರೆಯಲ್ಲೂ ಅಂಥದ್ದೇ ಘಟನೆ ನಡೆದಿದ್ದು, ಸದ್ಯ ಡಿವೋರ್ಸ್ ಪಡೆಯಲು ಬಂದ ಜೋಡಿ ಮತ್ತೆ ಹಾರ ಬದಲಾಯಿಸಿಕೊಂಡು ಒಂದಾಗಿದ್ದಾರೆ.

ಇದು ಒಂದಷ್ಟು ಜನರಿಗೆ ಸ್ಪೂರ್ತಿಯೇ ಸರಿ.
ಒಂದಲ್ಲ ಎರಡಲ್ಲ ದೂರವಾಗಿ ಬಿಡೋಣಾಅಂತ ಬಂದಿದಲ್ಲ ಐದಾರು ಜೋಡಿಯನ್ನ ಲೋಕ ಅದಾಲತ್ ನಲ್ಲಿ ಮತ್ತೆ ಒಟ್ಟುಗೂಡಿಸಿದ್ದಾರೆ. ಡಿವೋರ್ಸ್ ಆಸೆಯಿಂದ ಹಿಂದೆ ಸರಿಯುವಂತೆ ಮನವೊಲಿಸಿ, ಮತ್ತೆ ಒಟ್ಟಿಗೆ ಬದುಕುವಂತೆ ವಕೀಲರು ಮಾಡಿದ್ದಾರೆ. ವಕೀಲರ ಮಾತುಗಳನ್ನ ಅರ್ಥ ಮಾಡಿಕೊಂಡು, ಒಂದಾದ ಜೋಡಿಗಳು ಹೇಳಿದ್ದೇ, ಸಂಸಾರದಲ್ಲಿ ಮೂರನೆಯವರ ಮಾತಿಗೆ ಕಿವಿಕೊಡಬೇಡಿ ಎಂದು. ಇದು ಸತ್ಯ ಕೂಡ. ಅದೆಷ್ಟೋ ಜನರ ಬದುಕು ಬೇಡದವರ ಮಾತುಗಳನ್ನು ಕೇಳಿಸಿಕೊಂಡಿದ್ದ ಕಾರಣದಿಂದಾನೇ ಬಂದಿದೆ.
ಒಂದು ವರ್ಷದಿಂದ ದೂರ ಇದ್ವಿ, ಇನ್ಮೇಲೆ ಹಾಗೇ ಆಗಲ್ಲ. ಒಟ್ಟುಗೆ ಬಾಳ್ತೀವಿ. ಇಬ್ಬರ ನಡುವೆ ಬೇರೆಯವರಿಗೆ ಲಾಭ ಎಂಬಂತೆ ಆಗೋದು ಬೇಡ. ಬೇರೆಯವರನ್ನ ಹತ್ರಕ್ಕೆ ಸೇರಿಸಿಕೊಳ್ಳಬೇಡಿ. ಒಂದು ವರ್ಷ ದೂರ ಇದ್ದು ಎಷ್ಟು ಸಫರ್ ಆಗಿದ್ದೀನಿ ಅಂತ ನಂಗೆ ಗೊತ್ತು. ಆದರೆ ಇನ್ಮೇಲೆ ಚೆನ್ನಾಗಿರ್ತೀವಿ. ಡಿವೋರ್ಸ್ ತಗೋಳ್ಬೇಕು ಅಂತ ಇರಲಿಲ್ಲ. ಆದರೆ ನನ್ನ ಗಂಡ ಒಳ್ಳೆಯವರಾಗಬೇಕಿತ್ತು ಎಂದು ಡಿವೋರ್ಸ್ ತೆಗೆದುಕೊಳ್ಳಬೇಕು ಎಂದು ಬಂದ ಮಹಿಳೆ ಹೇಳಿದ್ದಾರೆ. ಒಟ್ಟಾರೆ ಲೋಕ್ ಅದಾಲತ್ ಮೂಲಕ ಕೆಲವರ ಸಂಸಾರ ಸರಿ ದಾರಿಗೆ ಬಂದಿರೋದು ಖುಷಿಯ ವಿಚಾರವೇ ಅಲ್ವಾ.
