20 ದಿನದ ಮಗುವನ್ನು ಮಾರಾಟ ಮಾಡಿ ಸಾಲತೀರಿಸಲು ಯತ್ನಿಸಿದ ತಂದೆ

ದಾಂಡೇಲಿ : ಬೆಚ್ಚಿ ಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಸಾಲ ತೀರಿಸಲು ತಂದೆಯೇ 20 ದಿನದ ಮಗುವನ್ನು 3 ಲಕ್ಷ ರೂ.ಗೆ ಮಾರಾಟ ಮಾಡಿರುವ ಘಟನೆ ದಾಂಡೇಲಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆ ಆನಗೋಳದ ನೂರ್ ಅಹಮದ್ ಅಬ್ದುಲ್ ಮಜೀದ್ ನಾಯ್ಕ, ಎಸ್.ವಿ.ರೋಡ್ನ ಚಾಲಕ ಕಿಶನ್ ಶ್ರೀಕಾಂತ ಐರೇಕರ್ ಬಂಧಿತರು.
ಹಳೇ ದಾಂಡೇಲಿ ಸಾಮಿಲ್ ರೋಡ್ ಮಾಹಿನ್ ವಸೀಂ ಎಂಬಾಕೆ ಜೂ.17 ರಂದು ಗಂಡು ಮಗುವಿಗೆ ದಾಂಡೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದರು. ಆದರೆ, ಮಗುವನ್ನು ಜು.8ರಂದು ಆನಗೋಳದ ನೂರ್ ಅಹಮದ್ ಎಂಬುವರಿಗೆ 3 ಲಕ್ಷ ರೂ.ಗೆ ಮಾರಾಟ ಮಾಡಿದ್ದರು ಎನ್ನಲಾಗಿದೆ.

ಸದ್ಯ ಮಗುವನ್ನು ಶಿರಸಿಯ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಲಾಗಿದೆ ದಂಪತಿ ನಾಪತ್ತೆಯಾಗಿದ್ದಾರೆ. ಕಾನೂನಿಗೆ ವಿರುದ್ಧವಾಗಿ ಮಗು ಖರೀದಿಸಿದ ವ್ಯಕ್ತಿ ಹಾಗೂ ಅದಕ್ಕೆ ಸಹಕರಿಸಿದ ಚಾಲಕನನ್ನು ದಾಂಡೇಲಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
