ಬಾಂಗ್ಲಾ ಪ್ರೇಯಸಿಗೆ ಅಕ್ರಮವಾಗಿ ಗಡಿ ದಾಟಲು ನೆರವು: ಬೆಂಗಳೂರಿನಲ್ಲಿ ಭೇಟಿಯಾದ ಜೋಡಿ ತ್ರಿಪುರಾದಲ್ಲಿ ಬಂಧನ!

ತ್ರಿಪುರಾ: ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ತಾನು ಪ್ರೀತಿಸುತ್ತಿದ್ದ ಬಾಂಗ್ಲಾದೇಶದ ಮಹಿಳೆಗೆ ತ್ರಿಪುರಾಕ್ಕೆ ಗಡಿಪಾರು ಮಾಡಲು ಸಹಾಯ ಮಾಡಿದ ಆರೋಪದ ಮೇಲೆ ಕರ್ನಾಟಕದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ಬಾಂಗ್ಲಾದೇಶದ ಬೊಗ್ರಾ ಜಿಲ್ಲೆಯ ನಿವಾಸಿಯಾಗಿರುವ ಈ ಮಹಿಳೆ ವೀಸಾ ಇಲ್ಲದೆ ತ್ರಿಪುರಾವನ್ನ ದಾಟಿದ್ದಾರೆ.
ಸುಳಿವು ದೊರೆತ ತಕ್ಷಣ ಗಡಿ ಭದ್ರತಾ ಪಡೆ ಕಾರ್ಯಾಚರಣೆ ನಡೆಸಿದೆ. ಬಾಂಗ್ಲಾ ಮಹಿಳೆ ಮತ್ತು ಯಾದವ್ರನ್ನ ಬಂಧಿಸಿ ತ್ರಿಪುರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಪ್ರೇಮಿಗಳು ಅಗರ್ತಲಾದಿಂದ ಬೆಂಗಳೂರಿಗೆ ಪ್ರಯಾಣಿಸಲು ಪ್ಲಾನ್ ಮಾಡಿಕೊಂಡಿದ್ದ ಬಗ್ಗೆ ಪೊಲೀಸ್ ವಿಚಾರಣೆ ವೇಳೆ ತಿಳಿದು ಬಂದಿದೆ.
35 ವರ್ಷದ ಮಹಿಳೆ ಮುಂಬೈನ ಬ್ಯೂಟಿ ಪಾರ್ಲರ್‌ನಲ್ಲಿ ಮತ್ತು ನಂತರ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಬಗ್ಗೆ ಗೊತ್ತಾಗಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುವಾಗ ಬೀದರ್‌ನ ದತ್ತಾ ಯಾದವ್ನನ್ನ ಭೇಟಿಯಾಗಿದ್ದು, ಇಬ್ಬರ ಮಧ್ಯೆ ಪ್ರೀತಿ ಮೊಳಕೆಯೊಡೆದಿತ್ತು. ಇತ್ತೀಚೆಗೆ ಭಾರತದಿಂದ ಬಾಂಗ್ಲಾದೇಶಕ್ಕೆ ಆಕೆ ಹಿಂತಿರುಗಿದ್ದಳು. ಆದರೆ ಗುತ್ತಿಗೆದಾರನಾಗಿದ್ದ ದತ್ತಾ ಯಾದವ್, ಯುವತಿಯನ್ನ ಹಿಂತಿರುಗಿ ಬರುವಂತೆ ಹೇಳಿತ್ತಿದ್ದನು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಂಗ್ಲಾದೇಶದ ಬೊಗ್ರಾ ಜಿಲ್ಲೆಯ ನಿವಾಸಿಯಾಗಿರುವ ಈ ಮಹಿಳೆ ಬುಧವಾರ ವೀಸಾ ಅಥವಾ ಪಾಸ್‌ಪೋರ್ಟ್ ಇಲ್ಲದೆ ತ್ರಿಪುರಾವನ್ನು ದಾಟಿದ್ದಾರೆ. ಸುಳಿವು ದೊರೆತ ತಕ್ಷಣ ಕಾರ್ಯಾಚರಣೆ ನಡೆಸಿದ ಗಡಿ ಭದ್ರತಾ ಪಡೆ, ಮರುದಿನ ತ್ರಿಪುರಾದ ಸೆಪಹಿಜಲಾ ಜಿಲ್ಲೆಯಲ್ಲಿ ಆಕೆ ಮತ್ತು ಯಾದವ್ ಅವರನ್ನು ಬಂಧಿಸಿ ತ್ರಿಪುರ ಪೊಲೀಸರಿಗೆ ಹಸ್ತಾಂತರಿಸಿತು. ದಂಪತಿಗಳು ಅಗರ್ತಲಾದಿಂದ ಬೆಂಗಳೂರಿಗೆ ಪ್ರಯಾಣಿಸಲು ಯೋಜಿಸುತ್ತಿದ್ದರು. ಇದೀಗ ಪೊಲೀಸರು ಇಬ್ಬರನ್ನೂ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
‘ಮಹಿಳೆಗೆ ಅಕ್ರಮವಾಗಿ ಗಡಿ ದಾಟಲು ಸಹಾಯ ಮಾಡಿದ ಏಜೆಂಟರು ಯಾರು ಎಂದು ನಾವು ತನಿಖೆ ನಡೆಸುತ್ತಿದ್ದೇವೆ. ಈ ಘಟನೆಯು ಮಾನವ ಕಳ್ಳಸಾಗಣೆ ಜಾಲದ ಭಾಗವೇ ಎಂಬುದನ್ನು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ. ಅಗತ್ಯವಿದ್ದರೆ, ನಾವು ನಂತರ ಅವರ ಪೊಲೀಸ್ ಕಸ್ಟಡಿಯನ್ನು ಕೋರಬಹುದು’ ಎಂದು ತ್ರಿಪುರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (
