ಬೆಳಗಾವಿಯಲ್ಲಿ ಭೀಕರ ಅಪಘಾತ: ಜನಪ್ರಿಯ ಜನಪದ ಗಾಯಕ ಮಾರುತಿ ಲಟ್ಟೆ ದುರ್ಮರಣ

ಬೆಳಗಾವಿ: ಬೈಕ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಈ ಭೀಕರ ಅಪಘಾತದಲ್ಲಿ ಕನ್ನಡದ ಯುವ ಖ್ಯಾತ ಜನಪದ ಗಾಯಕ ಮಾರುತಿ ಲಟ್ಟೆ ದಾರುಣವಾಗಿ ಸಾವಿಗೀಡಾಗಿದ್ದಾರೆ. ಗಾಯಕ ಮಾರುತಿ ಲಟ್ಟೆ ಜನಪದ ಸೊಗಡಿನ ಗಾಯನದ ಮೂಲಕ ಅತ್ಯಂತ ಖ್ಯಾತಿ ಪಡೆದಿದ್ದರು.

ಕನ್ನಡದ ಜಾನಪದ ಹಾಡು ‘ಬಾ ಹುಡುಗಿ ಪಂಚಮಿಗೆ’ ಎಂಬ ಹಾಡು ಮಾರುತಿ ಲಟ್ಟೆಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತ್ತು. ಆದ್ರೆ ದುರದೃಷ್ಟವಶಾತ್ ತಮ್ಮ 21ನೇ ವಯಸಿಗೆ ಮಾರುತಿ ಲಟ್ಟೆ ಇಹಲೋಕ ತ್ಯಜಿಸಿದ್ದಾರೆ.ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೂದಿಹಾಳ ಗ್ರಾಮದ ಸಮೀಪ ಈ ಅಪಘಾತ ಸಂಭವಿಸಿದೆ.
ಈ ಅಪಘಾತದಲ್ಲಿ ಬೈಕ್ ಗೆ ಕಾರು ಎದುರಿನಿಂದ ವೇಗವಾಗಿ ಗುದ್ದಿದ್ದು ಗಾಯಕ ಮಾರುತಿ ಲಟ್ಟೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.ಆದ್ರೆ ಮಾರುತಿ ಪೋಷಕರು ಇದು ಅಪಘಾತವಲ್ಲ..ಕೊಲೆ ಎಂಬ ಶಂಕೆ ವ್ಯಕ್ತಪಡಿಸಿದ್ದು ರಾಯಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ತಮ್ಮ ನೆಚ್ಚಿನ ಗಾಯಕನ ಅಕಾಲಿಕ ನಿಧನಕ್ಕೆ ಅಭಿಮಾನಿಗಳು ದುಃಖಿತರಾಗಿದ್ದಾರೆ.
