ಮಂಗಳೂರಿನ ಕೆ.ಎಸ್. ರಿತುಪರ್ಣಗೆ ರೋಲ್ಸ್ ರಾಯ್ಸ್‌ನಲ್ಲಿ ₹72.3 ಲಕ್ಷ ವೇತನದ ಉದ್ಯೋಗ!

ಮಂಗಳೂರು: ವಯಸ್ಸು ಕೇವಲ 20. ತನ್ನ ಇಷ್ಟದ ಕಂಪೆನಿಯಲ್ಲಿ ಇಂಟರ್ನ್ಶಿಪ್ ಮಾಡಬೇಕೆಂದು 8 ತಿಂಗಳು ಪ್ರಯತ್ನಿಸಿದ್ದರೂ ಸಾಧ್ಯವಾಗಲಿಲ್ಲ. ವಿಚಿತ್ರವೆಂದರೆ ಕೆಲವೇ ತಿಂಗಳುಗಳಲ್ಲಿ ಅದೇ ಕಂಪೆನಿಯಲ್ಲಿ ಉದ್ಯೋಗವೇ ಸಿಕ್ಕಿತು !

ಹಾಗಾಗಿ ವ್ಯಾಸನಗರದ ಕೆ. ಎಸ್. ರಿತುಪರ್ಣ ಈಗ ಎಲ್ಲರ ಗಮನ ಸೆಳೆದಿದ್ದಾಳೆ.
ಪ್ರಸ್ತುತ ಸಹ್ಯಾದ್ರಿ ಕಾಲೇಜಿನಲ್ಲಿ ಎಂಜಿನಿಯರಿಂಗ್ 6ನೇ ಸೆಮಿಸ್ಟರ್ ಓದುತ್ತಿರುವ ಈಕೆ, ಅಮೆರಿಕದ ರೋಲ್ಸ್ ರೋಯ್ಸ ಕಂಪೆನಿಯಲ್ಲಿ ಇಂಟರ್ನ್ಶಿಪ್ ಮಾಡಬೇಕೆಂದಿದ್ದಳು. ಅದು ಸಾಧ್ಯವಾಗದಿದದರೂ ಈಗ ಅದೇ ಕಂಪೆನಿಯಲ್ಲಿ ವಾರ್ಷಿಕ 72.3 ಲಕ್ಷ ರೂ. ವೇತನದ ಉದ್ಯೋಗ ತನ್ನದಾಗಿಸಿಕೊಂಡಿದ್ದಾಳೆ. ಈಕೆ ಕೆಮಿಸ್ಟ್ ಆಗಿರುವ ಸುರೇಶ್ ಹಾಗೂ ಗೀತಾ ದಂಪತಿಯ ಪುತ್ರಿ.
ಈಗ ರಾತ್ರಿ 12ರಿಂದ ಬೆಳಗ್ಗೆ 6 ರವರೆಗೆ ತರಬೇತಿ ಪಡೆಯುತ್ತಿದ್ದು, ಹಗಲು ಸಮಯದಲ್ಲಿ ತರಗತಿಗೆ ಹಾಜರಾಗುತ್ತಾರೆ. 7ನೇ ಸೆಮಿಸ್ಟರ್ ಪೂರ್ಣಗೊಂಡ ಬಳಿಕ ಟೆಕ್ಸಾಸ್‌ಗೆ ತೆರಳಿ ಉದ್ಯೋಗಕ್ಕೆ ಸೇರುವರು.
ಮೆಡಿಕಲ್ ಓದಿ ವೈದ್ಯರಾಗಿ ಸೇವೆ ಮಾಡಬೇಕು ಎಂಬ ಗುರಿ ಈಕೆಯದ್ದಾಗಿತ್ತು. ಆದರೆ ನೀಟ್‌ನಲ್ಲಿ ನಿರೀಕ್ಷಿತ ಅಂಕ ಸಿಗದೇ ನಿರಾಸೆಗೊಂಡಿದ್ದಳು. ಪೋಷಕರ ಪ್ರೋತ್ಸಾಹದ ಬಳಿಕ 2022ರಲ್ಲಿ ರೊಬೋಟಿಕ್ ಆಯಂಡ್ ಆಟೋಮೇಷನ್ ಕೋರ್ಸ್‌ಗೆ ಸೇರಿದಳು. ಒಲ್ಲದ ಮನಸ್ಸಿನಿಂದ ಕಾಲೇಜಿಗೆ ಹೋದ ರಿತುಪರ್ಣಳ ಬದುಕನ್ನು ಅದು ಈಗ ಬದಲಾಯಿಸಿದೆ !
ಪ್ರಥಮ ವರ್ಷದಲ್ಲೇ ಚಿನ್ನದ ಪದಕ
ಪ್ರಥಮ ವರ್ಷದಲ್ಲಿದ್ದಾಗಲೇ ಆವಿಷ್ಕಾರದಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ಗೋವಾದಲ್ಲಿ ನಡೆದ ಅಂತಾ ರಾಷ್ಟ್ರೀಯ ಮಟ್ಟದ ಇನ್ನೋವೇಶನ್ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಳು. 15 ರಾಷ್ಟ್ರಗಳ ಪ್ರತಿನಿಧಿಗಳು ಭಾಗ ವಹಿದ್ದ ಸಮ್ಮೇಳನದಲ್ಲಿ ಹಾರ್ವೆಸ್ಟಿಂಗ್ ಆಯಂಡ್ ಸ್ಪ್ರೆàಯರ್
ಎಂಬ ವಿಷಯದ ಆವಿಷ್ಕಾರಕ್ಕೆ ಚಿನ್ನದ ಪದಕ ಪಡೆದಳು. ಮಹಾನಗರ ಪಾಲಿಕೆಯ ಕಸ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಆಯಪ್ ಅಭಿವೃದ್ಧಿ ಮಾಡುತ್ತಿದ್ದು, ಹಿಂದಿನ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
8 ತಿಂಗಳ ಸಂದರ್ಶನ!
ರೋಲ್ಸ್ ರಾಯ್ಸ ಕಂಪೆನಿಯಲ್ಲಿ ಒಂದಲ್ಲ ಎರಡಲ್ಲ, ಬರೋಬ್ಬರಿ 8 ತಿಂಗಳ ಕಾಲ ರಿತುಪರ್ಣ ತಾಳ್ಮೆಯಿಂದ ಸಂದರ್ಶನ ನೀಡಿದ್ದಾರೆ. ಕಂಪೆನಿಯ ವಿವಿಧ ಟಾಸ್ಕ್ಗಳನ್ನು ಯಶಸ್ವಿಯಾಗಿ ನಿಭಾಯಿಸಿದಳು. ಕೇವಲ ಸಂದರ್ಶನಕ್ಕಾಗಿ 8 ತಿಂಗಳು ವ್ಯಯಿಸಿದ ಅವರ ತಾಳ್ಮೆ ಹಾಗೂ ಪರಿಶ್ರಮಕ್ಕೆ ಇಂದು ಫಲ ಸಿಕ್ಕಿದೆ.
ಕಷ್ಟ ಪಟ್ಟು ಓದಿದ ಫಲವಾಗಿ ರೋಲ್ಸ್ ರಾಯ್ಸ ಕಂಪೆನಿಯಲ್ಲಿ ಉದ್ಯೋಗ ಸಿಕ್ಕಿದೆ. ಅವಳ ಸಾಧನೆ ಬಗ್ಗೆ ಹೆಮ್ಮೆ ಇದೆ. ಸರಕಾರಿ ಬಸ್‌ನಲ್ಲೇ ಕಾಲೇಜಿಗೆ ತೆರಳುತ್ತಿದ್ದಾಳೆ. ಇತರ ವಿದ್ಯಾರ್ಥಿಗಳು ಪರಿಶ್ರಮ ವಹಿಸಿದ್ದಲ್ಲಿ ಯಾವುದನ್ನೂ ಮಾಡಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ. -ಸುರೇಶ್, ತಂದೆ
ತಂದೆ ತಾಯಿ, ಕುಟುಂಬಸ್ಥರು, ಕಾಲೇಜು ಶಿಕ್ಷಕರು, ಸ್ನೇಹಿತರ ಪ್ರೋತ್ಸಾಹದಿಂದ ಸಾಧನೆ ಸಾಧ್ಯವಾಗಿದೆ. ರೋಲ್ಸ್ ರಾಯ್ಸ ಕಂಪೆನಿಗೆ ಆಯ್ಕೆಯಾಗುತ್ತೇನೆ ಎಂಬ ಧೈರ್ಯವಿರಲಿಲ್ಲ. ಕಾಲೇಜಿನಲ್ಲಿ ನಮ್ಮದು ಎರಡನೇ ಬ್ಯಾಚ್. ಕಠಿನ ಪರಿಶ್ರಮದಿಂದ ಕಂಪೆನಿಯಲ್ಲಿ ಉದ್ಯೋಗ ಸಿಕ್ಕಿದೆ. ಪ್ರಸ್ತುತ ನಿದ್ದೆ ಕಡಿಮೆ, ಕೆಲಸ ಓದು ಹೆಚ್ಚು.
ರಿತುಪರ್ಣ, ರೋಲ್ಸ್ ರಾಯ್ಸ ಉದ್ಯೋಗಿ
