ಮೈಸೂರಿನಲ್ಲಿ ಹಳೆ ದ್ವೇಷಕ್ಕೆ ಮಾರಣಾಂತಿಕ ಹಲ್ಲೆ: ಸ್ನೇಹಿತನ ಮೇಲೆ ಕತ್ತಿ ಝಳಪಿಸಿದ್ದೇಕೆ?

ಮೈಸೂರು: ಗುರುವಾರ ( ಜುಲೈ 10 ) ರಾತ್ರಿ ನಗರದ ಹೃದಯ ಭಾಗದ ರಾಮಾನುಜ ರಸ್ತೆಯಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ಝಳಪಿಸಿದ್ದಕ್ಕೆ ಹಲವು ಕಾರಣಗಳಿವೆ. ಹಳೆಯ ದ್ವೇಷ, ಅಪ್ರಾಪ್ತಿಯ ತಲೆಕೆಡಿಸಿ ಪ್ರೀತಿಯ ನಾಟಕವಾಡಿ ಆಕೆಯನ್ನು ತನ್ನೊಂದಿಗೆ ಕರೆದೊಯ್ದಿದ್ದ ವಿವಾಹಿತ ಸ್ನೇಹಿತನನ್ನು ಮುಗಿಸಿಬಿಡಬೇಕು ಎಂಬ ಸಿಟ್ಟು ನಡುರಸ್ತೆಯಲ್ಲಿ ಕತ್ತಿಯಿಂದ ಮೂವರ ಮಾರಣಾಂತಿಕ ಹಲ್ಲೆ ನಡೆಸಲು ಕಾರಣವಾಗಿದೆ.

ಬಾಲಕಿಯನ್ನು ಪ್ರೀತಿಯ ನೆಪದಲ್ಲಿ ಕರೆದೊಯ್ದಿದ್ದ ಸ್ನೇಹಿತನನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕು ಎಂದು ಬಾಲಕಿಯ ಸಂಬಂಧಿಕರು ಎಸಗಿರುವ ದುಷ್ಕೃತ್ಯ ಇದಾಗಿದ್ದು, ಸದ್ಯ ಮಾರಕಾಸ್ತ್ರಗಳಿಂದ ಮೂವರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳ ಬಂಧನಕ್ಕಾಗಿ ಕೃಷ್ಣರಾಜ ಠಾಣೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ವಿಪರ್ಯಾಸವೆಂದರೆ ಇದು ಹಿಂದೆ ಸ್ನೇಹಿತರಾಗಿದ್ದವರ ನಡುವೆ ನಡೆದಿರುವ ಕಲಹ, ತಾಲ್ಲೂಕಿನ ಮೆಲ್ಲಹಳ್ಳಿ ಗ್ರಾಮದನಿವಾಸಿರಾಮಣ್ಣ ಹಾಗೂನಗರದ ಕೈಲಾಸಪುರಂ ನಿವಾಸಿ ರಾಜಣ್ಣ ನಡುವೆ ಉಂಟಾಗಿದ್ದ ಕಲಹವೇ ಕೊಲೆಯತ್ನಕ್ಕೆ ಮೂಲ ಕಾರಣವಾಗಿದೆ.
ರಾಮಣ್ಣ ಹಾಗೂ ರಾಜಣ್ಣ ಸ್ನೇಹಿತರಾಗಿದ್ದರು. ಇಬ್ಬರೂ ವಿವಾಹಿತರು. ರಾಮಣ್ಣ ಅವರಿಗೆ ಓರ್ವ ಮಗಳಿ ದ್ದಾಳೆ. ರಾಮಣ್ಣ ಅವರ ಮನೆಗೆ ಆಗಾಗ್ಗೆ ಹೋಗಿಬರುತ್ತಿದ್ದ ರಾಜಣ್ಣನ ವಕ್ರದೃಷ್ಟಿ ರಾಮಣ್ಣನ ಮಗಳ ಮೇಲೆ ಬಿದ್ದಿದೆ. ಆ ಸಂದರ್ಭದಲ್ಲಿ ಆ ಬಾಲಕಿಯ ವಯಸ್ಸು 16 ವರ್ಷ.
ಈ ವೇಳೆ ಪ್ರೀತಿಯ ನಾಟಕವಾಡಿದ್ದ ರಾಜಣ್ಣ ಬಾಲಕಿ ಯನ್ನು ಪುಸಲಾಯಿಸಿ ತನ್ನೊಂದಿಗೆ ಕರೆದೊಯ್ದಿದ್ದ. ಈ ಸಂಬಂಧ ವಿದ್ಯಾರಣ್ಯಪುರಂ ಠಾಣೆಯಲ್ಲಿ ಬಾಲಕಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ನಂತರ ರಾಜಣ್ಣ ಹಾಗೂ ಬಾಲಕಿ ಯನ್ನು ಪತ್ತೆ ಹಚ್ಚಿ ಕರೆತಂದಿದ್ದ ಪೊಲೀಸರು ಆತನ ವಿರುದ್ಧ ಪೋಕ್ಸ್ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದರು.
