ರಾಜ್ಯದಲ್ಲಿ ಮುಂದುವರಿದ ಹೃದಯಾಘಾತ ಸರಣಿ ಸಾವು: ಇಂದು ಮತ್ತೆ ಮೂವರು ಬಲಿ!

ಕಲಬುರ್ಗಿ/ಗದಗ : ರಾಜ್ಯದಲ್ಲಿ ಹೃದಯಾಘಾತ ಸರಣಿ ಸಾವುಗಳು ಮುಂದುವರೆದಿದ್ದು ಇದೀಗ ಇಂದು ರಾಜ್ಯದಲ್ಲಿ ಮತ್ತೆ ಮೂವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕಲ್ಬುರ್ಗಿಯಲ್ಲಿ ಓರ್ವ ವ್ಯಕ್ತಿ ಹಾಗೂ ಗದಗ್ ಮತ್ತು ಬೀದರ್ ನಲ್ಲಿ ಓರ್ವ ಉಪನ್ಯಾಸಕ ಉಪನ್ಯಾಸಕಿ ಹೃದಯಘಾತಕ್ಕೆ ಬಲಿಯಾಗಿದ್ದಾರೆ.

ಹೌದು ಕಲ್ಬುರ್ಗಿಯಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಕಲ್ಬುರ್ಗಿಯಲ್ಲಿ 38 ವರ್ಷದ ವ್ಯಕ್ತಿಗೆ ಹೃದಯಘಾತ ಸಂಭವಿಸಿದೆ. ಸೇಡಂ ಪಟ್ಟಣದ ನಿವಾಸಿ ಶ್ರೀನಾಥ್ ಹೃದಯಘಾತದಿಂದ ಸಾವನಪ್ಪಿದ್ದಾರೆ. ಇವರು ಹೈದರಾಬಾದ್ನ ಖಾಸಗಿ ಕಂಪನಿಯಲ್ಲಿ ಶ್ರೀನಾಥ್ ಕೆಲಸ ಮಾಡುತ್ತಿದ್ದರು. ಕಳೆದ ವಾರ ಅವರಿಗೆ ಹೃದಯಘಾತ ಆಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶ್ರೀನಾಥ್ ಶ್ರವಣಪ್ಪಿದ್ದಾರೆ.
ಇನ್ನು ಗದಗದಲ್ಲಿ 49 ವರ್ಷದ ಉಪನ್ಯಾಸಕಿ ಒಬ್ಬರು ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಗದಗ ನಿವಾಸಿ ಪ್ರಭಾ ಕಲ್ಮಠ ಅವರು ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪಿದ್ದಾರೆ. ಸೊರಟೂರಿನ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಾಲೇಜಿಗೆ ಹೋಗಲು ರೆಡಿಯಾಗುತ್ತಿದ್ದಾಗಲೇ ಹೃದಯಾಘಾರದಿಂದ ಪ್ರಭಾ ಕಲ್ಮಠ ಹೃದಯಾಘಾತದಿಂದ ಸಾವನಪ್ಪಿದ್ದಾರೆ. ತಕ್ಷಣ ಪತಿ ಅಕ್ಕ ಪಕ್ಕದವರ ಸಹಾಯದಿಂದ ಆಸ್ಪತ್ರೆಗೆ ಕರೆದೋಯ್ದರು. ECG ಮಾಡುವ ಸಂದರ್ಭದಲ್ಲಿ ಪ್ರಭಾ ಅವರು ಹೃದಯಘಾತಕ್ಕೆ ಬಲಿಯಾಗಿದ್ದಾರೆ.
ಇನ್ನು ಬೀದರ್ ನಲ್ಲಿ ಕೂಡ ಅತಿಥಿ ಉಪನ್ಯಾಸಕ ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಹಲಸೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಡಾ. ರವಿಕುಮಾರ್ ಸಾವನ್ನಪ್ಪಿದ್ದು ಬೀದರ್ ಜಿಲ್ಲೆಯ ಹೊಸೂರಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇವರು ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಬಸವಕಲ್ಯಾಣದಿಂದ ಹುಲಸೂರಿಗೆ ಬರುವಾಗ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ರವಿಕುಮಾರ್ ಅವರನ್ನು ಬಸವಕಲ್ಯಾಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ರವಿಕುಮಾರ್ ಇದೀಗ ಸಾವನ್ನಪ್ಪಿದ್ದಾರೆ.
