Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

6 ವರ್ಷದ ಬಾಲಕಿಯೊಂದಿಗೆ 45 ವರ್ಷದ ವ್ಯಕ್ತಿಯ ಮೂರನೇ ಮದುವೆ: ಅಫ್ಘಾನಿಸ್ತಾನದಲ್ಲಿ ಬಾಲ್ಯವಿವಾಹ ಪ್ರಕರಣದಲ್ಲಿ ತಾಲಿಬಾನ್ ಮಧ್ಯಪ್ರವೇಶ!

Spread the love

ಪ್ರತಿಯೊಬ್ಬ ಪೋಷಕರು ತಮ್ಮ ಮಗಳು ಚೆನ್ನಾಗಿ ಓದಬೇಕು, ಒಳ್ಳೆಯ ಉದ್ಯೋಗಕ್ಕೆ ಸೇರಬೇಕು, ಒಳ್ಳೆಯ ಮನೆ ಮನೆತನಕ್ಕೆ ಮಗಳನ್ನು ನೀಡಿ ಮದುವೆ ಮಾಡಿಕೊಡಬೇಕು ಎನ್ನುವ ಆಸೆ ಇಟ್ಟುಕೊಂಡಿರುತ್ತಾರೆ. ಮಗಳ ಮದುವೆಯಲ್ಲಿ ಕಿಂಚಿತ್ತೂ ವ್ಯತ್ಯಾಸ ಆಗಬಾರದು ಎಂದು ಹೆತ್ತವರು ಬಹಳಷ್ಟು ಶ್ರಮ ಪಡುತ್ತಾರೆ.

ಇನ್ನು ಸರ್ಕಾರ ಕೂಡಾ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ, ಮದುವೆಗಾಗಿ, ಉತ್ತಮ ಭವಿಷ್ಯ ರೂಪಿಸಲು ನೆರವಾಗುವ ಸಲುವಾಗಿ ಅನೇಕ ಯೋಜನೆಗಳನ್ನು ರೂಪಿಸುತ್ತಾ ಬಂದಿದೆ. ಆದರೆ, ಇದೀಗ ಬೆಳಕಿಗೆ ಬಂದಿರುವ ಪ್ರಕರಣ ಮಾನವ ಕುಲವನ್ನೇ ಬೆಚ್ಚಿ ಬೀಳಿಸುವಂತಿದೆ.

ಹೌದು, 45 ವರ್ಷದ ವ್ಯಕ್ತಿ 6 ವರ್ಷದ ಪುಟ್ಟ ಬಾಲಕಿಯನ್ನು ಮದುವೆಯಾಗಿದ್ದಾನೆ. ಮದುವೆ ಎನ್ನುವ ಪದದ ಅರ್ಥವೇ ತಿಳಿಯದ ಈ ಕಂದಮ್ಮನಿಗೆ ಮದುವೆ ಮಾಡಲಾಗಿದೆ. ಇನ್ನೂ ವಿಪರ್ಯಾಸವೆಂದರೆ ಈ ವ್ಯಕ್ತಿಗೆ ಇದು ಮೂರನೇ ಮದುವೆ. ಈ ವ್ಯಕ್ತಿಯ ಇಬ್ಬರು ಪತ್ನಿಯರು ಈತನ ಜೊತೆಯಲ್ಲಿಯೇ ಈತನ ಮನೆಯಲ್ಲಿಯೇ ಇದ್ದಾರೆ.

ಅಫಘಾನ್ ಮಾಧ್ಯಮ ಸಂಸ್ಥೆ Amu.tv ಪ್ರಕಾರ, ಇಡೀ ಪ್ರಕರಣವು ಮಾರ್ಜಾ ಜಿಲ್ಲೆಯಿಂದ ಬಂದಿದೆ. ವರದಿಯ ಪ್ರಕಾರ ಈ ವ್ಯಕ್ತಿ ಈ ಮಗುವನ್ನು ಮದುವೆಯಾಗುವುದಕ್ಕೆ ಹಣ ನೀಡಿದ್ದಾನೆ ಎನ್ನಲಾಗಿದೆ. ಈ ವಿಷಯ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡಿದೆ. ಇದಾದ ಬಳಿಕ ಮಧ್ಯ ಪ್ರವೇಶಿಸಿದ ತಾಲಿಬಾನ್ ಆಡಳಿತ ಮಧ್ಯಪ್ರವೇಶಿಸಿದ್ದು, ಆ ವ್ಯಕ್ತಿ ಮಗುವನ್ನು ಕರೆದುಕೊಂಡು ಹೋಗುವುದನ್ನು ತಡೆದಿದೆ. ಆದರೂ ಮಗುವಿಗೆ 9 ವರ್ಷ ವಯಸ್ಸಾದಾಗ ಆ ವ್ಯಕ್ತಿಯ ಜೊತೆಗೆ ಕರೆದುಕೊಂಡು ಹೋಗಬಹುದು ಎನ್ನಲಾಗಿದೆ.

ಇದರ ಹೊರತಾಗಿ, ಹುಡುಗಿಯ ತಂದೆ ಮತ್ತು ವರನನ್ನು ಬಂಧಿಸಲಾಗಿದೆ. ಆದರೆ ಇದುವರೆಗೂ ವ್ಯಕ್ತಿಯ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ವರದಿಯ ಪ್ರಕಾರ, ಹುಡುಗಿ ಪ್ರಸ್ತುತ ತನ್ನ ಪೋಷಕರೊಂದಿಗೆ ಇದ್ದಾಳೆ. ಈ ವಿವಾಹ ವ್ಯವಸ್ಥೆಯು ವಾಲ್ವಾರ್ ಎಂಬ ಸಾಂಪ್ರದಾಯಿಕ ಪದ್ಧತಿಯನ್ನು ಒಳಗೊಂಡಿತ್ತು, ಇದರಲ್ಲಿ ಹುಡುಗಿಯ ದೈಹಿಕ ನೋಟ, ಶಿಕ್ಷಣ ಮತ್ತು ಅಂದಾಜು ಮೌಲ್ಯವನ್ನು ಆಧರಿಸಿ ವಧುವಿನ ಬೆಲೆಯನ್ನು ನಿಗದಿಪಡಿಸಲಾಗುತ್ತದೆ.

ಮಾಧ್ಯಮ ವರದಿಗಳ ಪ್ರಕಾರ, 2021 ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ, ದೇಶದಲ್ಲಿ ಬಾಲ್ಯವಿವಾಹ ಪ್ರಕರಣಗಳು ವೇಗವಾಗಿ ಹೆಚ್ಚಾಗಿವೆ. ಯುಎನ್ ಮಹಿಳೆಯರ ವರದಿಯ ಪ್ರಕಾರ, ಬಾಲ್ಯವಿವಾಹವು ಶೇಕಡಾ 25 ರಷ್ಟು ಹೆಚ್ಚಾಗಿದೆ. ಇದರ ಹೊರತಾಗಿ, ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಜನನದ ಪ್ರಮಾಣವು 45% ರಷ್ಟು ಹೆಚ್ಚಾಗಿದೆ.


Spread the love
Share:

administrator

Leave a Reply

Your email address will not be published. Required fields are marked *