ಕೆಎಸ್‌ಆರ್‌ಟಿಸಿ ಟಿಕೆಟ್ ದರದಲ್ಲಿ ಗೊಂದಲ: ಒಂದೇ ದಿನಕ್ಕೆ ₹8 ಏರಿಕೆ!

ಸುಳ್ಯ: ಒಂದೇ ದಿನದ ಅಂತರದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಟಿಕೆಟ್ ದರದಲ್ಲಿ ವ್ಯತ್ಯಾಸ ಕಂಡು ಬಂದು, ಗೊಂದಲ ಸೃಷ್ಟಿಯಾದ ಘಟನೆ ಪಟ್ಟಣದಲ್ಲಿ ನಡೆದಿದೆ. ವ್ಯಕ್ತಿಯೊಬ್ಬರು ಜು.9 ರಂದು ಕಲ್ಲುಗುಂಡಿ/ಸಂಪಾಜೆಯಿಂದ ಪುತ್ತೂರಿಗೆ ಪ್ರಯಾಣಿಸಿದ್ದು ಟಿಕೆಟ್ ದರ 76 ರೂ.

ಪಾವತಿಸಿದ್ದರು. ಅದೇ ಬಸ್ಸಲ್ಲಿ ಅದೇ ಸಮಯಕ್ಕೆ ಮರುದಿನ (ಜು.10)ಕಲ್ಲುಗುಂಡಿ/ಸಂಪಾಜೆಯಿಂದ ಪುತ್ತೂರಿಗೆ ಪ್ರಯಾಣಿಸುವಾಗ 84 ರೂ. ಟಿಕೆಟ್ ಪಡೆಯಬೇಕಾಯಿತು.
ಒಂದು ದಿನದ ಅಂತರದಲ್ಲಿ ಟಿಕೆಟ್‌ದರದಲ್ಲಿ ವ್ಯತ್ಯಾಸ ಕಂಡುಬಂದಿರುವ ಬಗ್ಗೆ ಪ್ರಯಾಣಿಕ ಗೊಂದಲ ವ್ಯಕ್ತಪಡಿಸಿದ್ದು, ಯಾವ ಕಾರಣಕ್ಕಾಗಿ ಎಂಬುದು ಅವರ ಪ್ರಶ್ನೆ. ಈ ಬಗ್ಗೆ ದೂರು ವಿಭಾಗಕ್ಕೆ ರವಾನಿಸಲಾಗಿದ್ದು, ಪರಿಶೀಲಿಸುವ ಉತ್ತರ ಸಿಕ್ಕಿದೆ. ಘಟನೆ ಬಗ್ಗೆ ಸುಳ್ಯ ಗ್ಯಾರಂಟಿ ಸಮಿತಿ ಅಧ್ಯಕ್ಷರು ಅಧಿಕಾರಿಗಳ ಗಮನಕ್ಕೆ ತಂದಿದ್ದು, ನಿರ್ವಾಹಕರು ಹೊಸಬರಾಗಿದ್ದು, ತಪ್ಪಾಗಿದೆ. ಹೆಚ್ಚುವರಿ ಹಣ ವಾಪಸು ಸಿಗುವ ಭರವಸೆ ಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ.
