ಕರ್ನಾಟಕದಲ್ಲಿ ಹೆಚ್ಚಿದ ಹೃದಯಾಘಾತ ಪ್ರಕರಣಗಳು: ಒಂದೇ ದಿನ ಐವರು ಬಲಿ!

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ನಿನ್ನೆ ಒಂದೇ ದಿನ ಮತ್ತೆ ಹೃದಯಾಘಾತಕ್ಕೆ ಐವರು ಬಲಿಯಾಗಿದ್ದಾರೆ.

ರಾಜ್ಯಾದ್ಯಂತ ಹೃದಯಾಘಾತಕ್ಕೆ ರಾಜ್ಯದಲ್ಲಿ ಐವರು ಸಾವನ್ನಪ್ಪಿದ್ದಾರೆ. ಕಲಬುರಗಿಯಲ್ಲಿ ಕಾಲೇಜೊಂದರ 55 ವರ್ಷದ ಉಪಪ್ರಾಂಶುಪಾಲರೊಬ್ಬರು ಬೆಳಗ್ಗೆ ವಾಕಿಂಗ್ ಮುಗಿಸಿ ಬಂದ ಬಳಿಕ ಹೃದಯಾಘಾತಕ್ಕೆ ಬಲಿ ಆಗಿದ್ದಾರೆ.
ಬಳ್ಳಾರಿ ಜಿಲ್ಲೆಯ ಕಂಪ್ಲಿಯ 30 ವರ್ಷದ ಕೃಷಿ ಉದ್ಯಮಿಯೊಬ್ಬರು ಎದೆ ನೋವು ಕಾಣಿಸಿದ ಸಲುವಾಗಿ ಆಸ್ಪತ್ರೆಗೆ ತೆರಳಿದಾಗ ಮೆಟ್ಟಿಲು ಹತ್ತುವಾಗ ಕುಸಿದುಬಿದ್ದು ಮೃತಪಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿ.ರೋಡ್ನಲ್ಲಿ 27 ವರ್ಷದ ರಾಜಸ್ಥಾನ ಮೂಲದ ಅಂಗಡಿಯವರು ಬುಧವಾರ ರಾತ್ರಿ ಹೃದಯಾಘಾತಕ್ಕೆ ಮೃತಪಟ್ಟಿದ್ದಾರೆ.
ಮೈಸೂರಿನ ಚಾಮರಾಜ ಮೊಹಲ್ಲಾದ ನಿವಾಸಿ 29 ವರ್ಷದ ಯುವಕ ಸಹ ಬುಧವಾರ ತಡರಾತ್ರಿ ಬಲಿಯಾಗಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿರುವ ಗಾಣಗಾಪುರ ಕ್ಷೇತ್ರಕ್ಕೆ ಗುರುಪೂರ್ಣಿಮೆ ನಿಮಿತ್ತ ಬಂದಿದ್ದ ಭಕ್ತರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
