ಪಾಕಿಸ್ತಾನ ನಟಿ ಹುಮೈರಾ ಆಸ್ಗರ್ ಅಲಿ ಸಾವು: 2 ವಾರಗಳಿಂದ ಪ್ಲ್ಯಾಟ್ ನಲ್ಲಿ ಕೊಳೆಯುತ್ತಿದ್ದ ಶವ ಪತ್ತೆ


ಕರಾಚಿ : ಪಾಕಿಸ್ತಾನದ ಖ್ಯಾತ ನಟಿ ಮಾಡೆಲ್ ಹುಮೈರಾ ಆಸ್ಗರ್ ಅಲಿ ಅವರ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪ್ಲ್ಯಾಟ್ ನಲ್ಲಿ ಪತ್ತೆಯಾಗಿದೆ. ಹುಮೈರಾ ಅಸ್ಗರ್ ಆಲಿ ಮೃತಪಟ್ಟು 2 ವಾರ ಕಳೆದಿದೆ. ಆಕೆಯ ಮೃತದೇಹ ಕೊಳೆತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಕಳೆದ 2 ವಾರದಿಂದ ಹುಮೈರ್ ಮೃತಪಟ್ಟಿರುವ ಕುರಿತು ಗೊತ್ತೆ ಆಗಿಲ್ಲ. ಆಕೆಯ ಆಪ್ತರು, ಕುಟುಂಬಸ್ಥರು ನಟಿ ಸ್ಪಂದನೆ ಇಲ್ಲದ ಕುರಿತು ಯಾವುದೇ ಮಾಹಿತಿಯನ್ನು ಪೊಲೀಸರಿಗೆ ನೀಡಿಲ್ಲ.
ಬಾಡಿಗೆ ಪ್ಲ್ಯಾಟ್ ನಲ್ಲಿ ವಾಸವಿದ್ದ ನಟಿ ಹುಮೈರಾ ಕಳೆದ 9 ತಿಂಗಳಿನಿಂದ ಬಾಡಿಗೆ ಪಾವತಿಸಿರಲಿಲ್ಲ. ಈ ಹಿನ್ನಲೆ ಮನೆ ಮಾಲೀಕ ಆಕೆಯ ಪ್ಲ್ಯಾಟ್ ಖಾಲಿ ಮಾಡಲು ಕೋರ್ಟ್ ಮೊರೆ ಹೋಗಿದ್ದರು. ಈ ಹಿನ್ನಲೆ ಕೋರ್ಟ್ ಆದೇಶದ ಜೊತೆ ಪೊಲೀಸರು ಪ್ಲ್ಯಾಟ್ ನ್ನು ತೆರೆದಾಗ ನಟಿ ಮೃತ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ. ಕೆಲವು ಸ್ಥಳೀಯ ಮಾಧ್ಯಮಗಳ ಪ್ರಕಾರ ನಟಿ ಸಾವನಪ್ಪಿ ಹಲವು ತಿಂಗಳುಗಳೇ ಕಳೆದಿದೆ ಎನ್ನಲಾಗಿದೆ.
ನಟಿ ಸಾಮಾಜಿಕ ಜಾಲತಾಣದಲ್ಲಿ ಅಕ್ಟೋಬರ್ 2024ರ ನಂತರ ಯಾವುದೇ ಪೋಸ್ಟ್ ಗಳನ್ನು ಹಾಕಿರಲಿಲ್ಲ ಎಂದು ತಿಳಿದು ಬಂದಿದೆ. ಅಲ್ಲದೆ ಆಕೆಯ ನೆರೆಹೊರೆಯವರು ಕೂಡ ಆಕೆಯನ್ನು ಅಕ್ಟೋಬರ್ ನಂತರ ನಾವು ನೋಡಿಲ್ಲ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. ಕರೆ ವಿವರ ದಾಖಲೆ (CDR) ಪ್ರಕಾರ ಕೊನೆಯ ಕರೆಯನ್ನು ಅಕ್ಟೋಬರ್ 2024 ರಲ್ಲಿ ಮಾಡಲಾಗಿದೆ ಅರಬ್ ನ್ಯೂಸ್ ವೆಬ್ ಸೈಟ್ ವರದಿ ಮಾಡಿದೆ.
ಅಲಿಯವರ ಕುಟುಂಬವು ಶವವನ್ನು ಪಡೆಯಲು ನಿರಾಕರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ತಮ್ಮ ಸಂಬಂಧಿಕರಿಂದ ದೂರವಾಗಿದ್ದಾರೆಯೇ ಅಥವಾ ಅವರು ಆಕೆಯ ಶವವನ್ನು ಸ್ವೀಕರಿಸಲು ನಿರಾಕರಿಸಿದ್ದಕ್ಕೆ ನಿಖರವಾದ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ.
2014 ರಲ್ಲಿ ವೀತ್ ಮಿಸ್ ಸೂಪರ್ ಮಾಡೆಲ್ ಗೆದ್ದ ನಂತರ ಮತ್ತು 2022 ರಲ್ಲಿ ರಿಯಾಲಿಟಿ ಶೋ ತಮಾಶಾ ಘರ್ನಲ್ಲಿ ಕಾಣಿಸಿಕೊಂಡ ನಂತರ ಅಲಿ ಖ್ಯಾತಿಗೆ ಏರಿದರು.
ಅವರು ಜಸ್ಟ್ ಮ್ಯಾರೀಡ್, ಎಹ್ಸಾನ್ ಫರಾಮೋಶ್, ಗುರು ಮತ್ತು ಚಲ್ ದಿಲ್ ಮೇರೆ ಮುಂತಾದ ದೂರದರ್ಶನ ನಾಟಕಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ, ಅವರು 2015 ರ ಆಕ್ಷನ್-ಥ್ರಿಲ್ಲರ್ ಜಲೈಬೀ ಮತ್ತು ನಂತರ 2021 ರಲ್ಲಿ ಲವ್ ವ್ಯಾಕ್ಸಿನ್ ನಲ್ಲಿ ಕಾಣಿಸಿಕೊಂಡರು.
