ಬಿ.ಸಿ.ರೋಡ್ ಟೈಲರಿಂಗ್ ವೃತ್ತಿಯ ಮಹಿಳೆ ನಾಪತ್ತೆ ಪ್ರಕರಣ ಬಂಟ್ವಾಳ ನಗರ ಠಾಣೆಗೆ ವರ್ಗಾವಣೆ

ಬಂಟ್ವಾಳ: ಬಿ.ಸಿ.ರೋಡಿನ ಬಟ್ಟೆ ಅಂಗಡಿಯೊಂದರಲ್ಲಿ ಟೈಲರಿಂಗ್ ವೃತ್ತಿ ನಿರ್ವಹಿಸುತ್ತಿದ್ದ ಮಹಿಳೆ ಕಳೆದ ಮೇ 22ರಿಂದ ನಾಪತ್ತೆಯಾಗಿದ್ದು, ಇದೀಗ ಆಕೆಯ ನಾಪತ್ತೆಯ ಪ್ರಕರಣ ಬಂಟ್ವಾಳ ನಗರ ಠಾಣೆಗೆ ವರ್ಗಾವಣೆಗೊಂಡಿದೆ.

ಮೂಡುಬಿದಿರೆಯ ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆ ಮನೆ ನಿವಾಸಿ ವಸಂತ ನಾಗಣ್ಣ ಬಂಗೇರ ಅವರ ಪುತ್ರಿ ಸಾಧನಾ (24) ನಾಪತ್ತೆಯಾದ ಮಹಿಳೆ.
ಆಕೆ ಬಿ.ಸಿ.ರೋಡಿನ ಬಟ್ಟೆ ಅಂಗಡಿಯಲ್ಲಿ ಟೈಲರಿಂಗ್ ವೃತ್ತಿ ನಿರ್ವಹಿಸುತ್ತಿದ್ದು, ತಂದೆಯ ಮನೆ ಹಾಗೂ ಕಾರ್ಕಳ ಬೇಲಾಡಿಯ ಗಂಡನ ಮನೆಗೆ ತೆರಳುತ್ತಿದ್ದಳು.
ಈಕೆ ಮೇ 22ರಂದು ಸಂಜೆಯಿಂದ ನಾಪತ್ತೆಯಾಗಿದ್ದು, ತಂದೆಯ ಮನೆ, ಗಂಡನ ಮನೆಗೆ ಹೋಗದೇ ಇದ್ದು, ಬಳಿಕ ಕೆಲಸಕ್ಕೂ ಬಂದಿಲ್ಲ. ಆಕೆಯ ನಾಪತ್ತೆಯ ಕುರಿತು ಜೂ. 6ರಂದು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಸ್ತುತ ಅದು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದೆ.
