ತುಂಡು ತಂತಿ ಸ್ಪರ್ಶ – ವಿದ್ಯುತ್ ಶಾಕ್‌ಗೆ ವ್ಯಕ್ತಿ ಸಾವು

ಸುಳ್ಯ : ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯಿಂದ ವಿದ್ಯುತ್ ಶಾಕ್‌ಗೊಳಗಾಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕೊಡಿಯಾಲ ಗ್ರಾಮದ ಕಲ್ಲಪಣೆ ಎಂಬಲ್ಲಿ ಬುಧವಾರ ಸಂಭವಿಸಿದೆ.

ಕಲ್ಲಪಣೆಯ ದಿವಾಕರ ಆಚಾರ್ಯ (45) ಮೃತರು. ಮನೆಗೆ ಹೋಗುವ ದಾರಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಾಗಿ ವಿದ್ಯುತ್ ಶಾಕ್‌ಗೊಳಗಾಗಿ ತಿಳಿದುಬಂದಿದೆ. ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
