ಬೆಂಗಳೂರು ಕಿಟ್ಟಿ ಪಾರ್ಟಿ ಮೋಸ: ಶ್ರೀಮಂತ ಮಹಿಳೆಯರಿಗೆ ಸಿಎಂ, ಡಿಸಿಎಂ ಹೆಸ್ರಲ್ಲಿ ಕೋಟಿ ಕೋಟಿ ವಂಚಿಸಿದ ಸವಿತಾ ಬಂಧನ

ಬೆಂಗಳೂರು: ನಗರದಲ್ಲಿ ಕಿಟ್ಟಿ ಪಾರ್ಟಿಯಲ್ಲಿ ಪರಿಚಯವಾಗಿ ಸ್ನೇಹಿತೆಯರಿಗೆ ಕೋಟಿ ಕೋಟಿ ವಂಚನೆ ಮಾಡಿದ ಆರೋಪದಡಿ ಮಹಿಳೆಯನ್ನು ಬಂಧಿಸಲಾಗಿದೆ.

20ಕ್ಕೂ ಹೆಚ್ಚು ಮಹಿಳೆಯರಿಗೆ 30 ಕೂಟಿ ರೂ.ಗಿಂತಲೂ ಹೆಚ್ಚು ವಂಚನೆ ಮಾಡಿದ್ದ ಆರೋಪದಡಿ ಬಸವೇಶ್ವರನಗರ ಪೊಲೀಸರಿಂದ ಸವಿತಾ ಎಂಬಾಕೆಯ ಬಂಧಿಸಲಾಗಿದೆ.ಕಿಟ್ಟಿ ಪಾರ್ಟಿ ಹೆಸರಲ್ಲಿ ಶ್ರೀಮಂತ ಮಹಿಳೆಯರನ್ನ ಪರಿಚಯ ಮಾಡಿಕೊಂಡಿದ್ದ ಸವಿತಾ ತನಗೆ ಹಲವು ರಾಜಕಾರಣಿಗಳು ಗೊತ್ತೆಂದು ಹೇಳಿಕೊಳ್ಳುತ್ತಿದ್ದಳು.

ಸಿಎಂ, ಡಿಸಿಎಂ, ಎಂಬಿ ಪಾಟಿಲ್ ಹೆಸರೇಳಿ ಗಾಳ ಹಾಕ್ತಿದ್ದ ಸವಿತಾ.. ನಿಧಾನವಾಗಿ ಹೂಡಿಕೆ ನೆಪದಲ್ಲಿ ಹಣ ಪಡೆದುಕೊಳ್ತಿದ್ದಳು.

ಅಮೆರಿಕದಿಂದ (USA) ಕಮ್ಮಿ ಬೆಲೆಗೆ ಚಿನ್ನ ತರಿಸಿಕೊಡುವುದಾಗಿ ವಂಚನೆ ಮಾಡಿದ್ದಾಳೆ. ಒಬ್ಬರಿಂದ ತಲಾ 50 ಲಕ್ಷದಿಂದ ಎರಡೂವರೆ ಕೋಟಿ ಹಣ ಪಡೆದು ವಾಪಸ್ ಹಣ ನೀಡದೇ ನೆಪ ಹೇಳಿ ತಪ್ಪಿಸಿಕೊಳ್ತಿದ್ದಳು. ಈ ಹಿಂದೆ ಗೋವಿಂದರಾಜನಗರ ಠಾಣೆಯಲ್ಲಿ ಕೇಸ್ ದಾಖಲಾಗಿ ಬಂಧನವಾಗಿ ಬೇಲ್ ಮೇಲೆ ಹೊರಗಿದ್ದ ಸವಿತಾ ಮತ್ತದೇ ಚಾಳಿ ಮುಂದುವರೆಸಿ ಈಗ ಬಸವೇಶ್ವರ ನಗರ ಪೊಲೀಸರ ಅತಿಥಿ ಆಗಿದ್ದಾಳೆ
